SUBHASHITA: ಅಸ್ಥಿರಂ ಜೀವಿತಂ ಲೋಕೇ (ಯಾವುದು ಶಾಶ್ವತ?) |ASTHIRAM JEEVITAM LOKE SHUBHASHITA IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


अस्थिरं जीवितं लोके , अस्थिरे धन -यौव्वने |

अस्थिरा पुत्र दाराश्च , धर्म - कीर्तिद्वयं स्ठिरम् ||

 

ಅಸ್ಥಿರಂ ಜೀವಿತಂ ಲೋಕೇ, ಅಸ್ಥಿರೇ ಧನ- ಯೌವ್ವನೇ।

ಅಸ್ಥಿರಾ ಪುತ್ರ ದಾರಾಶ್ಚ ಧರ್ಮ-ಕೀರ್ತಿದ್ವಯ೦ ಸ್ಥಿರಮ್॥

 

(दारा/ದಾರಾ= ಪತ್ನಿ)

 

ಈ ಲೋಕದಲ್ಲಿ ಧನ,ಯೌವನ,ಜೀವನ,ಪತ್ನಿ,ಪುತ್ರ ರೆಲ್ಲರೂ ಅಶಾಶ್ವತ. ಧರ್ಮ ಮತ್ತು ಕೀರ್ತಿಗಳೆರಡೇ ಶಾಶ್ವತವಾಗಿ ಉಳಿಯುವಂತಹುದು.


Life is unstable in this world, wealth and youth are unstable
Sons and wives are unstable, and righteousness and fame are both stable

......................................................................................................................................


ಸಾವಿರದಳ ಕಮಲಿನಿ: ದೇಶಭಕ್ತಿಗೀತೆ| SAVIRA DALA KAMALINI :PATRITIC SONG LYRICS IN KANNADA|

 ರಚನೆ: ಹೆಚ್ . ಎಸ್.ವೆಂಕಟೇಶಮೂರ್ತಿ

ಹಾಡಲು ಕಲಿಯಿರಿ(CLICK HERE TO LEARN THIS SONG)

ಸಾವಿರದಳ ಕಮಲಿನಿ ಓ ಭಾರತಿ

ತಾಯೆ ನಿನಗೆ ಇದೋ ಜೀವದಾರತಿ||

  

ನೂರು ನುಡಿಗಳಿಂದ ಕಂದರನ್ನು ಕರೆವವಾಗ್ವಿದೆ

ಹಲವು ರೀತಿ ಹಾಡಿ ಹಾಲ ನೂಡಿ ಪೊರೆವ ಶಾರದೆ॥

ಕೈಯ ಹಿಡಿದು ಅಡಿಯನಿಡಿಸಿ ಮುನ್ನಡೆಸುವ ಧಾರಿಣಿ ॥

ತೊದಲ ನುಡಿಸಿ ಕೇಳಿ ಹರ್ಷ ತಾಳಿ ನಲಿವ ತಾರಿಣಿ…||1||

 

 ತಪ್ಪಿದಾಗ ಮಕ್ಕಳು ರಣಚಂಡಿಯಾಗಿ ಖಂಡಿಸಿ

ಮತ್ತೆ ಕರೆದು ಲಲ್ಲೆಗರೆದು ಕಣ್ಣನೊರೆಸಿ ಮುದ್ದಿಸಿ ॥

ನಮ್ಮ ಸೋದರತ್ವವನ್ನು ನಮಗೆ ಮನನಗೊಳಿಸುತ ॥

ಮನೆಯ ನಿಲ್ಲಿಸಮ್ಮ ತಾಯೆ ನಮ್ಮನೆಲ್ಲ ಒಲಿಸುತ…||2||

 

ಹಲವು ತಾರೆಯಿಂದ ಒಂದು ಬೆಳಕಸೂರೆ ಮಾಡಿದವಳೆ

ಹಲವು ಧಾರೆಯಿಂದ ಒಂದು ವರ್ಷಗೀತೆ ಹಾಡಿದವಳೆ ॥

ತೆಕ್ಕೆ ಬಿಗಿದು ತಾಯೇ ..ಇಂದು ನಮ್ಮನೊಂದುಗೂಡಿಸೆ ॥

ಹಲವಿದ್ದರು ಒಲವೊಂದೆ ಎಂಬ ತತ್ವ ಮೂಡಿಸೆ….||3||

....................................................

