ತವರೂರ ಮನೆ ನೋಡ ಬಂದೆ KANNADA FOLK SONG LYRICS |TAVAROORA MANE NODA BANDE

 

ತವರೂರ ಮನೆ ನೋಡ ಬಂದೆ
ತಾಯಿ ನೆನಪಾಗಿ ಕಣ್ಣೀರ ತಂದೆ|


ಹತ್ತು ಹದಿನಾಲ್ಕು ವರುಷಗಳ ಹಿಂದೆ
ಹೆತ್ತ ತಾಯಿ ತಂದೆ ಪ್ರೀತಿಹಿಂದೆ

ಮುತ್ತಿನಂತೆ ಜೋಪಾನವಾಗಿ ಬಾಳಿದೆ

ಅದು ಎತ್ತ ಹೋದರೂ ಕನಸಾಗಿದೆ ||

ಬಾಗಿಲ ಮುಂದೆ ರಂಗೋಲಿ
ಬಾಗಿ ಇಡುತ್ತಿದ್ದೆ ನಾನಾ ತರದಲ್ಲಿ
ಅದು ಹೇಗೆ ಮರೆಯಲಿ ಮನಸಲ್ಲಿ
ಅದು ಮರೆಯದು ಈ ಬಾಳಿನಲ್ಲಿ ||

ಅತ್ತಿಗೆ ಕೈ ಗೊಂಬೆ ಅಣ್ಣ
ಎತ್ತಿ ಮುದ್ದಾಡಿದ ತಂಗಿ ಮರೆತ
ಅಣ್ಣ ಕಣ್ಣೆತ್ತಿ ಸಹ ನೋಡಬಾರದೇ
ತಂಗಿ ಬಾರಮ್ಮ ಇತ್ತ ಎನ್ನಬಾರದೆ|

ಅಣ್ಣನ ಹೆಂಡತಿ ನೋಡಿ
ಕಣ್ಣ ಸನ್ನೆ ಮಾಡಿದಳೆನ್ನ ನೋಡಿ
ಅಣ್ಣ ಮಾತನಾಡಿಸದವಳ ಸೇರಿದ
ತನ್ನ ಸಿರಿಯಲ್ಲೇ ತಾನೊಡಗೂಡಿದ||

ಶಿವನೆ ನಾ ಕೈ ಮುಗಿದು ಬೇಡುವೆ
ಸಿರಿ ಸಂಪತ್ತು ಕೊಡು ನಮ್ಮಣ್ಣಗೆ
ತಾಯಿ ಜಗದಂಬೆ ಕೈಮುಗಿದು ಬೇಡುವೆ
ಕಾಯಿ ಕರ್ಪುರದಾರತಿ ಬೆಳಗುವೆ

.............................................................................................................

ಈಶ್ವರನಿರುವನೋ ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ SONG LYRICS IN KANNADA |EESHWARA NIRUVANO

 ಹಾಡಲು ಕಲಿಯಿರಿ(CLICK HERE TO LEARN THIS SONG)

ಈಶ್ವರನಿರುವನೋ ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ
ಈಶ್ವರ ಸಂಕಲ್ಪವೆಂಬುದೊಂದಿದೆ ಗೊತ್ತಾಗುವುದಲ್ಲ!
ಮೋಕ್ಷವೋ ಸ್ವರ್ಗವೋ ಇದೆಯೋ ಎಂಬುದು ಗೊತ್ತಾಗುವುದಿಲ್ಲ
ಭಕ್ತಿ ಶ್ರದ್ಧೆಯ ಫಲಬಲವೆಂಬುದು ಗೊತ್ತಾಗುವುದಲ್ಲ!

ಈಶ್ವರನಿರುವನೋ ಗೊತ್ತಿಲ್ಲ.
ನಶ್ವರ ಜಗವಿದು ಗೊತ್ತಲ್ಲ?
ಮೋಕ್ಷವೋ ಸ್ವರ್ಗವೋ ಇದೆಯೋ
ಎಂಬುದು ಗೊತ್ತಾಗುವುದಿಲ್ಲ. ಈಶ್ವರ ನಿಷ್ಠೆಯೇ ಭಯಹರವೆಂಬುದು
ದಿನದಿನಕನುಭವ ಬಹುದಲ್ಲ!
ಈಶ್ವರ ಭಕ್ತಿಯೇ ನಿಜ ಸುಖವೆಂಬುದು
ಭಕ್ತರ ಹೊಣೆ ಪರಮೇಶನದೆಂಬುದು
ಭಕ್ತಿಯನುಭವಕೆ ಬಹುದಲ್ಲ! ಹಾಗಾದರೆ ಶಿವನಿರುವನಿರುವನು.
ಹಾಗಾದರೆ ಶಿವನಿರುವನಿರುವನಿದ
ನಂಬು ನಂಬು ಸಂಶಯ ಸಲ್ಲ! ಈಶ್ವರನಿರುವನು ಇದು ಸತ್ಯ.
ಭಕ್ತಿ ಶ್ರದ್ಧೆಯ ಫಲ ನಿತ್ಯ!

ಸುಭಾಷಿತ ಪದಚ್ಛೇದ: ಹಸ್ತಸ್ಯ ಭೂಷಣಂ ದಾನಂ | SUBHASHITA: HASTASYA BHOOsHANAM DAANAM WITH ANVAYA AND MEANING

 CLICK HERE TO LEARN THIS SUBHASHITA (YOUTUBE)

हस्तस्य भूषणं दानं सत्यं कण्ठस्य भूषणम्।

   श्रोत्रस्य भूषणं शास्त्रं भूषणै: किं प्रयोजनम्॥


ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಮ್।

ಶ್ರೋತೃಸ್ಯ ಭೂಷಣ೦ ಶಾಸ್ತ್ರ೦ ಭೂಷಣೈ: ಕಿ೦ ಪ್ರಯೋಜನಮ್॥

हस्तस्य = ಹಸ್ತದ(ಪು. ಷಷ್ಠಿ.ಏಕ) 

भूषणं = ಭೂಷಣವು (ನ. ಪ್ರ.ಏಕ)

दानं = ದಾನವು (ನ.ಪ್ರ.ಏಕ).

सत्यं = ಸತ್ಯವು (ಪು. ಪ್ರ.ಏಕ) 

कण्ठस्य = ಕಂಠದ (ಪು.ಷಷ್ಠೀ.ಏಕ) 

 श्रोत्रस्य = ಕಿವಿಯ (ಪು. ಷಷ್ಠೀ.ಏಕ)

शास्त्रं = ಶಾಸ್ತ್ರಗಳನ್ನು ಕೇಳುವುದು ( ನ.ಪ್ರ.ಏಕ)

 भूषणै: = ಭೂಷಣಗಳಿಂದ (ನ.ತೃತೀಯಾ.ಏಕ)

 किं  = ಏನು

प्रयोजनम् = ಪ್ರಯೋಜನವು( ನ.ಪ್ರ.ಏಕ)


ಅರ್ಥ:

ಕೈಗಳಿಗೆ ದಾನವೇ ಆಭರಣ,

ಸತ್ಯ ನುಡಿಯುವುದೇ ಕಂಠಕ್ಕೆ ಭೂಷಣ.

 ಕಿವಿಗೆ ಶಾಸ್ತ್ರ ಶ್ರವಣವೇ ಆಭರಣ.

ಸಾಮಾನ್ಯ ಆಭರಣಗಳಿಂದ ಏನು ಪ್ರಯೋಜನ?

..............................................................................................

ಸುಭಾಷಿತ ಪದಚ್ಛೇದ: ಯತ್ರ ನಾರ್ಯಸ್ತು ಪೂಜ್ಯಂತೆ |यत्र नार्यस्तु पूज्यन्ते | YATRA NAARYASTU - ANVAYA AND MEANING

 CLICK HERE TO LEARN THIS SUBHASHITA(YOUTUBE)

यत्र नार्यस्तु पूज्यन्ते रमन्ते तत्र देवताः ।

यत्रैतास्तु न पूज्यन्ते सर्वास्तत्राफलाः क्रियाः ।।

 …………………………………………………………………………

ಯತ್ರ ನಾರ್ಯಸ್ತು ಪೂಜ್ಯಂತೆ

ರಮಂತೇ ತತ್ರ ದೇವತಾ: |

ಯತ್ರೈತಾಸ್ತು ನ ಪೂಜ್ಯಂತೆ

 ಸರ್ವಾಸ್ತತ್ರಾಫಲಾ: ಕ್ರಿಯಾ:| |

......................................................................

यत्र = ಎಲ್ಲಿ (ಅವ್ಯಯ)

नार्य: = ನಾರಿಯರು (नारी ಶಬ್ದದ ಪ್ರ.ಬಹುವಚನ)

 तु = ನಿಶ್ಚಯವಾಗಿ (ಅವ್ಯಯ)

पूज्यन्तॆ = ಪೂಜಿಸಲ್ಪಡುತ್ತಾರೆ (ಕ್ರಿಯಾಪದ, पूज् ಧಾತು ,ಉಭಯಪದಿ, ಪ್ರಥಮ ಪುರುಷ,ಬಹುವಚನ)

 रमन्तॆ = ಆನಂದಿಸು (ಕ್ರಿಯಾಪದ ,रम्  ಧಾತು, ಆತ್ಮನೆಪದಿ, ಪ್ರಥಮ ಪುರುಷ,ಬಹುವಚನ)

तत्र = ಅಲ್ಲಿ(ಅವ್ಯಯ)

दॆवता: = ದೇವತೆಗಳು (दॆवता ಶಬ್ದದ ಪ್ರ.ಬಹುವಚನ)

ऎता: = ಇವರು (ನಾರಿಯರು)

 न = ಇಲ್ಲ(ಅವ್ಯಯ)

 सर्वा: = ಎಲ್ಲಾ (ಸ್ತ್ರೀ, ಪ್ರ, ಬಹು)

अफला: = ನಿಷ್ಫಲ (ಸ್ತ್ರೀ, ಪ್ರ, ಬಹು)

क्रिया: = ಕ್ರಿಯೆಗಳು (ಕೆಲಸಗಳು) ಸ್ತ್ರೀ, ಪ್ರ, ಬಹು)

भवन्ति = ಆಗುತ್ತವೆ (ಅಧ್ಯಾಹಾರ)

..............................................

ಅರ್ಥ:

ಎಲ್ಲಿ ನಾರಿಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಆನಂದದಿಂದ ಇರುತ್ತಾರೆ.

ಆದರೆ ಎಲ್ಲಿ ನಾರಿಯರಿಗೆ ಗೌರವ ಇರುವುದಿಲ್ಲವೋ, ಅಲ್ಲಿ ಮಾಡಿದ ಯಾಗ ,ಯಜ್ಞ, ಜಪ, ತಪ, ಹೋಮಗಳು ಎಲ್ಲವು ನಿಷ್ಪಲಗಳು.

..................................................................................................................................................

पाकशाला/ಅಡುಗೆ ಮನೆ -1 |KITCHEN ITEMS -1 WORDS IN SANSKRIT | SANSKRIT LEARNING THROUGH KANNADA

 CLICK HERE FOR EXPLAINATION ON THESE WORDS (YOU TUBE)

पाक: =   ಅಡುಗೆ

 पाकशाला =ಅಡುಗೆಮನೆ

पाचक: /पाचिका= ಅಡುಗೆಯವನು/ಅಡುಗೆಯವಳು

 सन्दंश: =ಇಕ್ಕಳ

 ईली = ಈಳಿಗೆಮಣೆ

 भान्डारम्= ಉಗ್ರಾಣ

ज्वाला = ಬೆಂಕಿ ಉರಿ

भॊजनम् = ಊಟ

स्थालिका= ತಟ್ಟೆ

व्याघरणम् = ಒಗ್ಗರಣೆ

चुल्लि: = ಒಲೆ

वितर्दी = ಕಟ್ಟೆ

कटाहक: = ಕಡಾಯಿ

उपहार: = ಉಪಹಾರ/ತಿಂಡಿ

मन्थान: = ಕಡೆಗೋಲು

 अग्नि पेटिका = ಬೆಂಕಿ ಪೆಟ್ಟಿಗೆ

 कर्तरी  = ಕತ್ತರಿ

लवित्रम्  = ಕತ್ತಿ

पिष्टपचनम्  = ದೋಸೆ/ಚಪಾತಿ ಕಾವಲಿ

अनिल कोश: = ಗ್ಯಾಸ್ ಸಿಲಿಂಡರ್

 अनिलचुल्लि: = ಗ್ಯಾಸ್ ಸ್ಟೌ

 पॆषकम् = ಗ್ರೈಂಡರ್

 चमस: = ಚಮಚ

 छुरिका = ಚಾಕು

कलश:  = ಚೊಂಬು

जालकम् = ಜಾಳಿಗೆ

आधानिका = ಟ್ರೇ

 करण्ड: = ಡಬ್ಬ

 पात्रम् = ಪಾತ್ರೆ

शीतकम्= ಫ಼್ರಿಜ್

 चषक: = ಲೋಟ/ಬಟ್ಟಲು

 कूपी = ಬಾಟಲ್

 भ्राष्ट्रम् = ಬಾಣಲೆ

मिश्रकम् = ಮಿಕ್ಸಿ

 शराव: = ಮುಚ್ಚಳ

 वॆल्लनी = ಲಟ್ಟಣಿಗೆ

 विद्युत् चुल्लि: = ಎಲೆಕ್ಟ್ರಿಕ್ ಸ್ಟೌ

 जलशुद्दीकरण यन्त्रम् = ನೀರಿನ ಫಿಲ್ಟರ್

 शाक: = ತರಕಾರಿ

शाककर्तरिफलकम् = ತರಕಾರಿ ಕತ್ತರಿಸುವ ಹಲಗೆ

 दर्वी = ಸೌಟು

 बाष्पस्थाली = ಕುಕ್ಕರ್

 जलनिर्गम: = ಸಿಂಕ್

सूक्षमतरङ्गचुल्लि:  = ಮೈಕ್ರೊ ವೇವ್ ಒವನ್

 ...........................................................................................................................................

ಸರ್ಪಾಪಸರ್ಪ ಭದ್ರಂ ತೇ | ಸರ್ಪ ಭಯ ನಿವಾರಣೆಗೆ ಶ್ಲೋಕ with meaning in kannada - shloka

 CLICK HERE FOR EXPLANATION FOR THIS SHLOKA

सर्पापसर्प भद्रं ते गच्छ सर्प महाविष।

जनमेजययज्ञान्तॆ आस्तीकवचनं स्मर॥

ಸರ್ಪಾಪಸರ್ಪ ಭದ್ರಂ ತೇ ಗಚ್ಛ ಸರ್ಪ ಮಹಾವಿಷ।

ಜನಮೇಜಯ ಯಜ್ಞಾಂತೇ ಆಸ್ತೀಕ ವಚನಂ ಸ್ಮರ॥

ಮಹಾವಿಷವುಳ್ಳ ಮಹಾಸರ್ಪವೇ , ಅತ್ತ ಸರಿ. ಇಲ್ಲಿಂದ ಹೊರಟು ಹೋಗು. ನಿನಗೆ ಮಂಗಳವಾಗಲಿ. ಜನಮೇಜಯನು ಮಾಡಿದ ಸರ್ಪ ಯಾಗದ ಅಂತ್ಯದಲ್ಲಿ ಮಹಾಮಹಿಮನಾದ ಆಸ್ತೀಕನು ನಿನ್ನ ಪೂರ್ವಜರನ್ನು ಕುರಿತು ಏನು ಹೇಳಿದ್ದನೆಂಬುದನ್ನು ಸ್ಮರಿಸು.

                                                 -------ಮಹಾಭಾರತ-ಆದಿಪರ್ವದ ಆಸ್ತೀಕ ಪರ್ವವೆಂಬ ಉಪಪರ್ವ

ಆಸ್ತೀಕಸ್ಯ ವಚ:  ಶ್ರುತ್ವಾ ಯ:ಸರ್ಪೋ ನ ನಿವರ್ತತೇ।

ಶತಧಾ ಭಿದ್ಯತೇ ಮೂರ್ಧ್ನೀ ಶಿಂಶವೃಕ್ಷಫಲಂ ಯಥಾ॥

ಆಸ್ತೀಕನು ಹೇಳಿದ ಮಾತುಗಳನ್ನು ಜ್ಞಾಪಕಕ್ಕೆ ತಂದಮೇಲೂ ಯಾವ ಸರ್ಪವು ತನ್ನ ಪಾಡಿಗೆ ತಾನು ಹೊರಟು ಹೋಗುವುದಿಲ್ಲವೋ ಅಂತಹ ಸರ್ಪದ ತಲೆಯು ಶಿಂಶವೃಕ್ಷದ ಫಲದಂತೆ ನೂರಾರು ಹೋಳಾಗುತ್ತದೆ.

……………………………………………………………………………

ಜರತ್ಕಾರೋಜರತ್ಕಾರ್ವಾಂ ಸಮುತ್ಪನ್ನೋ ಮಹಾಶಯಾ:।

ಆಸ್ತೀಕ ಸತ್ಯಸಂಧೋ ಮಾಂ ಪನ್ನಗೆಭ್ಯೋSಭಿರಕ್ಷತು॥

ಜರತ್ಕಾರುವಿನಿಂದ ಜರತ್ಕಾರುವಿನಲ್ಲಿ ಸಮುತ್ಪನ್ನನಾದ ,ಮಹಾಶಯನಾದ ಸತ್ಯಸಂಧನಾದ ಆಸ್ತೀಕನು ಹಾವುಗಳಿಂದ ನನ್ನನ್ನು ಸಂರಕ್ಷಿಸಲಿ.

-ಸಂಧ್ಯಾವಂದನೆಯ ಉಪಸ್ಥಾನದಲ್ಲಿ ಹೇಳುವ ಮಂತ್ರ

…………………………………………………………………………


ಪುಟಾಣಿ ನೀಲಿ ಹಕ್ಕಿ, ಹಾಡು SONG LYRICS IN KANNADA |PUTANI NEELI HAKKI SONG LYRICS| SHISHU GEETHE

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ : ಹೆಚ್.ಎಸ್.ವೆಂಕಟೇಶಮೂರ್ತಿ

ಓ! ಪುಟಾಣಿ ನೀಲಿ ಹಕ್ಕಿ, ಹಾಡು ಹಾಡು ಹಾಡು

ಹಾಡು …………….. ಹಾ……….ಡು ||

ಚಂದ್ರ ಇದಾನೆ ಬಾನಲ್ಲಿ ಬೆಳದಿಂಗಳು ಈ ಕಾನಲ್ಲಿ
ಬರಲೇ ಬೇಕು ನೀನಿಲ್ಲಿ ಹಾರಾಡುವ ಮಾತಿನ ಮಲ್ಲಿ ||1 ||

ಅಲೆ ಯಾಡುತಿವೆ ಕೊಳದಲ್ಲಿ ತೆನೆ ತೂಗುತ್ತಿವೆ ಹೊಲದಲ್ಲಿ
ಬರಲೇ ಬೇಕು ನೀನಿಲ್ಲಿ ಹಾರಾಡುವ ಮಾತಿನ ಮಲ್ಲಿ ||2||

ಬೆಳಕ್ಕಿಗಳಿವೆ ಸರದಲ್ಲಿ  ಗಿಳಿಗಳು ಹಚ್ಚನೆ ಮರದಲ್ಲಿ
ನೀಲಿಯೊಳಾಡುವ ನೀಲಿಯ ಹಕ್ಕಿ
ಬರಲೇ ಬೇಕು ನೀನಿಲ್ಲಿ ಹಾರಾಡುವ ಮಾತಿನ ಮಲ್ಲಿ ||3||

................................................................................................................................................

ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | Lyrics |ಹೆಳವನಕಟ್ಟೆ ಗಿರಿಯಮ್ಮ | maleya dayamaado shree ranga | helavana katte giriyamma

  ಹಾಡಲು ಕಲಿಯಿರಿ(CLICK HERE TO LEARN THIS SONG) ಮಳೆಯ ದಯಮಾಡೊ ಶ್ರೀರಂಗಾ ನಿಮ್ಮ | ಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬ...