Jul 12, 2025

ಕಾಣದಂತೆ ಮಾಯವಾದನು SONG LYRICS | CHALISUVA MODAGALU | KANNADA SAVIGANA LYRICS |

 ಹಾಡಲು ಕಲಿಯಿರಿ(CLICK HERE TO LEARN THIS SONG)

ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು.
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು,
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು,
ಕೈಯ ಕೊಟ್ಟು ಓಡಿ ಹೋದನು.
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು. ||

ಆಕಾಶ ಮೇಲೆ ಇಟ್ಟನು ನಮ್ಮ ಶಿವ
ಪಾತಾಳ ಕೆಳಗೆ ಬಿಟ್ಟನು.
ಆಕಾಶ ಮೇಲೆ ಇಟ್ಟನು ನಮ್ಮ ಶಿವ
ಪಾತಾಳ ಕೆಳಗೆ ಬಿಟ್ಟನು.
ನಡುವೆ ಈ ಭೂಮಿಯನ್ನು ದೋಣಿಯಂತೆ ತೇಲಿಬಿಟ್ಟು,
ಕಾಣದಂತೆ, ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು. ||1||


ಹೆಣ್ಣಿಗೆಂದು ಅಂದ ಕೊಟ್ಟನು ನಮ್ಮ ಶಿವ
ಗಂಡಿನಲ್ಲಿ ಆಸೆ ಇಟ್ಟನು,
ಹೆಣ್ಣಿಗೆಂದು ಅಂದ ಕೊಟ್ಟನು ನಮ್ಮ ಶಿವ
ಗಂಡಿನಲ್ಲಿ ಆಸೆ ಇಟ್ಟನು,
ಹೆಣ್ಣು ಗಂಡು ಸೇರಿಕೊಂಡು ಯುದ್ದವನ್ನು ಮಾಡುವಾಗ,
ಕಾಣದಂತೆ, ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು||2||


ನೆಲ್ಲಿಕಾಯಿ ಮರದಲಿಟ್ಟನು ನಮ್ಮ ಶಿವ
ಕುಂಬ್ಳಕಾಯಿ ಬಳ್ಳಿಲಿಟ್ಟನು,
ನೆಲ್ಲಿಕಾಯಿ ಮರದಲಿಟ್ಟನು ನಮ್ಮ ಶಿವ
ಕುಂಬ್ಳಕಾಯಿ ಬಳ್ಳಿಲಿಟ್ಟನು,
ಹೂವು ಹಣ್ಣು ಕಾಯಿ ಕೊಟ್ಟು ಜಗಳ ಆಡೋ ಬುದ್ದಿ ಕೊಟ್ಟು,
ಕಾಣದಂತೆ, ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು||3||
.................................................................................................

Also see:

ಮಂಕುತಿಮ್ಮನ ಕಗ್ಗ ಅರ್ಥ | MANKUTIMMANA KAGGA |DVG

ಹೊನ್ನು ತಾ ಗುಬ್ಬಿ ಹೊನ್ನು ತಾ | ಹೆಳವನ ಕಟ್ಟೆ ಗಿರಿಯಮ್ಮ | HONNU THA GUBBI SONG LYRICS IN KANNADA |HELAVANA KATTE GIRIYAMMA |

Jul 8, 2025

ಮಂಕುತಿಮ್ಮನ ಕಗ್ಗ ಅರ್ಥ | MANKUTIMMANA KAGGA |DVG | KANNADA SAVIGANA LYRICS


ನೂರಾರು ಮತವಿಹುದು ಲೋಕದುಗ್ರಾಣದಲಿ

ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್

ಸಾರದಡುಗೆಯನೊಳವಿಚಾರದೊಲೆಯಲಿ ಮಾಡು

ಬೇರೆ ಮತಿ ಬೇರೆ ಮತ ಮಂಕುತಿಮ್ಮ

 

ಲೋಕದ ಉಗ್ರಾಣದಲ್ಲಿ ನೂರಾರು ಮತಗಳಿರುವವು. ಅದರಲ್ಲಿ ನಿನ್ನ ಮನಸ್ಸಿಗೆ ಒಪ್ಪುವುದನ್ನು ಆರಿಸಿಕೊ. ವಿಚಾರದ ಒಲೆಯಲ್ಲಿ ಅನುಭವದ ಅಡುಗೆ ಮಾಡು .ಮತಿಯಂತೆ ಮತವಿರುವುದು.

