Jul 18, 2025

ಈತ ಲಿಂಗದೇವ ಶಿವನು - ಹೆಳವನಕಟ್ಟೆ ಗಿರಿಯಮ್ಮsong lyrics eetha ling deva shivanu

 ಹಾಡಲು ಕಲಿಯಿರಿ(CLICK HERE TO LEARN THIS SONG)

ಈತ ಲಿಂಗದೇವ ಶಿವನು 

ಆತ ರಂಗಧಾಮ ವಿಷ್ಣು

ಮಾತ ಕೇಳೊ ಮಂಕು ಮನುಜ

 ಮನದ ಅಹಂಕಾರವ ಬಿಟ್ಟು ||

 

ವೇದಕ್ಕೆ ಸಿಕ್ಕಿದನೀತ

 ವೇದ ನಾಲ್ಕು ತಂದವನಾತ

ಬೂದಿ ಮೈಯೊಳು ಧರಿಸಿದನೀತ

 ಪೋದಗಿರಿಯ ಪೊತ್ತವನಾತ ||1||

 

ವ್ಯಾಧನಾಗಿ ಒಲಿದವನೀತ

 ಮಾಧವ ಮಧುಸೂದನನಾತ

ಮದನನ್ನು ಉರಿಹಿದನೀತ

 ಮದನನನ್ನೆ ಪಡೆದವನಾತ||2||

 

ಗಂಗೆಯನ್ನು ಪೊತ್ತವನೀತ

 ಗಂಗೆ ಪದದಿ ಪಡೆದವನಾತ

ತುಂಗ ಹೆಳವನಕಟ್ಟೆ ಲಿಂಗ

ಅಂತರಂಗ ರಂಗನಾಥ ||3||

 ....................................................................................


No comments:

Post a Comment