ಶಕ್ತನಾದರೆ
ನೆಂಟರೆಲ್ಲ ಹಿತರು| ಅ-
ಶಕ್ತನಾದರೆ ನೋಡಲವರೆ ವೈರಿಗಳು ||
ಕಮಲ
ಅರ್ಕನಲಿರುವ ಕಡು ನೆಂಟತನದಿಂದ
ವಿಮಲ
ಜಲದೊಳಗೆ ಓಲಾಡುತಿಹುದು|
ಕ್ರಮಗೆಟ್ಟು
ನೀರಿಂದ ಕಡೆಗೆ ಬೀಳಲು ರವಿಯ
ಅಮಿತ
ಕಿರಣಗಳಿಂದ ಕಂದಿಹೋಗುವುದು||1||
ವನಸುತ್ತಿ
ಸುಡುವಾಗ ವಾಯು ಬೀಸಲು ಉರಿಯು
ಘನ ಪ್ರಜ್ವಲಿಸುತಿಹುದು ಗಗನಕಡರಿ|
ಮನೆಯೊಳಿಹ
ದೀಪಕ್ಕೆ ಮಾರುತನು ಸೋಂಕಿದರು
ಘನಶಕ್ತಿಯುಡುಗಿ
ತಾ ನಂದಿಹೋಗುವುದು||2||
ವರದ ಶ್ರೀ ಪುರಂದರವಿಟ್ಠಲನು ಒಲಿದಿರಲು
ಸರ್ವ ಜನರೆಲ್ಲ ಮೂಜಗದಿ ಹಿತರು|
ಕರಿಯ
ಕಾಯಿದ ಹರಿಯ ಕರುಣ ತಪ್ಪಿದ ಮೇಲೆ
ಮೊರೆಯ
ಹೊಕ್ಕರು ಕಾವ ಹಿತವರಾರಯ್ಯ||3||
.......................................................................................................
No comments:
Post a Comment