Aug 9, 2025

ಸುಭಾಷಿತ ಪದಚ್ಛೇದ: ಯತ್ರ ನಾರ್ಯಸ್ತು ಪೂಜ್ಯಂತೆ |यत्र नार्यस्तु पूज्यन्ते | YATRA NAARYASTU - ANVAYA AND MEANING

 CLICK HERE TO LEARN THIS SUBHASHITA(YOUTUBE)

यत्र नार्यस्तु पूज्यन्ते रमन्ते तत्र देवताः 

यत्रैतास्तु  पूज्यन्ते सर्वास्तत्राफलाः क्रियाः ।।

 …………………………………………………………………………

ಯತ್ರ ನಾರ್ಯಸ್ತು ಪೂಜ್ಯಂತೆ

ರಮಂತೇ ತತ್ರ ದೇವತಾ: |

ಯತ್ರೈತಾಸ್ತು  ಪೂಜ್ಯಂತೆ

 ಸರ್ವಾಸ್ತತ್ರಾಫಲಾಕ್ರಿಯಾ:| |

......................................................................

यत्र = ಎಲ್ಲಿ (ಅವ್ಯಯ)

नार्य: = ನಾರಿಯರು (नारी ಶಬ್ದದ ಪ್ರ.ಬಹುವಚನ)

 तु ನಿಶ್ಚಯವಾಗಿ (ಅವ್ಯಯ)

पूज्यन्तॆ = ಪೂಜಿಸಲ್ಪಡುತ್ತಾರೆ (ಕ್ರಿಯಾಪದ, पूज् ಧಾತು ,ಉಭಯಪದಿ, ಪ್ರಥಮ ಪುರುಷ,ಬಹುವಚನ)

 रमन्तॆ ಆನಂದಿಸು (ಕ್ರಿಯಾಪದ ,रम्  ಧಾತು, ಆತ್ಮನೆಪದಿ, ಪ್ರಥಮ ಪುರುಷ,ಬಹುವಚನ)

तत्र ಅಲ್ಲಿ(ಅವ್ಯಯ)

दॆवता: = ದೇವತೆಗಳು (दॆवता ಶಬ್ದದ ಪ್ರ.ಬಹುವಚನ)

ऎता: = ಇವರು (ನಾರಿಯರು)

  = ಇಲ್ಲ(ಅವ್ಯಯ)

 सर्वाಎಲ್ಲಾ (ಸ್ತ್ರೀ, ಪ್ರ, ಬಹು)

अफलाನಿಷ್ಫಲ (ಸ್ತ್ರೀ, ಪ್ರ, ಬಹು)

क्रिया: = ಕ್ರಿಯೆಗಳು (ಕೆಲಸಗಳುಸ್ತ್ರೀ, ಪ್ರ, ಬಹು)

भवन्ति = ಆಗುತ್ತವೆ (ಅಧ್ಯಾಹಾರ)

..............................................

ಅರ್ಥ:

ಎಲ್ಲಿ ನಾರಿಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಆನಂದದಿಂದ ಇರುತ್ತಾರೆ.

ಆದರೆ ಎಲ್ಲಿ ನಾರಿಯರಿಗೆ ಗೌರವ ಇರುವುದಿಲ್ಲವೋಅಲ್ಲಿ ಮಾಡಿದ ಯಾಗ ,ಯಜ್ಞಜಪತಪಹೋಮಗಳು ಎಲ್ಲವು ನಿಷ್ಪಲಗಳು.

..................................................................................................................................................

No comments:

Post a Comment