Feb 26, 2021

ಈಶ್ವರ ಶ್ಲೋಕಗಳು|SHLOKAS ON LORD SHIVA LYRICS|

 

ಈಶ್ವರ ಶ್ಲೋಕಗಳು


ಓಮ್ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ|

ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯ ಮಾಮೃತಾತ್||

 

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೆ|

ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ||

 

ವಾಮದೇವಂ ಮಹಾದೇವಂ ಲೋಕನಾಥಂ ಜಗದ್ಗುರುo|

ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಶ್ಯತೀ||

.......................................................................................................

ಹಾಡಲು ಕಲಿಯಿರಿ(CLICK HERE TO LEARN THIS SONG)


Also see:

SOJUGADA SUJU MALLIGE|ಸೊಜುಗಾದ ಸೂಜಿ ಮಲ್ಲಿಗೆ| SONG ON LORD SHIVA

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS

Feb 23, 2021

ಜಯ ಜನಾರ್ದನ ಕೃಷ್ಣ ರಾಧಿಕಾಪತೇ (ಸಾಹಿತ್ಯ) |JAYAJANARDANA KRISHNA SONG LYRICS IN KANNADA| SONG ON LORD KRISHNA

                                            ಹಾಡಲು ಕಲಿಯಿರಿ(CLICK HERE TO LEARN THIS SONG)

ಜಯ ಜನಾರ್ದನ ಕೃಷ್ಣ ರಾಧಿಕಾಪತೇ

ಜನ ವಿಮೋಚನ ಕೃಷ್ಣ ಜನ್ಮ ಮೋಚನ

ಗರುಡ ವಾಹನ ಕೃಷ್ಣ ಗೋಪಿಕಾ ಪತೇ

ನಯನ ಮೋಹನ ಕೃಷ್ಣ ನೀರಜೇಕ್ಷಣ||

 

ಸುಜನ ಬಾಂಧವ ಕೃಷ್ಣ ಸುಂದರಾಕೃತೇ

ಮದನ ಕೋಮಲ ಕೃಷ್ಣ ಮಾಧವಾ ಹರೇ|

ವಸುಮತಿ ಪತೇ ಕೃಷ್ಣ ವಾಸವಾನುಜ

ವರ ಗುಣಾಕರ ಕೃಷ್ಣ ವೈಷ್ಣವಾಕೃತೆ|

ಸುರಚಿರಾನನ ಕೃಷ್ಣ ಶೌರ್ಯ ವಾರಿಧೇ

ಮುರಹರ ವಿಭೋ ಕೃಷ್ಣ ಮುಕ್ತಿದಾಯಕ|

ವಿಮಲಪಾಲಕ ಕೃಷ್ಣ ವಲ್ಲಭಿಪತೆ

ಕಮಲಲೋಚನ ಕೃಷ್ಣ ಕಾಮ್ಯದಾಯಕ||1||

 

ವಿಮಲ ಗಾತ್ರನೇ ಕೃಷ್ಣ ಭಕ್ತ ವತ್ಸಲ

ಚರಣ ಪಲ್ಲವಂ ಕೃಷ್ಣ ಕರುಣ ಕೋಮಲ೦|

ಭುವಲ ವೀಕ್ಷಣ ಕೃಷ್ಣ ಕೋಮಲಾಕೃತೆ

ತವ ಪದಾ೦ಬುಜಂ ಕೃಷ್ಣ ಶರಣಮಾಶ್ರಯೇ|

ಭುವನ ನಾಯಕಾ ಕೃಷ್ಣ ಪಾವನಾಕೃತೇ

ಗುಣಗಣೋಜ್ವಲ ಕೃಷ್ಣ ನಳಿನ ಲೋಚನ|

ಪ್ರಣಯ ವಾರಿಧೇ ಕೃಷ್ಣ ಗುಣಗಣಾಕರ

ದಾಮ ಸೋದರ ಕೃಷ್ಣ ದೀನ ವತ್ಸಲ||2||

 