....................................................................................................................................................

Jul 7, 2025

ಹೊನ್ನು ತಾ ಗುಬ್ಬಿ ಹೊನ್ನು ತಾ | ಹೆಳವನ ಕಟ್ಟೆ ಗಿರಿಯಮ್ಮ | HONNU THA GUBBI SONG LYRICS IN KANNADA |HELAVANA KATTE GIRIYAMMA |

 

ಹೊನ್ನು ತಾ ಗುಬ್ಬಿ ಹೊನ್ನು ತಾ

ನಮ್ಮ ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ |

ತಾ ಹೊನ್ನು ತಾ ಗುಬ್ಬಿ ತಾ ಹೊನ್ನು ತಾ ।

ತಾ ಗುಬ್ಬಿ ತಾ ಹೊನ್ನು ತಾ ಗುಬ್ಬಿ ತಾ ॥

 

ಆಗಮವನು ತಂದು ಜಗಕಿತ್ತ ಕೈಗೆ

ಸಾಗರವ ಮಥಿಸಿ ಸುಧೆ ತಂದ ಕೈಗೆ

ತೂಗಿ ಮಾತಾಡುವ ಸ್ಥೂಲಕಾಯನ ಕೈಗೆ|

ಸಾಗರ ಪತಿ ನಮ್ಮ ನರಸಿಂಹನ ಕೈಗೆ ||1||

 

ಬಲಿಯ ದಾನವ ಬೇಡಿ ಬಂದಂಥ ಕೈಗೆ

ಛಲದಿಂದ ಕ್ಷತ್ರಿಯರ ಕೊಂದ0ಥ ಕೈಗೆ

ಕಲಿ ವಿಭೀಷಣ ಗಭಯವಿತ್ತಂಥಾ ಕೈಗೆ |

ಬಲುಬೆಟ್ಟ ಬೆರಳಲ್ಲಿ ಹೊತ್ತಂಥ ಕೈಗೆ ||2||

 

ಪತಿವ್ರತೆಯರ ವ್ರತ ಅಳಿದಂಥ ಕೈಗೆ

ಹಿತವಾಜಿಯನೇರಿ ಮರ್ದಿಸಿದಂಥ ಕೈಗೆ

ಸತಿಶಿರೋಮಣಿ ಲಕ್ಷೀಕಾಂತನ ಕೈಗೆ

ಚತುರ ಹೆಳವನಕಟ್ಟೆ ರಂಗನ ಕೈಗೆ ||3||

……………………………………………….


Jul 6, 2025

ಅಂತರತಮ ನೀ ಗುರು |ANTHARA THAMA NEE LYRICS | KUVEMPU | KANNADA SAVIGANA LYRICS

 ಹಾಡಲು ಕಲಿಯಿರಿ(CLICK HERE TO LEARN THIS SONG)

ಅಂತರತಮ ನೀ ಗುರು
ಹೇ ಆತ್ಮ ತಮೋಹಾರಿ ||

ಜಟಿಲ ಕುಟಿಲ ತಮ ಅಂತರಂಗ
ಬಹು ಭಾವ ವಿಪಿನ ಸಂಚಾರಿ || 1 ||

ಜನುಮ ಜನುಮ ಶತ ಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ || 2 ||

ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ
ರೂಪ ಅರೂಪ ವಿಹಾರಿ || 3 ||

................................................................................................................................................. 


