Aug 17, 2022

ಬನ್ನಿ ಹಿಂದೂ ವೀರರೆ ಮುಂದೆ ಸಾಗುವಾ(PATRIOTIC SONG )|BANNI HINDU VEERARE MUNDHE SAAGUVA LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)


ಬನ್ನಿ ಹಿಂದೂ ವೀರರೆ ಮುಂದೆ ಸಾಗುವಾ

ವೀರಮಾತೆ ಪುತ್ರರೆಂದು ಧೀರ ಸಂತಾನರೆಂದು

ಧರೆಯೊಳು ಸಾರುವ ಮುಂದೆ ಸಾಗುವ||

 

ತಾಯ ಸೇವೆಗಾಗಿ ಬನ್ನಿ ಧ್ಯೇಯಕಾಗಿ ದುಡಿವ ಬನ್ನಿ

ನಿದ್ದೆ ತೊರೆಯುವ,ಎದ್ದು ನಿಲ್ಲುವ,ಸಿದ್ಧರಾಗುವ|

ಕತ್ತಲನ್ನು ಕಬಳಿಸುತ್ತ ಸುತ್ತ ಬೆಳಕನರಳಿಸುತ್ತ

ಮುಕ್ತ ರವಿಯು ಮೂಡುವ, ನೋಟ ನೋಡುವ||1||

 

ಭಗವಧ್ವಜ ಹಾರುತಿಹುದು ಮುಗಿಲ ಮೇಲೇರುತಿಹುದು

ಶುಭವ ಕೋರುತಾ,ಅಭಯವೀಯುತಾ,ಪ್ರಭೆಯ ಬೀರುತ|

ಭೋಗ ವಿಷಯ ರಾಗ ತ್ಯಜಿಸಿ ತ್ಯಾಗ ಭಾವ ಮನದಿ ನಿಲಿಸಿ

ಭಾಗ್ಯ ಪೂರ್ಣ ನಾಡಯೋಗ್ಯ ಮಕ್ಕಳೆನಿಸುವ||2||

 

ಮುಂದೆ ನಡೆಯೆ ಸ್ವರ್ಗ ದ್ವಾರ ಹಿಂದೆ ಸರಿಯೆ ನರಕ ಘೋರ

ಎಂದು ಸಾರುವ,ಮುಂದೆ ಸಾಗುವ, ವಿಜಯ ಗಳಿಸುವ|

ಮುಂದುವರಿಯೆ ತಡೆವರಾರು ? ಸಂಘಶಕ್ತಿಗೆದುರು ಯಾರು?

ಅಸುರ ಬಲವು ಬೆದರಿ ಜಾರುತಿಹುದ ಕಾಣುವ||3||

 

ಜಯ ಜಯ ಜಯ ಮಾತೃಭೂಮಿ ಮಂಗಳಕರ ಪುಣ್ಯಭೂಮಿ

ಎಂದು ಹಾಡುವ,ಘೋಷಗೈಯ್ಯುವ,ಹರ್ಷಗೊಳ್ಳುವ|

ಮಾತೃಭಕ್ತ ಹೃದಯವಿರಲು ಈಶನೊಲುಮೆ ಬಲವದಿರಲು

ಕಾಲ ಯಮನ ತಡೆಯುವ, ಧೀರರೆನಿಸುವ||4||

..........................................................................................................................................

Also See:

ನಾವಾಡುವ ನುಡಿಯೇ ಕನ್ನಡ ನುಡಿ|NAVADUVA NUDIYE SONG LYRICS IN KANNADA|ಕನ್ನಡ

No comments:

Post a Comment