ಹಾಡಲು ಕಲಿಯಿರಿ(CLICK HERE TO LEARN THIS SONG)
ಜಯ ಜಯ ನಾರಸಿಂಹ
ಜಯ ಜಯ ನಾರಸಿಂಹ
ಕಂಡೆ ನಾ ತಂಡ ತಂಡದ ಹಿಂಡು ದೈವ
ಪ್ರಚಂಡ ರಿಪುಗಂಡ ಉದ್ದಂಡ ನರಸಿಂಹನ ।। ಪ ।।
ಘುಡುಘುಡಿಸಿ
ಕಂಬದಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸೆ
ನುಡಿಯಡಗಲೊಡನೆ ಮುಡಿವಿಡಿದು
ಘಡ ಘಡನೆ ನಡು ನಡುಗೆ
ಘುಡುಘುಡಿಸಿ ಸಭೆ ಬೆದರೆ
ಹಿಡಿ
ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ
।। 1 ।।
ಉರದೊಳಪ್ಪಳಿಸಿ
ಅರಿ ಬಸಿರ ಸರಸರ ಸೀಳಿ
ಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು ನರ
ನರವನ್ನು ತೆಗೆದು ನಿರ್ಗಳಿತ ಶೋಣಿತ ಸುರಿಯೆ
ಹರಿಹರಿದು
ಕರುಳ ಕೊರಳೊಗೆಯಿಟ್ಟವನ || 2 ||
ಪುರಜನರು
ಹಾಯೆನಲು ಸುರರು ಹೂಮಳೆಗರೆಯೆ
ತರತರದ
ವಾದ್ಯ ಸಂಭ್ರಮಗಳಿಂದ
ಹರಿಹರಿಯೆ
ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ
ಕರುಣಾಳು
ಕಾಗಿನೆಲೆಯಾದಿಕೇಶವನ ||3||
.......................................................................................
No comments:
Post a Comment