Jul 5, 2025

ಕಂಡೆ ನಾ ತಂಡ ತಂಡದ ಹಿಂಡು ದೈವ |ನರಸಿಂಹ SONG |KANDE NAA TANDA TANDA | KANAKA DASA |KANNADA SAVIGANA LYRICS|


ಹಾಡಲು ಕಲಿಯಿರಿ(CLICK HERE TO LEARN THIS SONG)

 ಜಯ ಜಯ ನಾರಸಿಂಹ

ಜಯ ಜಯ ನಾರಸಿಂಹ

ಕಂಡೆ ನಾ ತಂಡ ತಂಡದ  ಹಿಂಡು ದೈವ

ಪ್ರಚಂಡ ರಿಪುಗಂಡ ಉದ್ದಂಡ ನರಸಿಂಹನ  ।। ಪ ।।

 

ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ

ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು

ಘಡ ಘಡನೆ ನಡು ನಡುಗೆ ಘುಡುಘುಡಿಸಿ ಸಭೆ ಬೆದರೆ

ಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ ।। 1 ।।

 

ಉರದೊಳಪ್ಪಳಿಸಿ ಅರಿ ಬಸಿರ ಸರಸರ ಸೀಳಿ

ಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು ನರ

ನರವನ್ನು ತೆಗೆದು ನಿರ್ಗಳಿತ ಶೋಣಿತ ಸುರಿಯೆ

ಹರಿಹರಿದು ಕರುಳ ಕೊರಳೊಗೆಯಿಟ್ಟವನ || 2 ||

 

ಪುರಜನರು ಹಾಯೆನಲು ಸುರರು ಹೂಮಳೆಗರೆಯೆ

ತರತರದ ವಾದ್ಯ ಸಂಭ್ರಮಗಳಿಂದ

ಹರಿಹರಿಯೆ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ

ಕರುಣಾಳು ಕಾಗಿನೆಲೆಯಾದಿಕೇಶವನ ||3||

.......................................................................................


ಮನ ಮಂದಿರದೊಳು ನೆಲಸಿ ಬಂದು | ರಾಘವೇಂದ್ರ SONG LYRICS |MANA MANDIRADOLU SONG LYRICS |KANNADA SAVIGANA LYRICS|

 

ಮನ ಮಂದಿರದೊಳು ನೆಲಸಿ ಬಂದು

ರಾಘವೇಂದ್ರ ಗುರು ದಯ ಮಾಡಿಂದೂ....||||

 

 ನಗೆ ನೋವಿನ ಆಗರವೀ ಮನವು

ಭವ ಬಂಧನದೀ ಕಾಣದ ತಿಳಿವು ||

ಗುರುಪಾದ ಸೇವೆಯು ನೀಡಲಿ ಅರಿವು

ನಿನ್ನಯ ಕೃಪೆ ಎನಗೆ ಇಹ ಪರವು  ||||


  ವರ ಮಂತ್ರಾಲಯ ಪಾವನ ನಿಲಯ | 

ಕರುಣ ಹೃದಯವೇ  ನೀಡುವ ಅಭಯ || 

ಮನದಲಿ ಮುಸುಕಿದ ಕತ್ತಲೆಯ |  

ನೀಗಿಸಿ ಬೆಳಕನು ನೀ... ನೀಡು ಜೀಯಾ ||||

 

 ಬೃಂದಾವನವೇ ತವ ಸ್ಥಿರ  ವಾಸವು |

  ವೇಣು ವಿಹಾರಿಯ ಧ್ಯಾನದಿ ನಿರತವು ||  

ದೀನರ ಪಾಲಿಪ ಧೀಮಂತ ಭಾವವು | 

ಗುರು ಸುಯತೀಂದ್ರರ ಕೃಪೆ ಸಾಧನವು|| ೩||

..............................................................................................


ಶಕ್ತನಾದರೆ ನೆಂಟರೆಲ್ಲ ಹಿತರು| SHAKTHANADARE NENTARELLA HITARU |PURANDARA DASA |KANNADA SAVIGANA LYRICS|

 

ಶಕ್ತನಾದರೆ ನೆಂಟರೆಲ್ಲ ಹಿತರು| -

ಶಕ್ತನಾದರೆ ನೋಡಲವರೆ ವೈರಿಗಳು ||

 

ಕಮಲ ಅರ್ಕನಲಿರುವ ಕಡು ನೆಂಟತನದಿಂದ

ವಿಮಲ ಜಲದೊಳಗೆ ಓಲಾಡುತಿಹುದು|

ಕ್ರಮಗೆಟ್ಟು ನೀರಿಂದ ಕಡೆಗೆ ಬೀಳಲು ರವಿಯ

ಅಮಿತ ಕಿರಣಗಳಿಂದ ಕಂದಿಹೋಗುವುದು||1||

 

ವನಸುತ್ತಿ ಸುಡುವಾಗ ವಾಯು ಬೀಸಲು ಉರಿಯು

ಘನ ಪ್ರಜ್ವಲಿಸುತಿಹುದು ಗಗನಕಡರಿ|

ಮನೆಯೊಳಿಹ ದೀಪಕ್ಕೆ ಮಾರುತನು ಸೋಂಕಿದರು

ಘನಶಕ್ತಿಯುಡುಗಿ ತಾ ನಂದಿಹೋಗುವುದು||2||

 

 ವರದ ಶ್ರೀ ಪುರಂದರವಿಟ್ಠಲನು ಒಲಿದಿರಲು

ರ್ವ ಜನರೆಲ್ಲ ಮೂಜಗದಿ ಹಿತರು|

ಕರಿಯ ಕಾಯಿದ ಹರಿಯ ಕರುಣ ತಪ್ಪಿದ ಮೇಲೆ

ಮೊರೆ ಹೊಕ್ಕರು ಕಾವ ಹಿತವರಾರಯ್ಯ||3||

.......................................................................................................


ಬಂದ ದುರಿತಗಳ ಪರಿಹರಿಸಲು |BANDA DURITHAGALA PARIHARISALU | PRANESHA DASA | KANNADA SAVIGANA LYRICS|

 

ಬಂದ ದುರಿತಗಳ ಪರಿಹರಿಸಲು ನಮ್ಮ

ಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು| 

ಬಂದನು ಬರದಿಂದ ಗರುಡವಾಹನನಾಗಿ

ಬಂದ ಬಂದ ಭಕ್ತವೃಂದವ ನೋಡುತ

ಬಂದ , ಗೋವಿಂದ ,ಮುಕುಂದ ,ನಿತ್ಯಾನಂದ, ಬಂದಾ...||

 

ದುರುಳನಾದ ದುಶ್ಯಾಸನ ಸಭೆಯೊಳು

ತರುಣಿ ದ್ರೌಪದಿಯ ಸೀರೆಯ ಸೆಳೆಯಲು

ಪರಮ ಕರುಣದಿಂದ ತರುಣಿಗಕ್ಷಯವಿತ್ತು

ದ್ವಾರಕಾಧಿಪತಿ ಶ್ರೀಪತಿ ಒಲಿಯುತ

ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||1||

 

ಅರಗಿನಮನೆಯೊಳು ಪಾಂಡು ಕುಮಾರರು

ಇರುತಿರೆ ಅವರಿಗೆ ಬಂದ ವಿಪತ್ತನು 

ಪರಿಹಾರವ ಮಾಡಿ ದ್ರುಪದನ ಪೊರೆಯಲು

ಪರಮ ಹರುಷದಿಂದ ಮದುವೆಯ ಮಾಡಿದವ

ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||2||

 

ಗುಣನಿಧಿ ಪ್ರಾಣೇಶ ವಿಠ್ಠಲನು ಬಂದ ,ಘನತರವಾದ್ಯ ವಿಶೇಷಗಳಿಂದ

ಝಣಝಣರೆನ್ನುವ ಗೆಜ್ಜೆನಾದಗಳಿಂದ||2||

ಥದ್ದಿಮಿ  ಧಿಮಿಕ್ಕೆಂದು ಕುಣಿಯುತ ಬಂದ 

ಝಣಝಣ ಧಿಮಿಕ್ಕೆಂದು ಕುಣಿಯುತ ಬಂದ 

ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||3||

.............................................................................................................