ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ: ರಾಷ್ಟ್ರಕವಿ ಕುವೆಂಪು
ಭಕ್ತಿಗೀತೆ, ಜಾನಪದ ಗೀತೆ, ದೇಶಭಕ್ತಿ ಗೀತೆ, ಚಲನಚಿತ್ರ ಗೀತೆ, ಶಾಲಾ ಪ್ರಾರ್ಥನೆ, ಭಾವನಾತ್ಮಕ ಹಾಡುಗಳು, ಶ್ಲೋಕಗಳು ಮತ್ತು ಸುಭಾಷಿತಗಳು ಸೇರಿದಂತೆ ಎಲ್ಲಾ ರೀತಿಯ ಕನ್ನಡ ಹಾಡುಗಳನ್ನು ಕಲಿಯಲು ಆಸಕ್ತಿ ಹೊಂದಿರುವ ಯಾರಿಗಾದರೂ ಈ ಬ್ಲಾಗ್ ಉಪಯುಕ್ತವಾಗಿದೆ. ಹೆಚ್ಚಿನ ಹಾಡುಗಳ ಸಾಹಿತ್ಯದ ಕೊನೆಯಲ್ಲಿ ಹಾಡನ್ನು ಕಲಿಯಲು ಅನೂಕೂಲವಾಗುವಂತೆ, ಯು ಟ್ಯೂಬ್ ಲಿಂಕ್ ಅನ್ನು ಕೊಡಲಾಗಿದೆ.
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ: ರಾಷ್ಟ್ರಕವಿ ಕುವೆಂಪು
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ: ಸು ರಂ ಎಕ್ಕುಂಡಿ
ಕನ್ನಡ ನಾಡಿನ
ಕರಾವಳಿ ಕನ್ನಡ ದೇವಿಯ ಪ್ರಭಾವಳಿ
ಕನ್ನಡ ನಾಡಿನ
ಕರಾವಳಿ ಕನ್ನಡ ದೇವಿಯ ಪ್ರಭಾವಳಿ
ನದಿಗಳ
ಜೊತೆಯಲ್ಲಿ ನಲಿದವರು ನಾವೆಲ್ಲ
ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ
ನದಿಗಳ
ಜೊತೆಯಲ್ಲಿ ನಲಿದವರು ನಾವೆಲ್ಲ
ಜಗಕೆಲ್ಲ ಒಬ್ಬನೆ
ಅ೦ಬಿಗನಣ್ಣ
ನಾವೆಲ್ಲ
ಅವನನ್ನೆ ನ೦ಬಿದೆವಣ್ಣ
ನಾವೆಲ್ಲ
ಅವನನ್ನೆ ನ೦ಬಿದೆವಣ್ಣ ||1||
ಸಹ್ಯಾದ್ರಿ ವನಗಳ ಸು೦ದರ ಭೂದೇವಿ
ಬಾಳೆಯ ವೀಳೆಯ ಸಿರಿವ೦ತೆ ಶ್ರೀದೇವಿ
ಸಹ್ಯಾದ್ರಿ ವನಗಳ ಸು೦ದರ ಭೂದೇವಿ
ಧರ್ಮವ ಸಾರುವ ಧರ್ಮಸ್ಠಳ
ಉಡುಪಿಯೇ ವೈಕು೦ಠ …..ಗೋಕರ್ಣ ಕೈಲಾಸ ||2||
ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು
ಸಾವಿರ ಸ೦ಸಾರ ಬದುಕಿಗೆ ಹೊನ್ನು
ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು
ಸಾವಿರ ಸ೦ಸಾರ ಬದುಕಿಗೆ ಹೊನ್ನು
ಮ೦ಗೇಶರಾಯರು ಗೋವಿ೦ದ ಪೈಗಳು
ಜನಿಸಿದ ಕವಿಗಳ ಸಿರಿನಾಡು
ದಾಸರ ವಾಣಿಯ ಮ೦ಗಳ ಬೀಡು ||3||
ಯಕ್ಷಗಾನ ಮೇಳದ ನಾಟ್ಯ ತರ೦ಗ
ಧೀಮ್ ಧೀಮ್ ನುಡಿಯುವ ಚ೦ಡೆ ಮೃದ೦ಗ
ಯಕ್ಷಗಾನ ಮೇಳದ ನಾಟ್ಯ ತರ೦ಗ
