Aug 3, 2025

ಪುಟಾಣಿ ನೀಲಿ ಹಕ್ಕಿ, ಹಾಡು SONG LYRICS IN KANNADA |PUTANI NEELI HAKKI SONG LYRICS| SHISHU GEETHE

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ : ಹೆಚ್.ಎಸ್.ವೆಂಕಟೇಶಮೂರ್ತಿ

! ಪುಟಾಣಿ ನೀಲಿ ಹಕ್ಕಿ, ಹಾಡು ಹಾಡು ಹಾಡು

ಹಾಡು …………….. ಹಾ……….ಡು ||

ಚಂದ್ರ ಇದಾನೆ ಬಾನಲ್ಲಿ ಬೆಳದಿಂಗಳು ಕಾನಲ್ಲಿ
ಬರಲೇ ಬೇಕು ನೀನಿಲ್ಲಿ ಹಾರಾಡುವ ಮಾತಿನ ಮಲ್ಲಿ ||1 ||

ಅಲೆ ಯಾಡುತಿವೆ ಕೊಳದಲ್ಲಿ ತೆನೆ ತೂಗುತ್ತಿವೆ ಹೊಲದಲ್ಲಿ
ಬರಲೇ ಬೇಕು ನೀನಿಲ್ಲಿ ಹಾರಾಡುವ ಮಾತಿನ ಮಲ್ಲಿ ||2||

ಬೆಳಕ್ಕಿಗಳಿವೆ ಸರದಲ್ಲಿ  ಗಿಳಿಗಳು ಹಚ್ಚನೆ ಮರದಲ್ಲಿ
ನೀಲಿಯೊಳಾಡುವ ನೀಲಿಯ ಹಕ್ಕಿ
ಬರಲೇ ಬೇಕು ನೀನಿಲ್ಲಿ ಹಾರಾಡುವ ಮಾತಿನ ಮಲ್ಲಿ ||3||

................................................................................................................................................

No comments:

Post a Comment