ಕಾಮ ಸುಂದರ ಕೃಷ್ಣ ಪಾಹಿ ಸರ್ವದಾ

ನರಕ ನಾಶನಾ ಕೃಷ್ಣ ನರ ಸಹಾಯಕ|

ದೇವಕೀ ಸುತ ಕೃಷ್ಣ ಕಾರುಣ್ಯ೦ಬುಧೇ

ಕಂಸ ನಾಶನ ಕೃಷ್ಣ ದ್ವಾರಕಾ ಸ್ಥಿತ|

ಪಾವನಾತ್ಮಕ ಕೃಷ್ಣ ದೇಹಿ ಮಂಗಲ೦

ತತ್ ಪದಾಂಬುಜಂ ಕೃಷ್ಣ ಶ್ಯಾಮ ಕೋಮಲ೦|

ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ

ಪಾಲಿಸೆನ್ನನು ಕೃಷ್ಣ ಶ್ರೀ ಹರಿ ಮೋ||3||

 

ಭಕ್ತ ದಾಸನ ಕೃಷ್ಣ ಹರಸು ನೀ ಸದಾ

ಕಾದು ನಿಂತೆನಾ ಕೃಷ್ಣ ಸಲಹೆಯಾ ವಿಭೋ

ಗರುಡ ವಾಹನ ಕೃಷ್ಣ ಗೋಪಿಕಾ ಪತೇ

ನಯನ ಮೋಹನ ಕೃಷ್ಣ ನೀರಜೇಕ್ಷಣ||4||

............................................................................................

Also see:

ದಾನವ ಕದಳಿಯ ಕಾನನ ಮುರಿಯುತ :daanava kadaliya kaanana song lyrics|KANNADA DEVOTIONAL SONG ON LORD KRISHNA



Feb 19, 2021

ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ ಸಾಹಿತ್ಯ|SHRICHAKRA DHARIGE SONG LYRICS |ಲಾಲಿ ಹಾಡು | ಕನ್ನಡ ಚಿತ್ರಗೀತೆ(ಸ್ವಾತಿ ಮುತ್ತು )

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಲಾಲೀ ಲಾಲೀ  ಲಾಲಿ ಲಾಲಿ, ಲಾಲೀ ಲಾಲೀ  ಲಾಲಿ ಲಾಲಿ

ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ ರಾಜೀವ ನೇತ್ರನಿಗೆ ರಮಣೀಯ ಲಾಲಿ

ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೇನ ಲಾಲಿ ಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ

ಲಾಲೀ ಲಾಲೀ  ಲಾಲಿ ಲಾಲಿ, ಲಾಲೀ ಲಾಲೀ  ಲಾಲಿ ಲಾಲಿ||

 

ಕಲ್ಯಾಣ ರಾಮನಿಗೆ ಕೌಸಲ್ಯೆ ಲಾಲಿ

ಯದುವಂಶ ವಿಭುವಿಗೆ ಯಶೋದೆ ಲಾಲಿ

ಪರಮೇಶ ಸುತನಿಗೆ ಪಾರ್ವತಿಯ ಲಾಲಿ

ಧರೆಯಾಳೋ ವಾಗ್ ಧಣಿಗೆ ಶರಣೆಂಬೆ ಲಾಲಿ||1||

 

ಶ್ರೀ ಕನಕದಾಸರದು ಕೃಷ್ಣನಿಗೆ ಲಾಲಿ

ಲಿಂಗಕ್ಕೆ ಜಂಗಮರ ವಚನಗಳ ಲಾಲಿ

ವೇದ ವೇದ್ಯರಿಗೆ ವೇದಾಂತ ಲಾಲಿ

ಆಗಮ ನಿಗಮವೆ ಲಾಲೀ ಲಾಲಿ||2||

..................................................................................................

Also see:

Feb 16, 2021

ಸೂರ್ಯ ಶ್ಲೋಕಗಳು(SHLOKAS ON LORD SURYA,SUN)

 

ಸೂರ್ಯ ಶ್ಲೋಕಗಳು

ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿ ಹಿತಂ ಮುಖಂ|

ತತ್ವಂ ಪೂಷನ್ ಅಪಾವೃಣು ಸತ್ಯಧರ್ಮಾಯ ದೃಷ್ಟಯೇ||

 

ಉದಯೇ ಬ್ರಹ್ಮ ಸ್ವರೂಪೋಯ೦ ಮಧ್ಯಾಹ್ನೇತು ಮಹೇಶ್ವರ:

ಅಸ್ತಮಾನೇ ಸ್ವಯಂ ವಿಷ್ಣು: ತ್ರಯೀ ಮೂರ್ತಿರ್ದಿವಾಕರ: ||

.............................................................................................................

