ಹಾಡಲು ಕಲಿಯಿರಿ(CLICK HERE TO LEARN THIS SONG)
ಬಲಿಯ
ಮನೆಗೆ ವಾಮನ ಬಂದಂತೆ
ಭಗೀರಥನ
ಮನೆಗೆ ಶ್ರೀಗಂಗೆ ಬಂದಂತೆ
ಮುಚುಕುಂದನ
ಮನೆಗೆ ಶ್ರೀ ಮುಕುಂದ ಬಂದಂತೆ
ಗೋಪಿಯರಿಗೆ
ಗೋವಿಂದ ಬಂದಂತೆ
ವಿದುರನ
ಮನೆಗೆ ಶ್ರೀ ಕೃಷ್ಣ ಬಂದಂತೆ
ವಿಭೀಷಣನ
ಮನೆಗೆ ಶ್ರೀ ರಾಮ ಬಂದಂತೆ
ನಿನ್ನ
ನಾಮವು ಬಂದು ಎನ್ನ ನಾಲಿಗೆಯಲಿ ನಿಂದು
ಸಲಹಲಿ
ಶ್ರೀ ಪುರಂದರವಿಠಲ||
No comments:
Post a Comment