ಧೀಮ್ ಧೀಮ್ ನುಡಿಯುವ ಚ೦ಡೆ ಮೃದ೦ಗ
ಶರಾವತಿ ……..ನೇತ್ರಾವತಿ
ಪಾವನ ನದಿಗಳ ಸಾಗರ ಸ೦ಗಮ ||4||
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ:ಷಡಕ್ಷರಿ ಸುಗ್ಗನಹಳ್ಳಿ
ರಾಗದಲೆಗೆ ಭಾವ ಬೆಸುಗೆ ಸೇರಬೇಕು
ಗೀತೆಗೆ
ನಾಭಿಯಿಂದ
ಹೊಮ್ಮಿ ಸ್ವರವು ಹಾಯ ಬೇಕು ಕೊರಳಿಗೆ…||
ಸಪ್ತಸಾಗರದಾಳದಲ್ಲಿದೆ ನಾದ ಬಿಂದುವಿನಾಲಯ
ಈಜಿ ತಲುಪುವರೆಷ್ಟು ಮಂದಿ ಪಡೆಯಲದರ ಸಿದ್ಧಿಯ ||1||
ಶೃಂಗ ಗಿರಿಗಳ ತುತ್ತತುದಿಯಲಿ ಎಲ್ಲೋ ಒಂದೆಡೆ ಲಯವಿದೆ
ತಲುಪಬಹುದು ಅಲ್ಲಿಗೊಮ್ಮೆ ನಿರತ ಇದ್ದರೆ ಸಾಧನೆ ||2||
ದೇಹಿ ಎನ್ನುವ
ಭಾವ ಬೇಕು ನಾದರಾಣಿಯ ಅಡಿಯೊಳು
ಎಂದೋ ಒಮ್ಮೆ ಕರುಣೆ ಬಂದು ಇನಿತೆ ಇನಿತು ಕೊಡುವಳು ||3||
.................................................................................
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ : ಡಿ. ರಮೇಶ್
ಗುರುದೇವ್
ಶತ ಶತಮಾನಗಳೇ ಉರುಳಲಿ
ನಾನಳಿದರೂ ನೀನಳಿದರೂ
ಕೊನೆಗೊಬ್ಬ ಕನ್ನಡಿಗನು ಉಳಿದರೂ
ಕನ್ನಡಮಯವಾಗುವುದು
ಕನ್ನಡ ನಾಡೆಲ್ಲಾ
ಆ ಒಬ್ಬ ಕನ್ನಡಿಗ
ನೀನಾಗು ಬಾ
ಈ ತಾಯಿಯ ಋಣವಾ ತೀರಿಸು
ಬಾ ||
ಕನ್ನಡವೇ ಸತ್ಯ ಕನ್ನಡವೇ
ನಿತ್ಯ
ಕನ್ನಡವೆಂದರೆ ಬರಿ
ನುಡಿಯಲ್ಲ
ಧಮನಿ ಧಮನಿಯಲಿ ಹರಿಯುವ
ರಕುತ
ಕನ್ನಡವೆಂದರೆ ಬರಿ
ಭಾಷೆಯಲ್ಲ
ಹೃದಯ ಹೃದಯಗಳ ಸಂಗಮ
ಕನ್ನಡನೆಂದರೆ ಬರಿ
ನಡೆಯಲ್ಲ
ಹೆಜ್ಜೆ ಹೆಜ್ಜೆಗಳು
ಸಾಗಿದ ಗುರುತು
ಕನ್ನಡವೆಂದರೆ ಇತಿಹಾಸವಲ್ಲ
ಇಂದು ನಾಳೆಗಳ ಚಿರಬೆಸುಗೆ
ಕನ್ನಡವೆಂದರೆ ಜನ
ಜಾತಿಯಲ್ಲ
ಸರ್ವರನು ಕೈಬೀಸಿ
ಕರೆಯುವ ಮಾತೆ ||1||
ಕನ್ನಡವೆಂದರೆ ಬಿಳಿ
ಮೋಡವಲ್ಲ
ಆಗುಂಬೆಯ ನಿತ್ಯ ವರ್ಷಧಾರೆ
ಕನ್ನಡವೆಂದರೆ ನಿಂತ
ನೀರಲ್ಲ
ನಿರಂತರ ಹರಿಯುವ ಅಮೃತಕಾವೇರಿ
ಕನ್ನಡವೆಂದರೆ ಕಲ್ಲುಮನಸಲ್ಲ
ಕರಗಿದ ಬಾದಾಮಿಯ ಮೇಣ
ಬಸದಿ
ಕನ್ನಡವೆಂದರೆ ಬರಿ
ಧ್ವನಿಯಲ್ಲ
ಪ್ರತಿಧ್ವನಿಸುವ ಗೋಲಗುಮ್ಮಟ
ಕನ್ನಡವೆಂದರೆ ಕೊಂಪೆಯಲ್ಲ
ಗತಕಾಲದ ಸುವರ್ಣ ಹಂಪಿ ||2||
