Aug 10, 2025

ಭಾರತಾಂಬೆಯೆ ನಿನ್ನಚರಣಕೆ patriotic songs lyrics in kannada| bharatambeye ninna charanake

 

ಭಾರತಾಂಬೆಯೆ ನಿನ್ನಚರಣಕೆ ನಾನು ನಮಿಸುವೆನು | |

ಅನ್ನವಿತ್ತಿಹೆ, ಬೆನ್ನ ಸವರಿಹೆ, ಮುನ್ನ ನೆನೆಸುವೆನು || ಅ ಪ ||

 

ಒಂದುತಾಯಿಯ ಮಕ್ಕಳೆಂಬುವ ಪಾಠ ಕಲಿಸುತಿರು

ಹಿಂದೆಬಾಳಿದ ಹಿರಿಯರೆಲ್ಲರ ಮಾರ್ಗ ಮರೆಸದಿರು |

ಹೊಂದಿಬಾಳುವ, ವೃಂದಮೆಚ್ಚುವ ಗುಣವ ಬಿತ್ತುತಿರು

ಕಂದ ನಿನ್ನವ, ನಾನು ಬೇಡುವೆ, ಇಲ್ಲವೆನ್ನದಿರು || ||

 

ಬೆರಗುಗೊಳಿಸುವ ಬಾಳ್ವೆಮಾಡಿದ ನಿನ್ನ ಪುತ್ರರನು

ಅರಿತುಕೊಳ್ಳುವ ವಿನಯಶಕ್ತಿಯ ನಿತ್ಯ ಬೆಳೆಸುತಿರು |

ಹಿರಿಯ ಸಾಧನೆ ಮಾಡಿ ಮೆರೆದಿಹ ನಿನ್ನ ಸಾಧಕರ

ನಿರತ ನೆನೆಯುತ ಗುರಿಯ ಸೇರುವೆ, ಸ್ಫೂರ್ತಿ ಕೊಡುತಲಿರು  || ||

 

ದಿನವು ಕನ್ನಡ ಭಾಷೆಯಾಡುವ ಬುದ್ಧಿಯನು ಕೊಡುತ

ಮನಸಿನಾಲಯದೊಳಗೆ ಭಾರತಿ ಮಾತೆಯನು ನಿಲಿಸು |

ಜನುಮವೆಷ್ಟೇ ಇರಲಿ ಎನಗೆ, ನೆಲೆಯ ಕರುಣಿಸುತ,

ವಿನಯಪೂರ್ವಕ ಭಕುತಿಯಿಂದಲಿ ಮಣಿಯುವೆನು ಪದಕೆ || ||

......................................................................................................


No comments:

Post a Comment