Jun 30, 2022

SUBHASHITA - ಪಾಪಾನ್ನಿವಾರಯತಿ ಯೋಜಯತೇ ಹಿತಾಯ (ಸನ್ಮಿತ್ರರ ಲಕ್ಷಣ) WITH MEANING IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


पापान्निवारयति यॊजयते हिताय

गुह्यं निगूहति गुणान् प्रकटीकरोति |

आपद्गतं जहाति ददाति काले

सन्मित्र  लक्षणमिदं प्रवदन्ति संत:||

 

ಪಾಪಾನ್ನಿವಾರಯತಿ ಯೋಜಯತೇ ಹಿತಾಯ

ಗುಹ್ಯ೦ ನಿಗೂಹತಿ ಗುಣಾನ್ ಪ್ರಕಟೀಕರೋತಿ|

ಆಪದ್ಗತ೦ ಜಹಾತಿ ದದಾತಿ ಕಾಲೆ

ಸನ್ಮಿತ್ರ ಲಕ್ಷಣಮಿದ೦ ಪ್ರವದಂತಿ ಸಂತ:  ||

 

ಅರ್ಥ:

ತನ್ನ ಸ್ನೇಹಿತನು ಪಾಪಕಾರ್ಯಗಳನ್ನು ಮಾಡದಂತೆ ತಡೆಯುವುದು ,ಒಳ್ಳೆಯ ಕಾರ್ಯಗಳಿಗೆ ಕೈಜೋಡಿಸುವುದು ,ಸ್ನೇಹಿತನ ರಹಸ್ಯಗಳನ್ನು ಬಚ್ಚಿಟ್ಟು ಒಳ್ಳೆಯ ಗುಣಗಳನ್ನು ಬೇರೆಯವರಿಗೆ ಪ್ರಕಟಿಸುವುದು . ಆಪತ್ತಿನ ಸಮಯದಲ್ಲಿ ಕೈಬಿಡದೆ ಸಹಾಯವನ್ನು ಮಾಡುವುದು ಇವು ಒಳ್ಳೆಯ ಸ್ನೇಹಿತರು ಲಕ್ಷಣಗಳು ಎಂದು ಸಂತರು ಹೇಳುತ್ತಾರೆ

...................................................................................................................................

Also See:

ಸ್ವರ್ಣಗೌರಿ ಶ್ಲೋಕಗಳು (SWARNA GOWRI SHLOKAS) WITH KANNADA AND ENGLISH LYRICS

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು|DHAREGAVATARISIDE SONG LYRICS IN KANNADA

Jun 29, 2022

SUBHASHITA- ಯಥಾ ಹ್ಯೇಕೇನ ಚಕ್ರೇಣ ( ಪುರುಷ ಪ್ರಯತ್ನ ಮುಖ್ಯ) | SUBHASHITA WITH MEANING IN KANNADA|YATHA HYEKENA CHAKRENA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

यथा ह्येकेन चक्रेण रथस्य गतिर्भवेत् |

एवं पुरुषकारेण विना दैवं सिध्यति ||

 

ಯಥಾ ಹ್ಯೇಕೇನ ಚಕ್ರೇಣ ರಥಸ್ಯ ಗತಿರ್ಭವೇತ್।

ಏವಂ ಪುರುಷ ಕಾರೇಣ ವಿನಾ ದೈವಂ ಸಿಧ್ಯತಿ॥

 

ಅರ್ಥ:

ಹೇಗೆ ಒಂದೇಒಂದು ಚಕ್ರದಿಂದ ರಥವು ಚಲಿಸಲು ಸಾಧ್ಯವಿಲ್ಲವೋ ಹಾಗೆಯೇ ಬರೀ ದೇವರ ದಯದಿಂದ ಕಾರ್ಯಗಳು ಕೈಗೂಡುವುದಿಲ್ಲ. ಪುರುಷಪ್ರಯತ್ನ (ಸ್ವ ಪ್ರಯತ್ನ) ವೂ ಬೇಕು.