Also See:

PATRITOIC SONG LYRICS:ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ|BHOGA METTI TYAGA MEREDA|

SUBHASHITA: ನಮಂತಿ ಫಲಿತಾ: ವೃಕ್ಷಾ: (ವಿನಮ್ರತೆ)| SUBHASHITA NAMANTI PHALITA VRAKSHA WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


नमन्ति फलिता: व्र्क्षाः नमन्ति सुजनाः बुधाः |

शुष्ककाष्टानि  मूर्खाश्च च्छिन्द्यन्ते  न नमन्ति वै ||

 

ನಮಂತಿ ಫಲಿತಾ: ವೃಕ್ಷಾ: ನಮಂತಿ ಸುಜನಾ: ಬುಧಾ: ।

ಶುಷ್ಕಕಾಷ್ಟಾನಿ ಮೂರ್ಖಾಶ್ಚ ಛಿನ್ದ್ಯನ್ತೇ ನ ನಮಂತಿ ವೈ॥

  

ಹೇಗೆ ಫಲಭರಿತವಾದ ಹಣ್ಣಿನ ಮರದ ಕೊಂಬೆಗಳು ಬಾಗಿರುತ್ತವೆಯೋ ಹಾಗೆಯೇ ಉದಾತ್ತ ಜನರು, ಬುದ್ಧಿವಂತರು, ಪಂಡಿತರು ಕೂಡ ಜ್ಞಾನ ಬೆಳೆದಂತೆ ವಿನಮ್ರತೆ ಯನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಒಣಗಿದ ಕಟ್ಟಿಗೆ ಹಾಗೂ ಮೂರ್ಖರು ಎಂದು ತಲೆ ಬಾಗುವುದಿಲ್ಲ. ಹೇಗೆ ಒಣಗಿದ ಕಟ್ಟಿಗೆಯನ್ನು ಬಾಗಿಸಬೇಕಾದರೆ ಅದನ್ನು ತುಂಡು ಮಾಡಬೇಕೋ ಹಾಗೆಯೇ ಮೂರ್ಖರನ್ನು ಸರಿದಾರಿಗೆ ತರಬೇಕಾದರೆ ಶಿಕ್ಷೆಯೇ ಮುಖ್ಯ ಮಾರ್ಗವಾಗಿದೆ.

.....................................................................................................................................


SUBHASHITA:ಕನ್ಯಾ ವರಯತೇ ರೂಪಂ (ದೃಷ್ಟಿ ಬೇಧ)| KANYA VARAYATE ROOPAM WITH MEANING

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA


कन्या वरयेते रूपं माता वित्तं पिता श्रुतम् |

बान्धवाः कुलमिच्छन्ति म्र्ष्टान्नमितरे जनाः ||

 

ಕನ್ಯಾ ವರಯತೇ ರೂಪಂ ಮಾತಾ ವಿತ್ತಂ ಪಿತಾ ಶುೃತಂ|

ಬಾಂಧವಾಃ ಕುಲಮಿಚ್ಛಂತಿ  ಮೃಷ್ಟಾನ್ನಮಿತರೇ ಜನಾ: ||

 

