ರಚನೆ: ಹೆಚ್ . ಎಸ್.ವೆಂಕಟೇಶಮೂರ್ತಿ
ಹಾಡಲು ಕಲಿಯಿರಿ(CLICK HERE TO LEARN THIS SONG)
ಸಾವಿರದಳ ಕಮಲಿನಿ
ಓ ಭಾರತಿ
ತಾಯೆ ನಿನಗೆ
ಇದೋ ಜೀವದಾರತಿ||
ನೂರು ನುಡಿಗಳಿಂದ
ಕಂದರನ್ನು ಕರೆವವಾಗ್ವಿದೆ
ಹಲವು ರೀತಿ
ಹಾಡಿ ಹಾಲ
ನೂಡಿ ಪೊರೆವ
ಶಾರದೆ॥
ಕೈಯ ಹಿಡಿದು
ಅಡಿಯನಿಡಿಸಿ ಮುನ್ನಡೆಸುವ
ಧಾರಿಣಿ ॥
ತೊದಲ ನುಡಿಸಿ
ಕೇಳಿ ಹರ್ಷ
ತಾಳಿ ನಲಿವ
ತಾರಿಣಿ…||1||
ತಪ್ಪಿದಾಗ ಮಕ್ಕಳು ರಣಚಂಡಿಯಾಗಿ ಖಂಡಿಸಿ
ಮತ್ತೆ ಕರೆದು
ಲಲ್ಲೆಗರೆದು ಕಣ್ಣನೊರೆಸಿ
ಮುದ್ದಿಸಿ ॥
ನಮ್ಮ ಸೋದರತ್ವವನ್ನು
ನಮಗೆ ಮನನಗೊಳಿಸುತ
॥
ಮನೆಯ ನಿಲ್ಲಿಸಮ್ಮ
ತಾಯೆ ನಮ್ಮನೆಲ್ಲ
ಒಲಿಸುತ…||2||
ಹಲವು ತಾರೆಯಿಂದ
ಒಂದು ಬೆಳಕಸೂರೆ
ಮಾಡಿದವಳೆ
ಹಲವು ಧಾರೆಯಿಂದ
ಒಂದು ವರ್ಷಗೀತೆ
ಹಾಡಿದವಳೆ ॥
ತೆಕ್ಕೆ ಬಿಗಿದು
ತಾಯೇ ..ಇಂದು
ನಮ್ಮನೊಂದುಗೂಡಿಸೆ ॥
ಹಲವಿದ್ದರು ಒಲವೊಂದೆ ಎಂಬ ತತ್ವ ಮೂಡಿಸೆ….||3||
....................................................
Also See:
PATRITOIC SONG LYRICS:ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ|BHOGA METTI TYAGA MEREDA|
No comments:
Post a Comment