..........................................................................................................

Also See:

ಮನಸಾ ಸತತಂ ಸ್ಮರಣೀಯಂ | ಸಂಸ್ಕೃತ ಹಾಡು| MANASA SATATAM SMARANEEYAM SONG LYRICS IN KANNADA

Jun 28, 2022

SUBHASHITA:ಆಕಾಶಾತ್ ಪತಿತಂ ತೋಯಂ (ದೇವನೊಬ್ಬ -ನಾಮ ಹಲವು)|SUBHASHITAS WITH MEANING IN KANNADA | AKASHATH PATITAM TOYAM

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

आकाशात पतितं तोयं यथा गच्छति सागरं |

सर्व देव नमस्कारः केशवं प्रति गच्छति ||

 

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ।

ಸರ್ವದೇವ ನಮಸ್ಕಾರ: ಕೇಶವಂ ಪ್ರತಿ ಗಚ್ಚತಿ॥

 

ಹೇಗೆ ಆಕಾಶದಿಂದ ಬಿದ್ದಂತಹ ಮಳೆಯ ನೀರೆಲ್ಲವೂ ಕೊನೆಗೆ ಸಾಗರವನ್ನು ಸೇರುತ್ತದೆಯೋ ಹಾಗೆಯೇ ನಾವು ಎಲ್ಲ ದೇವರುಗಳಿಗೆ ಮಾಡಿದ ನಮಸ್ಕಾರಗಳು ಕೊನೆಗೆ ಹೋಗಿ ಸೇರುವುದು ಸರ್ವವ್ಯಾಪಕನಾದ ಮಹಾವಿಷ್ಣುವಿಗೆ.

....................................................................................................................

Also See:

ಮಾತೆ ಪೂಜಕ ನಾನು ಎನ್ನಯ |ದೇಶಭಕ್ತಿ ಗೀತೆ| (Mathe poojaka naanu ennaya)| Patriotic Song Lyrics in Kannada

Jun 27, 2022

SUBHASHITA: ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ: (ಉತ್ತಮರ ಗುಣ) | SUBHASHITAS WITH MEANING IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

प्रारभ्यते खलु विघ्न भयेन नीचै :

प्रारभ्य विघ्न विहता विरमन्ति मद्याः |

विघ्नै: पुनः पुनरपि प्रतिहन्यमानाः

प्रारभ्यमुत्तमजनाः परित्यजन्ति ||

 

ಪ್ರಾರಭ್ಯತೇ ಖಲು ವಿಘ್ನ ಭಯೇನ ನೀಚೈ:

ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ ಮಧ್ಯಾ: |

ವಿಘ್ನೈ: ಪುನ: ಪುನರಪಿ ಪ್ರತಿಹನ್ಯಮಾನಾ:

ಪ್ರಾರಭ್ಯಮುತ್ತಮ ಜನಾ: ಪರಿತ್ಯಜಂತಿ॥

 

ಅರ್ಥ:

ಮುಂದೆ ಯಾವಾಗಲಾದರೂ ಕಾರ್ಯಕ್ಕೆ ವಿಘ್ನ ಬರಬಹುದೆಂಬ ಭಯದಿಂದ ಕೀಳು ಜನರು ಕಾರ್ಯವನ್ನೇ ಪ್ರಾರಂಭಿಸುವುದಿಲ್ಲ. ಮಧ್ಯಮರು, ಪ್ರಾರಂಭಿಸಿದ ಕಾರ್ಯಕ್ಕೆ ವಿಘ್ನ ಉಂಟಾದರೆ ಅದನ್ನು ಮತ್ತೆ ಕೈಗೆತ್ತಿಕೊಳ್ಳುವುದಿಲ್ಲ.

ಆದರೆ ಉತ್ತಮ ಜನರು, ಪ್ರಾರಂಭಿಸಿದ ಕಾರ್ಯಕ್ಕೆ ಎಷ್ಟೇ ವಿಘ್ನ ಉಂಟಾದರೂ ಎದೆಗುಂದದೆ, ಹಿಡಿದ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸುವವರೆಗೂ ಬಿಡುವುದಿಲ್ಲ.
......................................................................................................................