ಕನ್ನಡವೆಂದರೆ ನೀಲಾಕಾಶವಲ್ಲ
ಅದರಾಚೆಗೂ ಚಾಚುವ
ಅನಂತ ದೂರ
ಕನ್ನಡವೆಂದರೆ ಬರಿ
ಪ್ರಪಾತವಲ್ಲ
ಭಾವನೆಗಳ ಆಳಕ್ಕಿಳಿಯುವ
ಜೋಗ ಜಲಪಾತ
ಕನ್ನಡವೆಂದರೇ ಬೇರೇ
ಏನೂ ಅಲ್ಲ
ಅದು ನನ್ನೊಳಗೂ ಅದು
ನಿನ್ನೊಳಗೂ
ಕಣಕಣದೊಳಗೂ ಬೆರೆತಿರುವ
ಉಸಿರು
ಕನ್ನಡವೆಂದರೆ ಕೊನೆಯಾಗುವುದಲ್ಲ
ಅದು ಒಬ್ಬನಿಂದ ಕೋಟಿ
ಕೋಟಿ ಜೀವ ಜೀವದಲಿ
ಸಂಚರಿಸುವ ಚೇತನ ,ಸಂಚರಿಸುವ ಚೇತನ,ಸಂಚರಿಸುವ ಚೇತನ ||3||
ಹಾಡಲು ಕಲಿಯಿರಿ(CLICK HERE TO LEARN THIS SONG)
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ :ಪು ತಿ ನರಸಿಂಹ ಆಚಾರ್
ಭಾಮಾ .......ರಮಣನ ದೀಪ.... ಮೆರೆಗೆ.... ದೀಪ ಲಕ್ಷ್ಮಿ
ಒಳ ಇರುಳ ತುಳಿತುಳಿದು ಒಳ ಇರುಳನು ತುಳಿತುಳಿದು
ಬೇರೆ ಬಗೆಯ ತೆರೆದು, ಮೆರೆಯುತಿಹ ದೀಪ ಮೆರೆಗೆ ದೀಪಲಕ್ಷ್ಮಿ ||
ಹರಿಭವ ತರುವೊಳಗರಳಿಸುವರಳು
ಇರವನು ರಸದೆಡೆ ಗೆಸೆಯುವ ಸರಳು
ಮೃತ್ಯು ವೊಳಮೃತದ ಸೆಲೆಹಿನ ...ಕುರುಹೋ.... ಏನೆ
ಮೆರೆಯುತಿಹ ದೀಪ, ಒಸಗೆ ....ದೀಪಲಕ್ಷ್ಮಿ ||
ಇಲ್ಲಮೆಯಿಂದಿರವಿಗೆನಡೆಸೆ ಎಂಬ
ಪುಲ್ಲಮೆ ಇಲ್ನಲ್ಮೆ ಗೇರಿಸು ಎಂಬ
ಬಲ್ಲವರೆರಕೆಯ ಸಲಿಸುವ ದೀಪ ಲಕ್ಷ್ಮಿ||
..........................................................................................................................
ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ: ಕೆ.ಎಸ್. ನರಸಿಂಹಸ್ವಾಮಿ
……………………………………………………………………...............
ಹಾಡಲು ಕಲಿಯಿರಿ(CLICK HERE TO LEARN THIS SONG)
ಹಾಡಲು ಕಲಿಯಿರಿ(CLICK HERE TO LEARN THIS SONG)
ಲಾ ಲಾ ಲ ಲ ಲಾ ಲ ಲಾ ಲಾ....
ಆ ಆ ಆ...ಆ ಆ ಆ..
CLICK HERE TO VIEW ON YOUTUBE पतङ्ग: = ಚಿಟ್ಟೆ ( ಹಾರಾಡುವ ಕೀಟ ) (fly) चित्रपतङ्ग: = ಚಿಟ್ಟೆ(ಬಣ್ಣ ಬಣ್ಣದ ) (butter fly) पुत्तिका / ...