ಶರಣು ಶರಣಯ್ಯ ಶರಣು ಬೆನಕ(SHARANU SHARANAYYA SHARANU BENAKA) LYRICS IN KANNADA & ENGLISH

 ಶರಣು ಶರಣಯ್ಯ ಶರಣು ಬೆನಕ


ಮೂಷಿಕ ವಾಹನ ಮೋದಕ ಹಸ್ತ

ಚಾಮರ ಕರ್ಣ ವಿಳಂಬಿತ ಸೂತ್ರ

ವಾಮನ ರೂಪ ಮಹೇಶ್ವರ ಪುತ್ರ

ವಿಘ್ನವಿನಾಶಕ ಪಾದ ನಮಸ್ತೇ ನಮಸ್ತೇ ನಮಸ್ತೇ ನಮ: ||


ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೊ ನಮ್ಮ ಕರಿಮುಖ||

ಎಲ್ಲಾರು ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ(2ಸಲ)
ಗರಿಕೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೊ ಮುನ್ನ||1||

ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ (2ಸಲ)
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ||2||


ಬೆನಕ ಬೆನಕ ಏಕದಂತ ಪಚ್ಚೆಕಲ್ಲು ಪಾಣಿಮೆಟ್ಲು
ಒಪ್ಪುವ ವಿಘ್ನೇಶ್ವರ ನಿನಗೆ ಇಪ್ಪತ್ತೊಂದು ನಮಸ್ಕಾರಗಳು

......................................

MOOSHIKA VAAHANA MODAKA HASTHA

CHAAMARA KARNA VILAMBITHA SOOTRA

VAAMANA ROOPA MAHESHWARA PUTRA

VIGHNAVINASHAKA PAADA NAMASTE NAMASTE NAMASTE NAMAHA||


SHARANU SHARANAYYA SHARANU BENAKA 

NEEDAYYA BAALELLA BELAGUVA BELAKA

NINNA NAMBIDA JANAKE IHUDAYYA ELLA SUKHA 

TANDE KAAYOO NAMMA KARIMUKHA||


ELLAARU ONDAAGI NINNA

NAMISI BHAJISODA NODOKE CHENNA

GARIKE TANDARE NEENU KODUVE VARAVANNA

GATI NEENE GANAPANE KAI HIDIYO MUNNA||1||


SURYANEDURALI MANJUKARAGUVA REETHI

NINNA NENEYALU ODANE ODUVUDU BHEETHI

NEEDAYYA KASHTAGALA GELLUVA SHAKUTI

TORAYYA NAMMALLI NINNAYA PREETHI||2||


BENAKA BENAKA EKADANTA

PACHEKALLU PAANIMETLU

OPPUVA VIGHNESHWARA NINAGE

IPPATHONDU NAMASKAARAGALU||

..................................................


Also See:

ಒಲವಿನ ಉಡುಗೊರೆ ಕೊಡಲೇನು(OLAVINA UDUGOARE KODALENU) SONG LYRICS IN KANNADA

ಸರಳ ಸುಭಾಷಿತಗಳು(ಅರ್ಥ ಸಹಿತ) – 4| SUBHASHITAS WITH KANNADA MEANING -4

ಪವಮಾನ ಜಗದಾ ಪ್ರಾಣಾ (ಸಾಹಿತ್ಯ)(PAVAMANA JAGADA PRANA) -LYRICS IN KANNADA

 ಪವಮಾನ ಜಗದಾ ಪ್ರಾಣಾ

ಪವಮಾನ ಪವಮಾನ ಪವಮಾನ ಜಗದಾ ಪ್ರಾಣಾ

ಸಂಕರುಷಣ ಭವಭಯಾರಣ್ಯ ದಹನಾ... ದಹನಾ|

ಶ್ರವಣವೆ ಮೊದಲಾದ ನವವಿಧ ಭಕುತಿಯ

ತವಕದಿಂದಲಿ ಕೊಡು ಕವಿಜನ ಪ್ರಿಯ||

 

ಹೇಮ ಕಚ್ಚುಟ ಉಪವೀತ ಧರಿಪ ಮಾರುತ

ಕಾಮಾದಿ ವರ್ಗ ರಹಿತ....ಕಾಮಾದಿ ವರ್ಗ ರಹಿತ|

ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ

ರಾಮಚಂದ್ರನ ನಿಜದೂತ ....ರಾಮಚಂದ್ರನ ನಿಜದೂತ|

ಯಾಮ ಯಾಮಕೆ ನಿನ್ನಾರಾಧಿಪುದಕೆ

ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ

ಮನಸಿಗೆ ಸುಖಸ್ತೋಮವ ತೋರುತ

ಪಾಮರ ಮತಿಯನು ನೀ ಮಾಣಿಪುದು||1||

 

