Aug 9, 2025

ಈಶ್ವರನಿರುವನೋ ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ SONG LYRICS IN KANNADA |EESHWARA NIRUVANO

 ಹಾಡಲು ಕಲಿಯಿರಿ(CLICK HERE TO LEARN THIS SONG)

ಈಶ್ವರನಿರುವನೋ ಇಲ್ಲವೋ ಎಂಬುದು ಗೊತ್ತಾಗುವುದಿಲ್ಲ
ಈಶ್ವರ ಸಂಕಲ್ಪವೆಂಬುದೊಂದಿದೆ ಗೊತ್ತಾಗುವುದಲ್ಲ!
ಮೋಕ್ಷವೋ ಸ್ವರ್ಗವೋ ಇದೆಯೋ ಎಂಬುದು ಗೊತ್ತಾಗುವುದಿಲ್ಲ
ಭಕ್ತಿ ಶ್ರದ್ಧೆಯ ಫಲಬಲವೆಂಬುದು ಗೊತ್ತಾಗುವುದಲ್ಲ!

ಈಶ್ವರನಿರುವನೋ ಗೊತ್ತಿಲ್ಲ.
ನಶ್ವರ ಜಗವಿದು ಗೊತ್ತಲ್ಲ?
ಮೋಕ್ಷವೋ ಸ್ವರ್ಗವೋ ಇದೆಯೋ
ಎಂಬುದು ಗೊತ್ತಾಗುವುದಿಲ್ಲ. ಈಶ್ವರ ನಿಷ್ಠೆಯೇ ಭಯಹರವೆಂಬುದು
ದಿನದಿನಕನುಭವ ಬಹುದಲ್ಲ!
ಈಶ್ವರ ಭಕ್ತಿಯೇ ನಿಜ ಸುಖವೆಂಬುದು
ಭಕ್ತರ ಹೊಣೆ ಪರಮೇಶನದೆಂಬುದು
ಭಕ್ತಿಯನುಭವಕೆ ಬಹುದಲ್ಲ! ಹಾಗಾದರೆ ಶಿವನಿರುವನಿರುವನು.
ಹಾಗಾದರೆ ಶಿವನಿರುವನಿರುವನಿದ
ನಂಬು ನಂಬು ಸಂಶಯ ಸಲ್ಲ! ಈಶ್ವರನಿರುವನು ಇದು ಸತ್ಯ.
ಭಕ್ತಿ ಶ್ರದ್ಧೆಯ ಫಲ ನಿತ್ಯ!

No comments:

Post a Comment