ವರನನ್ನು ಆರಿಸುವಾಗ ,ಕನ್ಯೆಯು ಅವನ ರೂಪ, ಎತ್ತರ, ಬಣ್ಣ ಇತ್ಯಾದಿ ಬಾಹ್ಯ ಸೌಂದರ್ಯವನ್ನು ನೋಡಿ ಇಷ್ಟಪಡುತ್ತಾಳೆ.ಹುಡುಗಿಯ ತಾಯಿಯು ಅವನ ಸಂಪತ್ತನ್ನು ನೋಡುತ್ತಾಳೆ. ತಂದೆಯು ವರನ ವಿದ್ಯಾಭ್ಯಾಸ ಹಾಗೂ ಯೋಗ್ಯತೆಯನ್ನು ನೋಡುತ್ತಾನೆ. ಬಂಧುಗಳು ವರನ ಕುಲ ವಂಶ ಹಾಗು ಜಾತಿಗಳ ಬಗ್ಗೆ ಗಮನ ಹರಿಸುತ್ತಾರೆ. ಮದುವೆಗೆ ಬಂದ ಸಂಬಂಧಿಕರು, ಸಭಿಕರು, ಸ್ನೇಹಿತರಿಗೆ ಬೇಕಾಗಿರುವುದು ಒಳ್ಳೆಯ ಭೋಜನ.

 "ಎಲ್ಲರಿಗೂ ಅವರವರ ದೃಷ್ಟಿಯಲ್ಲಿ ಅವರವರು ಸರಿ."

..............................................................................................................


SUBHASHITA: ದೂರತ: ಪರ್ವತೋ ರಮ್ಯ:| SUBHASHITA DOORATAH PARVATO RAMYA WITH KANNADA MEANING

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


दूरतः पर्वतॊ रम्यः बन्धू रम्यः परस्परम् |

युद्धस्य च कथा रम्या त्रीणि रम्याणि दूरतः ||

 

ದೂರತ: ಪರ್ವತೋ ರಮ್ಯ: ಬಂಧೂ ರಮ್ಯ: ಪರಸ್ಪರಮ್।

ಯುದ್ಢಸ್ಯ ಚ ಕಥಾ ರಮ್ಯಾ ತ್ರೀಣಿ ರಮ್ಯಾಣಿ ದೂರತ:॥

 

ದೂರದಿಂದ ನೋಡಿದಾಗ  ಪರ್ವತವು  ಸುಂದರವಾಗಿ ಕಾಣಿಸುತ್ತದೆ. ದೂರದಿಂದ ನೋಡಿದಾಗ ಬಂಧುಗಳು ಪರಸ್ಪರ ಅನ್ಯೋನ್ಯವಾಗಿ ಕಾಣಿಸುತ್ತಾರೆ. ದೂರದಿಂದ ನೋಡಿದಾಗ ಕೇಳಿದಾಗ ಯುದ್ಧದ ದೃಶ್ಯವೂ ಸುಂದರವಾಗಿ ಕಾಣಿಸುತ್ತದೆ ಆದರೆ ಇವುಗಳನ್ನು ಹತ್ತಿರದಿಂದ ನೇರವಾಗಿ ನೋಡಿದರಷ್ಟೇ ಅವುಗಳ ಭೀಕರತೆ ಅರಿವಾಗುತ್ತದೆ. ದೂರದಿಂದ ನೋಡಿರುವುದೆಲ್ಲ ರಮ್ಯವಾಗಿ ಇರುವುದಿಲ್ಲ, ಹತ್ತಿರದಿಂದ ನೋಡಿದಾಗಲೇ ಸತ್ಯ ಗೋಚರವಾಗುತ್ತದೆ

.....................................................................................................


SUBHASHITA: ಕರ್ತಾ ಕಾರಯಿತಾ ಚೈವ(ಸಮಭಾಗಿಗಳು) KARTA KARYITA CHAIVA WITH MEANING IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


कर्ता कारयिता चैव, प्रेरकाश्चानुमोदकः |

सुकृते  दुष्कृते चैव चत्वारः समभागिनः ||

 

ಕರ್ತಾ ಕಾರಯಿತಾ ಚೈವ ಪ್ರೇರಕಾಶ್ಚಾನುಮೋದಕ:।

ಸುಕೃತೆ ದುಷ್ಕೃತೆ ಚೈವ ಚತ್ವಾರ: ಸಮಭಾಗಿನ:॥

 

