ಮನ ಮಂದಿರದೊಳು ನೆಲಸಿ ಬಂದು
ರಾಘವೇಂದ್ರ
ಗುರು ದಯ ಮಾಡಿಂದೂ....||ಪ||
ನಗೆ ನೋವಿನ ಆಗರವೀ ಮನವು |
ಭವ ಬಂಧನದೀ ಕಾಣದ
ತಿಳಿವು ||
ಗುರುಪಾದ ಸೇವೆಯು ನೀಡಲಿ ಅರಿವು |
ನಿನ್ನಯ ಕೃಪೆ ಎನಗೆ ಇಹ ಪರವು ||೧||
ವರ ಮಂತ್ರಾಲಯ ಪಾವನ
ನಿಲಯ |
ಕರುಣ ಹೃದಯವೇ ನೀಡುವ ಅಭಯ ||
ಮನದಲಿ ಮುಸುಕಿದ ಈ ಕತ್ತಲೆಯ |
ನೀಗಿಸಿ ಬೆಳಕನು ನೀ... ನೀಡು ಜೀಯಾ ||೨||
ಬೃಂದಾವನವೇ ತವ ಸ್ಥಿರ ವಾಸವು |
ವೇಣು ವಿಹಾರಿಯ ಧ್ಯಾನದಿ ನಿರತವು ||
ದೀನರ ಪಾಲಿಪ ಧೀಮಂತ ಭಾವವು |
ಗುರು
ಸುಯತೀಂದ್ರರ ಕೃಪೆ ಸಾಧನವು||
..............................................................................................
No comments:
Post a Comment