ಸೂರ್ಯ ದ್ವಾದಶ ನಾಮಾವಳಿ


ಓಂ ಹ್ರಾಂ ಮಿತ್ರಾಯ ನಮ:
ಓಂ ಹ್ರೀಂ ರವಯೇ ನಮ:
ಓಂ ಹ್ರೂಸೂರ್ಯಾಯ ನಮ:
ಓಂ ಹ್ರೈಭಾನವೇ ನಮ:
ಓಂ ಹ್ರೊವ್ಮ್ ಖಗಾಯ ನಮ:
ಓಂ ಹ್ರಪೂಶ್ನೇ ನಮ:
ಓಂ ಹ್ರಾಂ ಹಿರಣ್ಯ ಗರ್ಭಾಯ ನಮ:
ಓಂ ಹ್ರೀಂ ಮರೀಚಯೇ ನಮ:
ಓಂ ಹ್ರೂಆದಿತ್ಯಾಯ ನಮ:
ಓಂ ಹ್ರೈಸವಿತ್ರೇ ನಮ:
ಓಂ ಹ್ರೊವ್ಮ್ ಅರ್ಕಾಯ ನಮ:
ಓಂ ಹ್ರಭಾಸ್ಕರಾಯ ನಮ:
ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮ:
.......................................................................................

Feb 9, 2021

ನೀನಿಲ್ಲದೇ ನನಗೇನಿದೇ(ಭಾವಗೀತೆ) |NEENILLADE NANAGENIDE(EMOTIONAL SONG) LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ನೀನಿಲ್ಲದೇ ನನಗೇನಿದೇ
ಮನಸ್ಸೆಲ್ಲಾ ನಿನ್ನಲ್ಲಿ ನೆಲೆಯಾಗಿದೆ
ಕನಸ್ಸೆಲ್ಲಾ ಕಣ್ಣಲ್ಲೇ ಸೆರೆಯಾಗಿದೇ

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವೂ ಹಗಲಿರುಳು ತಂದೇ ನೀನು
ಎದೆಯಾಸೆ ಏನೋ ಎಂದೂ ನೀ ಕಾಣದಾದೇ
ನಿಶೆಯೊಂದೆ ನನ್ನಲ್ಲೀ ನೀ ತುಂಬಿದೇ
ಬೆಳಕೊಂದೆ ನಿನ್ನಿಂದಾ ನಾ ಬಯಸಿದೇ||1||

ಒಲವೆಂಬ ಕಿರಣಾ ಬೀರೀ ಒಳಗಿರುವ ಬಣ್ಣಾ ತೆರೆಸೀ
ಒಣಗಿರುವ ಎದೆಬಿಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದಾ ನಾ ತಾಳುವೇ
ಹೊಸ ಲೋಕ ನಿನ್ನಿಂದಾ ನಾ ಕಾಣುವೇ||2||

..................................

Also See:


Feb 3, 2021

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ(ಸಾಹಿತ್ಯ) | CHELLIDARU MALLIGEYA SONG LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ

ಅಂದದ ಚೆಂದದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಅಂದದ ಚೆಂದದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಓಹೋ ಚೆಲ್ಲಿದರು ಮಲ್ಲಿಗೆಯಾ||

 

ಏಳು ಮಲೆಯಲ್ಲಿ ಏನಯ್ಯ ಕೆಂಧೂಳು

ಏಳು ಮಲೆಯಲ್ಲಿ ಏನಯ್ಯ ಕೆಂಧೂಳು

ನವಿಲಾರಿ ನೌಲ ಮರಿಯಾರಿ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ನವಿಲಾರಿ ನೌಲ ಮರಿಯಾರಿ ಮಾದೇವ್ಗೆ