ವಜ್ರ ಶರೀರ ಗಂಭೀರ ಮುಕುಟಧರ

ದುರ್ಜನವನ ಕುಠಾರ.....ದುರ್ಜನವನ ಕುಠಾರ|

ನಿರ್ಜರ ಮಣಿ ದಯಪಾರ ವಾರ ಉದಾರ

ಸಜ್ಜನರಘ ಪರಿಹಾರ....ಸಜ್ಜನರಘ ಪರಿಹಾರ|

ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು

ಮೂರ್ಜಗವರಿವಂತೆ ಗರ್ಜನೆ ಮಾಡಿದಿ

ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪದದ ಧೂಳಿ

ಮರ್ಜನದಲಿ ಭವ ವರ್ಜಿತವೆನಿಸೋ||2||

 

ಪ್ರಾಣ ಅಪಾನ ವ್ಯಾನೋದಾನ ಸಮಾನ

ಆನಂದ ಭಾರತಿ ರಮಣ....ಆನಂದ ಭಾರತಿ ರಮಣ|

ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ

ಜ್ಞಾನಧನ ಪಾಲಿಪ ವರೇಣ್ಯ....ಜ್ಞಾನಧನ ಪಾಲಿಪ ವರೇಣ್ಯ|

ನಾನು ನಿರುತದಲಿ ಏನೇನೆಸಗುವೆ

ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ

ಪ್ರಾಣನಾಥ ಸಿರಿ ವಿಜಯ ವಿಠ್ಠಲನ

ಕಾಣಿಸಿ ಕೊಡುವುದು ಭಾನುಪ್ರಕಾಶ||3||

.............................................................................................

ಹಾಡಲು ಕಲಿಯಿರಿ(LEARN HOW TO SING THIS SONG)


Also see:

ಬಾಲಬೋಧೆ(ಮಕ್ಕಳ ಬಾಯಿಪಾಠ):ನವ ಗ್ರಹಗಳು |KIDS BYHEART: 9 GRAHAS


ಬಾನಿನಲ್ಲಿ ಮೂಡಿ ಬಂದ ಚಂದಮಾಮ(ಶಿಶುಗೀತೆ) : BANINALLI MOODI BANDA SONG LYRICS IN KANNADA

ಒಲವಿನ ಉಡುಗೊರೆ ಕೊಡಲೇನು(OLAVINA UDUGOARE KODALENU) SONG LYRICS IN KANNADA

 

ಒಲವಿನ ಉಡುಗೊರೆ ಕೊಡಲೇನು

ಒಲವಿನ ಉಡುಗೊರೆ ಕೊಡಲೇನು
ರಕುತದೆ ಬರೆದೆನು ಇದ ನಾನು
ಹೃದಯವೇ ಇದಾ ಮಿಡಿದಿದೆ
ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ||

ಪ್ರೇಮ ದೈವದ ಗುಡಿಯಂತೆ
ಪ್ರೇಮ ಜೀವನ ಸುಧೆಯಂತೆ
ಅಂತ್ಯ ಕಾಣದು ಅನುರಾಗ
ಎಂದು ನುಡಿವುದು ಹೊಸ ರಾಗ
ಒಲವು ಸಿಹಿ ನೆನಪು ಸಿಹಿ
ಹೃದಯಗಳ ಮಿಲನ ಸಿಹಿ
ಪ್ರೇಮವೇ ಕವನಾ ಮರೆಯದಿರು ||1||


ತಾಜಮಹಲಿನ ಚೆಲುವಲ್ಲಿ
ಪ್ರೇಮ ಚರಿತೆಯ ನೋಡಲ್ಲಿ
ಕಾಳಿದಾಸನ ಪ್ರತಿಕಾವ್ಯ
ಪ್ರೇಮ ಸಾಕ್ಷಿಯ ನಿಜದಲ್ಲಿ
ಕವಿತೆ ಇದಾ ಬರೆದಿರುವೆ
ಹೃದಯವನೆ ಕಳಿಸಿರುವೆ
ಕೋಮಲಾ ಇದು ನೀ ಎಸಯದಿರು||2||

....................................

Also See:

ಬಾರಿಸು ಕನ್ನಡ ಡಿಂಡಿಮವ (BAARISU KANNADA DINDIMAVA) LYRICS

ಕುದುರೇನ ತಂದೀವ್ನಿ ಜೀನಾವ ಬಿಗಿಸಿವ್ನಿ :KUDURENA THANDIVNI JEEVANA BIGISIVNI SONG LYRICS


ನಾನು ಸೈನ್ಯ ಸೇರುವೆ(ಕನ್ನಡ ಶಿಶುಗೀತೆ) | NAANU SAINYA SERUVE, KIDS' RHYMES IN KANNADA

 

ನಾನು ಸೈನ್ಯ ಸೇರುವೆ(ಕನ್ನಡ ಶಿಶುಗೀತೆ)