 ಮನುಷ್ಯ ತಾನು ಮಾಡುವ ಸುಕೃತ/ ದುಷ್ಕೃತ್ಯ ಗಳಿಗೆ ತಾನೊಬ್ಬನೇ ಹೊಣೆಗಾರನಾಗುವುದಿಲ್ಲ. ಅವುಗಳ ಫಲಕ್ಕೆ ನಾಲ್ವರು ಸಮಭಾಗಿಗಳು:

ಕರ್ತೃ: ಕೆಲಸ ಮಾಡಿದವನು,ಕಾರಯಿತ: ಕೆಲಸವನ್ನು ಮಾಡಿಸಿದನು, ಪ್ರೇರಕ: ಪ್ರೇರೇಪಿಸಿದವನು ಹಾಗೂ ಅನುಮೋದಕ: ಮಾಡಿದ ಕೆಲಸವನ್ನು ಮೆಚ್ಚಿದವನು.

 ಆದ್ದರಿಂದ ನಾವು ಯಾವಾಗಲೂ ಪುಣ್ಯ ಕಾರ್ಯಗಳನ್ನು ಮಾಡಬೇಕು ,ಮಾಡಿಸಬೇಕು, ಪ್ರೇರೇಪಿಸಬೇಕು ಹಾಗೂ ಅನುಮೋದಿಸಬೇಕು.

.............................................................................................................

Also See:

ಕಮಲದ ಮೊಗದೋಳೆ | Kamalada Mogadole Song Lyrics in Kannada

SUBHASHITAS(ಸುಭಾಷಿತಗಳು -ಅರ್ಥ).



SUBHASHITA: ಪುಣ್ಯಸ್ಯ ಫಲಮಿಚ್ಛಂತಿ |SUBHASHITA 'PUNYASYA PHALAMICHANTI' WITH KANNADA MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


पुण्यस्य फलमिच्छन्ति पुण्यम् नेच्छन्ति  मानवाः |

न पाप फलमिच्छन्ति पापं कुर्वन्ति यत्नतः ||

 

ಪುಣ್ಯಸ್ಯ ಫಲಮಿಚ್ಛಂತಿ ಪುಣ್ಯಂ ನೇಚ್ಛಂತಿ ಮಾನವಾಃ |

ನ ಪಾಪ ಫಲಮಿಚ್ಛಂತಿ ಪಾಪಂ ಕುರ್ವಂತಿ ಯತ್ನತಃ ||

 

Punyasya Phalamichchanti Punyam Nechchanti Manavah |

na papa phalamichanti papam kurvanti yatnatah ||

 

ಮನುಷ್ಯರು ಪುಣ್ಯಕಾರ್ಯದ ಫಲವನ್ನು ಅನುಭವಿಸಲು ಇಚ್ಛಿಸುತ್ತಾರೆ,ಆದರೆ ಪುಣ್ಯಕಾರ್ಯಗಳನ್ನು ಮಾಡಲು ಇಚ್ಛಿಸುವುದಿಲ್ಲ. ಹಾಗೆಯೇ ಪಾಪಕಾರ್ಯಗಳ ಫಲವನ್ನು ಅನುಭವಿಸಲು ಇಚ್ಛಿಸುವುದಿಲ್ಲ ಆದರೆ ಪಾಪಕಾರ್ಯಗಳನ್ನು ಪ್ರಯತ್ನಪಟ್ಟು ಮಾಡುತ್ತಲೇ ಇರುತ್ತಾರೆ.

.................................................................................................


ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | Lyrics |ಹೆಳವನಕಟ್ಟೆ ಗಿರಿಯಮ್ಮ | maleya dayamaado shree ranga | helavana katte giriyamma

  ಹಾಡಲು ಕಲಿಯಿರಿ(CLICK HERE TO LEARN THIS SONG) ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | ಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬ...