ಹಾಡಲು ಕಲಿಯಿರಿ(CLICK HERE TO LEARN THIS SONG)
ಅಮ್ಮ ನಾನು
ದೇವರಾಣೆ ಬೆಣ್ಣೆ
ಕದ್ದಿಲ್ಲಮ್ಮ
ಎಲ್ಲಾ ಸೇರಿ
ನನ್ನ ಬಾಯಿಗೆ
ಬೆಣ್ಣೆಯ ಮೆತ್ತಿದರಮ್ಮ||
ನೀನೇ ನೋಡು ಬೆಣ್ಣೆ ಗಡಿಗೆ ಸೂರಿನ ನಿಲುವಲ್ಲಿ
ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ||1||
ಶ್ಯಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ
ಒರೆಸುತ್ತಾ
ಬೆಣ್ಣೆ ಒರೆಸಿದಾ ಕೈಯ ಬೆನ್ನ ಹಿಂದೆ ಮರೆಸುತ್ತಾ||2||
ಎತ್ತಿದ ಕೈಯ್ಯ ಕಡಗೋಲನ್ನ ಮೂಲೆಲಿಟ್ಟು ನಕ್ಕಳು
ಗೋಪಿ
ಸೂರದಾಸ ಪ್ರಿಯ ಶ್ಯಾಮನ ಮುತ್ತಿಟ್ಟು ನಕ್ಕಳು
ಗೋಪಿ||3||
Related Topics:
No comments:
Post a Comment