ನಾನು ಸೈನ್ಯ ಸೇರುವೆ, ಯುನಿಫ಼ರ್ಮ್ ಧರಿಸುವೆ

ಕಾಲಿಗೆ ಬೂಟು ಬಿಗಿಯುವೆ ನಾನು ಸೈನ್ಯ ಸೇರುವೆ||

 

ನಾನು ಸೈನ್ಯ ಸೇರುವೆ, ತಲೆಗೆ ಟೋಪಿ ಹಾಕುವೆ

ಕೈಯಲ್ಲಿ ಬಂದೂಕ್ ಹಿಡಿಯುವೆ,ನಾನು ಸೈನ್ಯ ಸೇರುವೆ||

 

ನಾನು ಸೈನ್ಯ ಸೇರುವೆ, ದೇಶದ ರಕ್ಷಣೆ ಮಾಡುವೆ

ವೀರ ಪದಕ ಪಡೆಯುವೆ, ನಾನು ಸೈನ್ಯ ಸೇರುವೆ||

.........................................................................................

ಹಾಡಲು ಕಲಿಯಿರಿ(LEARN TO SING THIS SONG)


Also See:


ಹುಚ್ಚು ಕೋಡಿ ಮನಸು(ಸಾಹಿತ್ಯ) | HUCHU KODI MANSU SONG LYRICS IN KANNADA

 ಹುಚ್ಚು ಕೋಡಿ ಮನಸು

(ಭಾವಗೀತೆ)

ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು ಮರುಗಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ||


ಸೆರಗು ತೀಡಿದಷ್ಟು ಹೊತ್ತು ಹಟಮಾಡುವ ಕೂದಲು
ಸೆರಗು ತೀಡಿದಷ್ಟು ಹೊತ್ತು ಹಟಮಾಡುವ ಕೂದಲು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು||1||


ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ನಗುತ ಅವಳ ಅಣುಕಿಸುತಿದೆ ಗಲ್ಲದ ಕರಿ ಮಚ್ಚೆ||2||


ಬರಿ ಹಸಿರು ಬರಿ ಹೂವು ಎದೆಯೊಳೆಷ್ಟು ಹೆಸರು
ಯಾವ ಮದುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು||3||

….......................................


Also See:

ಪರಿಸರ ಗೀತೆ : ಹೃದಯಾಂತರಾಳದಲ್ಲಿ ಅಡಗಿರುವ ನೋವುಗಳು| HRADAYANTARAALADALI ADAGIRUVA |NATURE SONG


ಕುದುರೇನ ತಂದೀವ್ನಿ ಜೀನಾವ ಬಿಗಿಸಿವ್ನಿ :KUDURENA THANDIVNI JEEVANA BIGISIVNI SONG LYRICS



ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ (ಸಾಹಿತ್ಯ) | NEE SIGADE BAALONDU BAALE KRISHNA LYRICS | KANNADA SONG

ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ  

(ಭಾವಗೀತೆ)


ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ
ನಾ ತಾಳಲಾರೆ ಈ ವಿರಹ ಕೃಷ್ಣ
ನೀ ಸಿಗದೆ ಬಾಳೊ೦ದು ಬಾಳೇ ಕೃಷ್ಣ||

ಕಮಲವಿಲ್ಲದ ಕೆರೆ ನನ್ನ ಬಾಳು
ಚ೦ದ್ರ ಇಲ್ಲದ ರಾತ್ರಿ ಬೀಳು
ಕಮಲವಿಲ್ಲದ ಕೆರೆ ನನ್ನ ಬಾಳು
ಚ೦ದ್ರನಿಲ್ಲದ ರಾತ್ರಿ ಬೀಳು
ನೀ ಸಿಗದೆ ಉರಿ ಉರಿ ಕಳೆದೆ ಇರುಳ
ಮಾತಿಲ್ಲ ಬಿಗಿದಿದೆ ದುಃಖ ಕೊರಳ ||1||


ಅನ್ನ ಸೇರದು ನಿದ್ದೆ ಬ೦ದುದೆ೦ದು
ಕುದಿವೆ ಒ೦ದೇ ಸಮ ಕೃಷ್ಣಾ ಎ೦ದು
ಅನ್ನ ಸೇರದು ನಿದ್ದೆ ಬ೦ದುದೆ೦ದು
ಕುದಿವೆ ಒ೦ದೇ ಸಮ ಕೃಷ್ಣಾ ಎ೦ದು
ಯಾರು ಅರಿವರು ಹೇಳು ನನ್ನ ನೋವ
ತಲ್ಲಣಿಸಿ ಕೂಗುತಿದೆ ದಾಸಿ ಜೀವ ||2||

