Jul 29, 2025

ಸುಭಾಷಿತ ಪದಚ್ಛೇದ: ಉದ್ಯಮೇನೈವ ಸಿದ್ಧ್ಯಂತಿ | SUBHASHITA :UDYAMENAIVA SIDHYANTI | WITH ANVAYA AND MEANING

 click here to learn this subhashita(youtube)

उद्यमेनैव सिध्यन्ति कार्याणि  मनोरथै: |

 हि सुप्तस्य सिम्हस्य प्रविषन्ति मुखे मृगाः ||

 

ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿ  ಮನೋರಥೈಃ

ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾ: ||


उद्यमेन =  ಕೆಲಸದಿಂದ (ಪುಲ್ಲಿಂಗ; ತೃತೀಯ ವಿಭಕ್ತಿ, ಏಕವಚನ) 

  एव= ಮಾತ್ರ (ಅವ್ಯಯ)  

सिध्यन्ति=  ಸಿದ್ಧಿಸುತ್ತವೆ(ಕ್ರಿಯಾಪದ, ಪ್ರಥಮ ಪುರುಷ ,ಬಹುವಚನ)

 कार्याणि=  ಕಾರ್ಯಗಳು (ನ. ಪ್ರ. ಬ)

 न =  ಇಲ್ಲ(ಅವ್ಯಯ) 

 मनोरथै: =ಮನಸ್ಸಿನಲ್ಲಿ ಆಸೆ ಪಡುವುದರಿಂದ (ಪು,ತೃ,ಬ) 

हि = ಖಂಡಿತ (ಅವ್ಯಯ)

सुप्तस्य =   ಮಲಗಿರುವ( ಪು. ಷ. ಏಕ, ವಿಶೇಷಣ)

सिम्हस्य=  ಸಿಂಹದ (ಪು. ಷ.ಏಕ)

 प्रविशन्ति= ಪ್ರವೇಶಿಸುತ್ತವೆ (ಕ್ರಿಯಾ. ಉ. ಬಹು)

 मुखे=    ಬಾಯಿ (ನ. ಸ. ಏಕ) 

मृगा:=  ಪ್ರಾಣಿಗಳು( ಪು. ಪ್ರ. ಬ)


ಅರ್ಥ:

ಬರಿ ಆಸೆ ಪಡುವುದರಿಂದ ಅಥವಾ ಕನಸು ಕಾಣುವುದರಿಂದ ಕಾರ್ಯಗಳು ಕೈಗೂಡುವುದಿಲ್ಲ.

ಕೆಲಸವನ್ನು ಮಾಡಿದರಷ್ಟೇ ಕಾರ್ಯಗಳು ಕೈಗೂಡುವುವು.

ಮಲಗಿರುವ ಸಿಂಹದ ಬಾಯಿಗೆ ಯಾವ ಪ್ರಾಣಿಯೂ (ಇಲ್ಲಿ ಮೃಗ ಎಂದರೆ ಜಿಂಕೆತಾನಾಗಿಯೇ ಹೋಗಿ ಬೀಳುವುದಿಲ್ಲಕಾಡಿನ ರಾಜನಾದರೂ ಕೂಡ ಸಿಂಹವು ತನ್ನ ಪ್ರಯತ್ನದಿಂದ ಬೇಟೆಯನ್ನು ಪಡೆಯಬೇಕು.

...........................................................................................................................

Also see: 

वासर:/ವಾರಗಳು | WEEK NAMES IN SANSKRIT 


No comments:

Post a Comment