Also See:

ಗುರು ಅಷ್ಟಕಂ (ಆದಿ ಶಂಕರಾಚಾರ್ಯ): ಶರೀರಂ ಸುರೂಪಂ | lyrics in Kannada| Guru Ashtakam by Adi Shankaracharya|

Jun 24, 2022

SUBHASHITA: ಸ್ವಗೃಹೇ ಪೂಜ್ಯತೇ ಮೂರ್ಖ: (ವಿದ್ಯೆಯ ಮಹತ್ವ) | swagrahe poojyate moorkhaha |subhashita with meaning in kannada|

             ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


स्वगृहे पूज्यते मूर्ख : स्वग्रामे पूज्यते प्रभुः |

स्वदेशे पूज्यते राजा विद्वान् सर्वत्र पूज्यते ||

 

ಸ್ವಗೃಹೇ ಪೂಜ್ಯತೇ ಮೂರ್ಖ: ಸ್ವಗ್ರಾಮೇ ಪೂಜ್ಯತೇ ಪ್ರಭು:

ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ||

ಅರ್ಥ:

ಮೂರ್ಖನಾದವನು ತನ್ನ ಮನೆಯಲ್ಲಿ ಮಾತ್ರ ಗೌರವಿಸಲ್ಪಡುತ್ತಾನೆ. ಅಧಿಕಾರಿಯು ತನ್ನ ಗ್ರಾಮದವರಿಂದ ಮಾತ್ರ ಗೌರವಕ್ಕೆ ಪಾತ್ರನಾಗುತ್ತಾನೆ. ರಾಜನಿಗೆ ತನ್ನ ದೇಶದಲ್ಲಿ ಮಾತ್ರ ಗೌರವ ಸಿಗುತ್ತದೆ. ಆದರೆ ವಿದ್ಯಾವಂತನು ಎಲ್ಲೆಲ್ಲಿಯೂ ಗೌರವಿಸಲ್ಪಡುತ್ತಾನೆ.

........................................................................................................................................


Jun 23, 2022

ಕಾಣದ ಕಡಲಿಗೆ ಹಂಬಲಿಸಿದೆ ಮನ Lyrics| kanada kadalige song lyrics in Kannada| C Ashwath songs lyrics


ಹಾಡಲು ಕಲಿಯಿರಿ(CLICK HERE TO LEARN THIS SONG)

 ಸಾಹಿತ್ಯ : ಜಿ.ಎಸ್.ಶಿವರುದ್ರಪ್ಪ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣಬಲ್ಲೆನೆ ಒಂದು ದಿನ  ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣಬಲ್ಲೆನೆ ಒಂದು ದಿನ ಕಡಲನು ಕೂಡಬಲ್ಲೆನೆ ಒಂದು ದಿನ ||

 

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗೆಂದು ಕೇಳುತಿದೆ

ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುಯ್ಯುತಿದೆ

ಎಲ್ಲಿರುವುದೋ ಅದು……. ಎಂತಿರುವುದೋ ಅದು….

ನೋಡಬಲ್ಲೆನೆ ಒಂದು ದಿನ  ಕಡಲನು ಕೂಡಬಲ್ಲೆನೆ ಒಂದು ದಿನ ||||

 

ಸಾವಿರ ಹೊಳೆಗಳು ತುಂಬಿ ಹರಿದರೂ  ಒಂದೇ ಸಮನಾಗಿಹುದಂತೆ

ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ

ಮುನ್ನೀರಂತೆ……………….ಅಪಾರವಂತೆ……………….

ಕಾಣಬಲ್ಲೆನೆ ಒಂದು ದಿನ ಅದರೊಳು ಕರಗಲಾರೆನೆ ಒಂದು ದಿನ  ॥೨॥

 

ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು

ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು

ಸೇರಬಹುದೇ ನಾನು  ಕಡಲ ನೀಲಿಯೊಳು ಕರಗಬಹುದೆ ನಾನು

ಕರಗಬಹುದೆ ನಾನು ಕರಗಬಹುದೆ ನಾ………ನು  ||

......................................................................................................................