ಒಳಗಿರುವ ಗಿರಿಧರನೆ ಹೊರಗೆ ಬಾರೋ
ಕಣ್ಣೆದುರು ನಿ೦ತು ಆ ರೂಪ ತೋರೋ
ಒಳಗಿರುವ ಗಿರಿಧರನೆ ಹೊರಗೆ ಬಾರೋ
ಕಣ್ಣೆದುರು ನಿ೦ತು ಆ ರೂಪ ತೋರೋ
ಜನುಮ ಜನುಮದಾ ರಾಗ ನನ್ನ ಪ್ರೀತಿ
ಕೃಷ್ಣಾ... ಕೃಷ್ಣಾ... ಕೃಷ್ಣಾ... ಕೃಷ್ಣಾ...
ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೆ ಅದರ ರೀತಿ ||3||

……………………………………………………………………………………………


Also See:

ಜನ್ಮದಿನದ ಶುಭಾಶಯ: ಸಂಸ್ಕೃತ : HAPPY BIRTHDAY SONG IN SANSKRIT.

ಯೋಧರೇ ಬಯಸಿ ಬನ್ನಿ-ಸಾಹಿತ್ಯದೊಂದಿಗೆ ಹಾಡಲು ಕಲಿಯಿರಿ(YODHARE BAYASI BANNI- LEARN TO SING WITH LYRICS)


ಆಂಜನೇಯ ಶ್ಲೋಕಗಳು((ಅರ್ಥ ಸಹಿತ) | LORD ANJANEYA /HANUMAN SHLOKAS LYRICS WITH MEANING IN KANNADA

  ಆಂಜನೇಯ ಶ್ಲೋಕಗಳು

(ಅರ್ಥ ಸಹಿತ)


1 . ಮನೋಜವಂ ಮಾರುತ ತುಲ್ಯ ವೇಗ೦ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ|

    ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮ ದೂತಂ ಶರಣಂ ಪ್ರಪದ್ಯೇ||

  ಅರ್ಥ: ಮನಸ್ಸಿನ  ಆಲೋಚನೆಯಂತೆ ಚುರುಕಾದ, ಗಾಳಿಗಿಂತ ಹೆಚ್ಚು ವೇಗವುಳ್ಳ,ಇಂದ್ರಿಯಗಳನ್ನು ಜಯಿಸಿದವನು, ಬುದ್ಧಿವಂತರಲ್ಲಿ ಉತ್ತಮನಾದ, ವಾಯುವಿನ ಮಗನಾದ, ವಾನರ ಸೇನೆ  ಮುಖ್ಯಸ್ಥನಾದ,ಶ್ರೀ ರಾಮ ದೂತನಾದ ಆಂಜನೇಯ ಸ್ವಾಮಿಯನ್ನು ನಾನು ವಂದಿಸುತ್ತೇನೆ.


2. ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾ

   ಅಜಾಡ್ಯಂ ವಾಕ್ಪಟುತ್ವಂ ಹನುಮತ್ ಸ್ಮರಣಾದ್ ಭವೇತ್||

ಅರ್ಥ: ಯಾವುದೇ ಪರಿಸ್ಥಿತಿಯನ್ನು ಅರ್ಥಮಾಡಿ ಕೊಳ್ಳುವ ಬುದ್ಧಿವಂತಿಕೆ, ಶಕ್ತಿ, ಒಳ್ಳೆಯ ವ್ಯಕ್ತಿತ್ವ, ಧೈರ್ಯ, ನಿರ್ಭಯತೆ, ಆರೋಗ್ಯ, ಚುರುಕುತನ, ಮಾತಿನ ಕೌಶಲ್ಯ, ಇವೆಲ್ಲವೂ ಹನುಮಂತ ಸ್ಮರಣೆಯಿಂದ ಲಭಿಸುತ್ತದೆ.


ಹಾಡಲು ಕಲಿಯಿರಿ(LEARN HOW TO SING THIS SONG)

Also See:

ಭಗವದ್ಗೀತೆ ಶ್ಲೋಕಗಳು - 1 (WITH MEANING IN KANNADA)

GURU STOTRAM: ಗುರು ಸ್ತೋತ್ರಮ್ |SHLOKAS WITH MEANING

ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ SONG LYRICS IN KANNADA |VIGHNESHWARA NINAGE PRATHAMA PRANAMA | LORD GANESHA SONGS

  ಹಾಡಲು ಕಲಿಯಿರಿ(CLICK HERE TO LEARN THIS SONG) ವಿಘ್ನೇಶ್ವರ ನಿನಗೆ ಪ್ರಥಮ ಪ್ರಣಾಮ ಸ್ಮರಿಸುವೆ ನಿನ್ನಯ ದಿವ್ಯ ನಾಮ ॥   ವಿಘ್ನ ವಿನಾಶಕ ಬುದ್ಧಿಪ್ರ...