ಬಂದ ದುರಿತಗಳ ಪರಿಹರಿಸಲು ನಮ್ಮ
ಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು|
ಬಂದನು ಬರದಿಂದ ಗರುಡವಾಹನನಾಗಿ
ಬಂದ ಬಂದ ಭಕ್ತವೃಂದವ ನೋಡುತ
ಬಂದ , ಗೋವಿಂದ ,ಮುಕುಂದ ,ನಿತ್ಯಾನಂದ, ಬಂದಾ...||
ದುರುಳನಾದ ದುಶ್ಯಾಸನ ಸಭೆಯೊಳು
ತರುಣಿ ದ್ರೌಪದಿಯ ಸೀರೆಯ ಸೆಳೆಯಲು
ಪರಮ ಕರುಣದಿಂದ ತರುಣಿಗಕ್ಷಯವಿತ್ತು
ದ್ವಾರಕಾಧಿಪತಿ ಶ್ರೀಪತಿ ಒಲಿಯುತ
ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||1||
ಅರಗಿನಮನೆಯೊಳು ಪಾಂಡು ಕುಮಾರರು
ಇರುತಿರೆ ಅವರಿಗೆ ಬಂದ ವಿಪತ್ತನು
ಪರಿಹಾರವ ಮಾಡಿ ದ್ರುಪದನ ಪೊರೆಯಲು
ಪರಮ ಹರುಷದಿಂದ ಮದುವೆಯ ಮಾಡಿದವ
ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||2||
ಗುಣನಿಧಿ ಪ್ರಾಣೇಶ ವಿಠ್ಠಲನು ಬಂದ ,ಘನತರವಾದ್ಯ ವಿಶೇಷಗಳಿಂದ
ಝಣಝಣರೆನ್ನುವ ಗೆಜ್ಜೆನಾದಗಳಿಂದ||2||
ಥದ್ದಿಮಿ ಧಿಮಿಕ್ಕೆಂದು ಕುಣಿಯುತ ಬಂದ
ಝಣಝಣ ಧಿಮಿಕ್ಕೆಂದು ಕುಣಿಯುತ ಬಂದ
ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||3||
.............................................................................................................
No comments:
Post a Comment