Also See:

ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ|EE BAANU EE CHUKKI EE HOOVU EE HAKKI SONG LYRICS IN KANNADA AND ENGLISH|

Jun 22, 2022

SUBHASHITA: ಛಾಯಾಮನ್ಯಸ್ಯ ಕುರ್ವಂತಿ (ಪರೋಪಕಾರ ಗುಣ)| CHAYAMANYASYA KURVANTI: SUBHASHITA|

   ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

छायामन्यस्य कुर्वन्ति तिष्टन्ति स्वयमातपे।

फलान्यपि परार्थाय वृक्षा: सत्पुरुषा इव||

 

ಛಾಯಾಮನ್ಯಸ್ಯ ಕುರ್ವಂತಿ ತಿಷ್ಠಂತಿ ಸ್ವಯಮಾತಪೇ|
 ಫಲಾನ್ಯಪಿ ಪರಾರ್ಥಾಯ ವೃಕ್ಷಾಸತ್ಪುರುಷಾಃ ಇವ||


(ಗಿಡಗಳು ಬೇರೆಯವರಿಗೆ ನೆರಳು ಕೊಟ್ಟುಸ್ವತಃತಾವು ಬಿಸಿಲಿನಲ್ಲಿ ನಿಲ್ಲುತ್ತವೆತಮ್ಮ ಹಣ್ಣುಗಳನ್ನು ಕೂಡಾ ಬೇರೆಯವರಿಗೆ ಕೊಡುತ್ತವೆಅಂತೆಯೇ ಸತ್ಪುರುಷರು ಪರರ ಕಲ್ಯಾಣಕ್ಕಾಗಿ ಆತ್ಮಾರ್ಪಣೆ ಮಾಡುವರು.)

.................................................................................................................

Also See"

SUBHASHITA: ಅರ್ಥ ನಾಶ೦ ಮನಸ್ತಾಪ೦|ARTHA NASHAM MANASTAAPAM|ಈ ಐದನ್ನು ರಹಸ್ಯವಾಗಿಡಬೇಕು|These five must be kept secret


ಜಯ ವಿವೇಕಾನಂದ ಗುರುವರ | Song on Swamy Vivekananda | Jaya Vivekananda Guruvara | Kananda & English

Jun 20, 2022

SUBHASHITA: ಅರ್ಥ ನಾಶ೦ ಮನಸ್ತಾಪ೦|ARTHA NASHAM MANASTAAPAM|ಈ ಐದನ್ನು ರಹಸ್ಯವಾಗಿಡಬೇಕು|These five must be kept secret

 ಹಾಡಲು ಕಲಿಯಿರಿ(CLICK HERE TO LEARN THIS SHLOKA)

अर्थ नाशं मनस्तापं गृहे दुश्चरितानि |

वञ्चनं चापमानं मतिमान प्रकाशयेत ||

 

ಅರ್ಥ ನಾಶ೦ ಮನಸ್ತಾಪ೦ ಗೃಹೇ ದುಶ್ಚರಿತಾನಿ ಚ।

ವಂಚನ೦ ಚಾಪಮಾನ೦ ಮತಿಮಾನ್ ಪ್ರಕಾಶಯೇತ್॥

 

ಅರ್ಥ: ವಿವೇಕಿಗಳು ಈ ಕೆಳಗಿನ ವಿಷಯಗಳನ್ನು ಸುಮ್ಮನೇ ಎಲ್ಲರಲ್ಲಿಯೂ ಹೇಳಿಕೊಳ್ಳುವುದಿಲ್ಲ:

1.     ಅರ್ಥ ನಾಶ : ಕಳೆದುಕೊಂಡ ಹಣ

2.     ಮನಸ್ತಾಪಮ್: ಸಂಬಂಧದಲ್ಲಿ ಅಥವಾ ಸ್ನೇಹಿತರ ನಡುವೆ ನಡೆದ ಜಗಳಗಳು

3.     ದುಶ್ಚರಿತಾನಿ: ಮನೆಯಲ್ಲಿ ನಡೆದ ಅಹಿತಕರ ಘಟನೆಗಳು

4.     ವಂಚನ೦: ತಮಗೆ ಆದ ವಂಚನೆ

5.     ಅಪಮಾನ೦: ತಮಗಾದ ಅಪಮಾನಗಳು.

