ಗಂಗೆ ಯಮುನೆ ಹರಿದಂತಹ ದೇಶ ಹಿಮಗಿರಿ ಸಹ್ಯದ ವಿಂಧ್ಯಯ ದೇಶ
ಒಂದೇ ಭಾರತ ಒಂದೇ ಎಂಬ ಮಾತೆಯ ಪದದಲ್ಲಿ ಅಡಿ ಇರಿಸಿ
ಭಕ್ತಿಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ, ಚಲನಚಿತ್ರ ಗೀತೆ, ಶಾಲಾ ಪ್ರಾರ್ಥನೆ, ಭಾವನಾತ್ಮಕ ಹಾಡುಗಳು, ಶ್ಲೋಕಗಳು ಮತ್ತು ಸುಭಾಷಿತಗಳು ಸೇರಿದಂತೆ ಎಲ್ಲಾ ರೀತಿಯ ಕನ್ನಡ ಹಾಡುಗಳನ್ನು ಕಲಿಯಲು ಆಸಕ್ತಿ ಹೊಂದಿರುವ ಯಾರಿಗಾದರೂ ಈ ಬ್ಲಾಗ್ ಉಪಯುಕ್ತವಾಗಿದೆ. ಹೆಚ್ಚಿನ ಹಾಡುಗಳ ಸಾಹಿತ್ಯದ ಕೊನೆಯಲ್ಲಿ ಹಾಡನ್ನು ಕಲಿಯಲು ಅನೂಕೂಲವಾಗುವಂತೆ, ಯು ಟ್ಯೂಬ್ ಲಿಂಕ್ ಅನ್ನು ಕೊಡಲಾಗಿದೆ.
ಸೊಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ||2||
ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ ಪತ್ರೆ ತುಳಸಿ ದಳವ
ಮಾದಪ್ಪ ಪೂಜೆಗೆ ಬಂದು ಮಾದೇವ ನಿಮ್ಮ||1||
ತಪ್ಪಾಳೆ ಬೆಳಗೀವ್ನಿ ತುಪ್ಪವ ಕಾಯ್ಸೀವ್ನಿ
ಕಿತ್ತಾಳೆ ಹಣ್ಣ ತಂದೀವ್ನಿ ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪ
ಹಿತ್ತಾಡಿ ಬರುವ ಪರಷೆಗೆ ಮಾದೇವ ನಿಮ್ಮ||2||
ಬೆಟ್ಟ್ ಹತ್ತ್ಕೋಂಡ್ ಹೋಗೋರ್ಗೇ ಹಟ್ಟಿ ಹಂಬಲವ್ಯಾಕ
ಬೆಟ್ಟದ್ ಮಾದೇವ ಗತಿಯೆಂದು ಮಾದೇವ ನೀವೆ
ಬೆಟ್ಟದ್ ಮಾದೇವ ಗತಿಯೆಂದು ಅವರಿಂದು
ಹಟ್ಟಿ ಹಂಬಲವ ಮರೆತ್ತಾರೋ ಮಾದೇವ ನಿಮ್ಮ||3||
Click here for the explanation