ಹೊನ್ನು ತಾ ಗುಬ್ಬಿ
ಹೊನ್ನು ತಾ
ನಮ್ಮ ಚಿನ್ಮಯ ಮೂರುತಿ
ಚೆಲುವ ರಂಗನ ಕೈಗೆ |
ತಾ ಹೊನ್ನು ತಾ
ಗುಬ್ಬಿ ತಾ ಹೊನ್ನು ತಾ ।
ತಾ ಗುಬ್ಬಿ ತಾ
ಹೊನ್ನು ತಾ ಗುಬ್ಬಿ ತಾ ॥
ಆಗಮವನು ತಂದು
ಜಗಕಿತ್ತ ಕೈಗೆ
ಸಾಗರವ ಮಥಿಸಿ ಸುಧೆ
ತಂದ ಕೈಗೆ
ತೂಗಿ ಮಾತಾಡುವ
ಸ್ಥೂಲಕಾಯನ ಕೈಗೆ|
ಸಾಗರ ಪತಿ ನಮ್ಮ
ನರಸಿಂಹನ ಕೈಗೆ ||1||
ಬಲಿಯ ದಾನವ ಬೇಡಿ
ಬಂದಂಥ ಕೈಗೆ
ಛಲದಿಂದ ಕ್ಷತ್ರಿಯರ
ಕೊಂದ0ಥ ಕೈಗೆ
ಕಲಿ ವಿಭೀಷಣ
ಗಭಯವಿತ್ತಂಥಾ ಕೈಗೆ |
ಬಲುಬೆಟ್ಟ ಬೆರಳಲ್ಲಿ
ಹೊತ್ತಂಥ ಕೈಗೆ ||2||
ಪತಿವ್ರತೆಯರ ವ್ರತ
ಅಳಿದಂಥ ಕೈಗೆ
ಹಿತವಾಜಿಯನೇರಿ
ಮರ್ದಿಸಿದಂಥ ಕೈಗೆ
ಸತಿಶಿರೋಮಣಿ
ಲಕ್ಷೀಕಾಂತನ ಕೈಗೆ
ಚತುರ ಹೆಳವನಕಟ್ಟೆ
ರಂಗನ ಕೈಗೆ ||3||
……………………………………………….
No comments:
Post a Comment