..........................................................................................................................

      Also See:

      ಎಂಥ ಅಂದ ಎಂಥ ಚೆಂದ ಶಾರದಮ್ಮ|ENTHA ANDHA ENTHA CHENDA SHARADAMMA SONG LYRICS

EASY SHLOKAS(ಸರಳ ಶ್ಲೋಕಗಳು)

Jun 17, 2022

SUBHASHITA : ಪೃಥಿವ್ಯಾಂ ತ್ರೀಣಿ ರತ್ನಾನಿ|PRATHIVYAM TREENI RATNAANI WITH MEANING|ಸುಭಾಷಿತ ಅರ್ಥ ಸಹಿತ

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


पृथिव्यां त्रीणि रत्नानि जलमन्नं सुभाषितम्।

मूढै: पाषाणखन्डेषु रत्न संज्ञा विधीयते॥

 

ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ

ಮೂಢೈ: ಪಾಷಾಣ ಖಂಡೇಷು ರತ್ನ ಸಂಜ್ಞಾ ವಿಧೀಯತೆ||

 

ಪ್ರಪಂಚದಲ್ಲಿ ಇರುವ ನಿಜವಾದ ರತ್ನ ಗಳೆಂದರೆ ಜಲ, ಅನ್ನ ಹಾಗೂ ಸುಭಾಷಿತಗಳು .ಆದರೆ ಮೂರ್ಖರು ಬಂಡೆಯ ಕಲ್ಲುಗಳ ಚೂರುಗಳನ್ನು ಎಂದು ರತ್ನವೆಂದು ಭ್ರಮಿಸುತ್ತಾರೆ.

....................................................................................................................

Also See:

ಸುಭಾಷಿತಗಳ ಮಹತ್ವ| IMPORTANCE OF SUBHASHITAS| audio

SUBHASHITAS(ಸುಭಾಷಿತಗಳು -ಅರ್ಥ).

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ (ಸಾಹಿತ್ಯ) | TOREDU JEEVISABAHUDE SONG LYRICS IN KANNADA|

Jun 16, 2022

ಉತ್ತರಧ್ರುವದಿಂ ದಕ್ಷಿಣಧ್ರುವಕೂ ಸಾಹಿತ್ಯ| uttara dhruvadim dakshina dhruvaku song lyrics|Shara panjara kannada movie song|

 ಹಾಡಲು ಕಲಿಯಿರಿ(CLICK HERE TO LEARN THIS SONG)

ಉತ್ತರಧ್ರುವದಿಂ ದಕ್ಷಿಣಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ||1||


ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು ||2||


ಅಕ್ಷಿಣಿಮೀಲನ ಮಾಡದ

ನಕ್ಷತ್ರದ ಗಣ ಗಗನದಿ ಹಾರದಿದೆ

ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ||3||

..........................................

Also see:

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS




Jun 14, 2022

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ (ಸಾಹಿತ್ಯ) | TOREDU JEEVISABAHUDE SONG LYRICS IN KANNADA|

 ರಚನೆ: ಕನಕದಾಸರು

ಹಾಡಲು ಕಲಿಯಿರಿ(CLICK HERE TO LEARN THIS SONG)

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ

ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ||

 

ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು

ದಾಯಾದಿ ಬಂಧುಗಳ ಬಿಡಲು ಬಹುದು

ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು

ಕಾಯಜ ಪಿತ ನಿನ್ನ ಅಡಿಯ ಬಿಡಲಾಗದು||1||

 

ಒಡಲು ಹಸಿಯಲು ಅನ್ನ ವಿಲ್ಲದೆಯೆ ಇರಬಹುದು

ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು

ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು

ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು||2||

 

ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು

ಮಾನದಲಿ ಮನವ ತಗ್ಗಿಸಲು ಬಹುದು

ಪ್ರಾಣನಾಯಕನಾದ ಆದಿ ಕೇಶವ ರಾಯ

ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು||3||

....................................................................

ಪಿಳ್ಳಂಗೋವಿಯ ಚೆಲ್ವ ಕೃಷ್ಣನ|PILLANGOVIYA CHELWA KRISHNANA SONG LYRICS IN KANNADA

ಮಾತೆ ಪೂಜಕ ನಾನು ಎನ್ನಯ |ದೇಶಭಕ್ತಿ ಗೀತೆ| (Mathe poojaka naanu ennaya)| Patriotic Song Lyrics in Kannada

Jun 11, 2022

ಮಾತೆ ಪೂಜಕ ನಾನು ಎನ್ನಯ |ದೇಶಭಕ್ತಿ ಗೀತೆ| (Mathe poojaka naanu ennaya)| Patriotic Song Lyrics in Kannada

 ಹಾಡಲು ಕಲಿಯಿರಿ(CLICK HERE TO LEARN THIS SONG)


ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ

ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ||

 

ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ

ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ|

ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ

ಜಗದ ಜನನೀ ಭಾರತ ಇದ ಕೇಳಿ ನಲಿಯುವೆ ಮನದಲಿ||1||

 

ನಗುತ ನಲಿಯುವ ನಿನ್ನ ವದನವ ನೋಡಿ ನಲಿಯುವುದೆನ್ನೆದೆ

ನಿನ್ನ ದು:ಖಿತ ವದನವೀಕ್ಷಿಸೆ  ಸಿಡಿವುದೆನ್ನಯ ಹೃದಯವು

ನಿನ್ನ ಮುಖದಲಿ ಗೆಲುವು ತರಲು ನೀರುಗೈಯುವೆ ರಕ್ತವ

ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನ ಶಕ್ತಿಯ||2||

 

ನಿನ್ನ ತೇಜವ ಜಗವು ನೋಡಲಿ ಉರಿವ ದೀಪದ ತೆರದಲಿ

ಎನ್ನ ಶಕ್ತಿಯ ಘೃತವು ಸತತವು ಎರೆಯುತಿರುವೆನು ಭರದಲಿ

ಮಾತೃ ಮಂದಿರ ಬೆಳಗುತಿರಲಿ ನಾನೇ ನಂದಾದೀವಿಗೆ

ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ||3||

 

ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ

ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ

ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ

ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವ||4||

......................................................................................................................

Also See:

ಊರಿಗೆ ಬಂದರೆ ದಾಸಯ್ಯ(ಪುರಂದರದಾಸರು) ಸಾಹಿತ್ಯ \ OORIGE BANDARE DASAYYA (PURANDARA DASA) SONG LYRICS IN KANNADA

ತಾಯಿ ಶಾರದೆ ಲೋಕ ಪೂಜಿತೆ(TAYI SHARADE LOKA PUJITE) SONG ON LORD SARASWATI- SCHOOL PRAYER LYRICS

Jun 6, 2022

ಜಯ ವಿವೇಕಾನಂದ ಗುರುವರ | Song on Swamy Vivekananda | Jaya Vivekananda Guruvara | Kananda & English

 Vivekanada Jayanti : January 12th.

ವಿವೇಕಾನಂದ ಜಯಂತಿ: ಜನವರಿ ೧೨ 

ಹಾಡಲು ಕಲಿಯಿರಿ(CLICK HERE TO LEARN THIS SONG)

ಜಯ ವಿವೇಕಾನಂದ ಗುರುವರ

 ಭುವನ ಮಂಗಳಕಾ…….ರಿ|

ಚಿರ ಸಮಾಧಿಯ ಗಿರಿ ಶಿಖರದಿ೦

ನರರ ಸೇವೆಗೆ ಇಳಿದ ನರವರ||

 

ಸುಪ್ತ ದೈವರೆ ಏಳಿರೇಳಿ

ಲುಪ್ತ ಪದವಿಯ ಮರಳಿ ತಾಳಿ|

ಸಪ್ತ ಭುವಿಗಳ ಆಳಿರೆನುತ

ದೀಪ್ತ ವಾಣಿಯು ಜಗದಿ ಮೊಳಗಿಹೆ॥1||

 

ವಿಶ್ವ ವ್ಯಾಪಕ ಪ್ರೇಮ ಮೂರ್ತಿಯೆ

ವಿಶ್ವ ದ್ಯೋತಕ ಪರಮ ಜ್ಞಾನಿಯೆ|

ವಿಶ್ವ ಮುಕ್ತಿ ಸಮರ್ಪಿತಾತ್ಮನೆ

ವಿಶ್ವ ವಂದ್ಯನೆ ಜಯತು ಜಯ ಜಯ॥2||

................................................................................

Jaya Vivekananda guruvara

bhuvana mangalakari

Chira samaadhiya giri shikharadim

 narara sevege ilida nara vara||

 

suptha daivave elireli

luptha padaviya marali thaali

saptha bhuvigala aalirenutha

deeptha vaaniyu jagadi molagihe||1||

 

Vishwa vyaapaka prema moorthiye

Vishwa dyothaka parama jnaaniye

Vishwa mukthi samarpithaathmane

Vishwa vandyane jayathu jaya jaya||2||

...........................................................................................

Also See:

ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ|Tayi bharatiya pada padmagala Song lyrics in kannada|Patriotic Song

ಶ್ರೀ ವಾಣಿ ಕಲ್ಯಾಣ ಗುಣಮಣಿ |SHRI VANI KALYANA GUNAMANI SONG LYRICS|KANNADA| SCHOOL PRAYER LYRICS

Jun 1, 2022

ಹೊಳೆ ಸಾಲಿನ ಮರಗಳೇ , ಸಿರಿ ಬನಗಳ ಗಿರಿಗಳೇ (ಸಾಹಿತ್ಯ) | Hole saalina Maragale song lyrics in Kannada

 ಹಾಡಲು ಕಲಿಯಿರಿ(CLICK HERE TO LEARN THIS SONG)


ಹೊಳೆ ಸಾಲಿನ ಮರಗಳೇ , ಸಿರಿ ಬನಗಳ ಗಿರಿಗಳೇ

ನಮ್ಮಾತ್ಮದೊಳಗೆ ಬೆರೆತ ಚೈತನ್ಯದ ಕುಡಿಗಳೆ

ನಿಮ್ಮ ಉದಾರ ನೀತಿಗೆ, ನಿಮ್ಮ ಅನನ್ಯ ಪ್ರೀತಿಗೆ

ನಿಮಗಿದೋ ವಂದನೆ ನಿಮಗೆ ನಮ್ಮ ವಂದನೆ||

 

ನದಿಯ ಪಾತ್ರ ಹಿಗ್ಗಿದಂತೆ ದಡದ ಮಣ್ಣು ಕುಸಿಯಲು

ಬೇರು ಕಳಚಿ ಬೀಳುತಿರುವ ಜಲವಾವೃತ ವಿಪಿನವೆ||1||

 

ಬಿಡೆವು ಕಾಡು ಕುಸಿಯಲು ಬೀಳದಂತೆ ಮರಗಳು

ಹತ್ತಾಳೆ ನೆಟ್ಟು ತಡೆವೆವು ನಿಮ್ಮ ಜೀವ ಕಾಯ್ವೆವು||2||

..........................................................................................................

Also See:

ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ|EE BAANU EE CHUKKI EE HOOVU EE HAKKI SONG LYRICS IN KANNADA AND ENGLISH

ಸ್ವಾಮಿ ದೇವನೆ ಲೋಕ ಪಾಲನೆ |SWAMY DEVANE LOKA PALANE SONG LYRICS IN KANNADA