ಚೆಲ್ಲಿದರು ಮಲ್ಲಿಗೆಯಾ ಓಹೋ ಚೆಲ್ಲಿದರು ಮಲ್ಲಿಗೆಯಾ|

ನವಿಲಾರಿ ನೌಲ… ಮರಿಯಾರಿ ಮಾದೇವ್ಗೆ

ನವಿಲಾರಿ ನೌಲ… ಮರಿಯಾರಿ ಮಾದೇವ್ಗೆ

ಔತ್ನ ಮಾಡಿ ಗಿರಿಗೆ ಹೊರಟಾವು ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಔತ್ನ ಮಾಡಿ ಗಿರಿಗೆ ಹೊರಟಾವು ಮಾದೇವ್ಗೆಚೆಲ್ಲಿದರು ಮಲ್ಲಿಗೆಯಾ

 ಓಹೋ ಚೆಲ್ಲಿದರು ಮಲ್ಲಿಗೆಯಾ||1||

 

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ

ಅಂದದ ಚೆಂದದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಓಹೋ ಚೆಲ್ಲಿದರು ಮಲ್ಲಿಗೆಯಾ||

 

ಮಲ್ಲೆ ಹೂವಿನ ಮಂಚ ಮರುಗದ ಮೇಲ್ ಹೊದಿಕೆ

ಮಲ್ಲೆ ಹೂವಿನ ಮಂಚ ಮರುಗದ ಮೇಲ್ ಹೊದಿಕೆ

ತಾವರೆ ಹೂವ ತಲೆದಿಂಬ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ತಾವರೆ ಹೂವ ತಲೆದಿಂಬ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಓಹೋ ಚೆಲ್ಲಿದರು ಮಲ್ಲಿಗೆಯಾ|

ತಾವರೆ ಹೂವ… ತಲೆದಿಂಬ ಮಾದೇವ್ಗೆ

ತಾವರೆ ಹೂವ ..ತಲೆದಿಂಬ ಮಾದೇವ್ಗೆ

ಅಲ್ಲೊಂದು ಘಳಿಗೆ ಸುಖನಿದ್ರೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಅಲ್ಲೊಂದು ಘಳಿಗೆ ಸುಖನಿದ್ರೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಓಹೋ ಚೆಲ್ಲಿದರು ಮಲ್ಲಿಗೆಯಾ|

 

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ

ಅಂದದ ಚೆಂದದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ

ಓಹೋ ಚೆಲ್ಲಿದರು ಮಲ್ಲಿಗೆಯಾ||

....................................................................................................

Also See:

ಶಿವ ಶಿವ ಎನ್ನುತ ಹಾಡಲು ಮನದಲಿ (SHIVA SHIVA ENNUTHA HAADALU SONG LYRICS)


ಕೋಡಗನ ಕೋಳಿ ನುಂಗಿತ್ತ (KODAGANA KOLI NUNGITA) SONG LYRICS IN KANNADA

Feb 1, 2021

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ|ಭಾವಗೀತೆ|ಸಾಹಿತ್ಯ|TOURASUKHADOLAGENNA SONG LYRICS IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು||

ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಳಸಿ ಕೃಷ್ಣತುಳಸಿ
ನೀಲಾಂಬರನ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ||1||

ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
ಇನ್ನು ತಂಗಿಯ ಮದುವೆ ತಿಂಗಳಿಹುದು
ತೌರಪಂಜರದೊಳಗೆ ಸೆರೆಯಾದ ಗಿಳಿಯಲ್ಲ
ಐದು ತಿಂಗಳ ಕಂದ ನಗುತಲಿಹುದು||2||

ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೆನೇ ನಾನು ಇಲ್ಲಿ
ಮರೆತಿಹಳು ಎನ್ನದಿರಿ ಕಣ್ಮರೆಯ ತೋಟದಲಿ
ಅಚ್ಚ ಮಲ್ಲಿಗೆ ಹೂವು ಅರಳು ಬಿರಿಯುತಿಹುದು
ಬಂದುಬಿಡುವೆನು ಬೇಗ ಮುನಿಯದಿರಿ ಕೊರಗದಿರಿ
ಚುಚ್ಚದಿರಿ ಮೊನೆಯಾದ ಮಾತನೆಸೆದು||3||

..................................

Also see: