ಕನ್ನಡ ನಾಡಿನ ಜೀವನದಿ ಈ ಕಾವೇರಿ | KANNADA NAADINA JEEVANDI | ಜೀವನದಿ MOVIE SONG LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಕನ್ನಡ ನಾಡಿನ ಜೀವನದಿ ಈ ಕಾವೇರಿ ಓ ಓ ಓ ಜೀವನದೀ ಈ ಕಾವೇರಿ

ಅನ್ನವ ನೀಡುವ ದೇವನದಿ ಈ ವಯ್ಯಾರೀ ಓ ಓ ಓ ದೇವನದಿ ಈ ವಯ್ಯಾರಿ

ಈ ತಾಯಿಯು ನಕ್ಕರೇ ಸಂತೋಷದಾ ಸಕ್ಕರೆ

ಒಲವಿನಾ ಮಾತೆಗೇ ಭಾಗ್ಯದಾ ದಾತೆಗೇ

ಮಾಡುವೇ ಭಕ್ತಿಯಾ ವಂದನೇ.....॥

 

ಕೊಡಗಲಿ ನೀ ಹುಟ್ಟಿ ಹರಿಯುವೆ ನಲಿವಿಂದ

ತರುತಲಿ ಎಲ್ಲೆಲ್ಲೂ ಆನಂದ

ಹಸುರಿನ ಬೆಳೆ ತಂದು ಕುಡಿಯುವ ಜಲ ತಂದು

ಚೆಲ್ಲುವೆ ನಗೆಯೆಂಬ ಶ್ರೀ ಗಂಧ

ಧುಮುಕುತ ವೇಗದಿ ಜಲಪಾತದಲಿ ವಿದ್ಯುತ್ ನೀಡುವೆ

ಬಯಲಲಿ ಕಾಡಲಿ ಕಲಕಲ ಹರಿಯುತ ನಾಟ್ಯವಾ ಮಾಡುವೆ

ಮಂದಗಾಮಿನೀ ಶಾಂತವಾಹಿನೀ

ಚಿರನೂತನ ಚೇತನ ದಾತೆಯು ನೀನೆ ದಕ್ಷಿಣಮಂದಾಕಿನಿ॥೧॥

 

ಹುಟ್ಟುವ ಕಡೆಯೊಂದು ಫಲಕೊಡೊ ಕಡೆಯೊಂದು

ಸಾಗರದಲಿ ನದಿಯೆಂದೂ ಸಂಗಮವು

ತೌರಿನ ಮನೆಯೊಂದು ಗಂಡನ ಮನೆಯೊಂದು

ಹೆಣ್ಣಿಗೆ ಇದೆ ಒಂದು ಜೀವನವು

ತಾಯಿಯು ತಂದೆಯು ಅಣ್ಣನು ತಂಗಿಯು ಎಲ್ಲಾ ದೂರವು

ಹೊಸ ಮನೆ ಹೊಸ ಜನ ಹೊಸ ಹೊಸ ಬಂಧವು

ಅದುವೇ ಸಂತೋಷವು

ಮನೆಯಾ ದೀಪವು ಬಾಳ ಸಂಗೀತವು

ಮನ ಮೆಚ್ಚಿದ ಮಡದಿಯು ಸಿಕ್ಕಿದ ಮೇಲೆ ಸ್ವರ್ಗ ಸಂಸಾರವು॥೨॥


ಪ್ರೇಮದಿ ಕಾವೇರಿ ಹರಿವಳು ನಲಿವಿಂದ
ಸಾಗರದೆಡೆ ಓಡಿ ಸಂಗಮಕೆ
ಹೃದಯದ ಹೊಲದಲ್ಲಿ ಒಲವಿನ ಬೆಳೆ ತಂದು
ಜೀವಗಳೊಂದಾದ ಸಂಭ್ರಮದೆ
ಸಾಗರ ಕಾಣದೆ ಎದೆಯಲಿ ವೇಗವು ಒಡಲಲಿ ಕಂಪನ
ಸ್ಪರ್ಶದ ಸುಖ ಕಲ್ಪನೆ ತಂದಿದೆ ಏನೋ ರೋಮಾಂಚನ
ಯಾವಾ ಬಂಧವೋ, ಸೃಷ್ಟಿ ಸ್ಪಂದವೋ
ಆಯಸ್ಕಾಂತದ ಸೆಳೆತವೋ ಹರೆಯದ ತುಡಿತವೋ
ಮನಸೂ ತೇಲಾಡಿದೆ...||೩||

ಹೃದಯದ ಕಡಲಲ್ಲಿ ಆಸೆಯ ಅಲೆ ಎದ್ದು
ಹೊಮ್ಮಿದೆ ಭೋರೆಂದೂ ವಿರಹದಲಿ
ಬೆರೆಯುತ ತನ್ನಲ್ಲಿ ತಣಿಸುವ ನದಿಗಾಗಿ
ಕಾದಿದೆ ನೋಡೆಂದೂ ತವಕದಲಿ

ಲಜ್ಜೆಯು ಅಳಿಯದು ಮೀರುತಾ ಸಾಗಿಸಿ
ಸಾಗರ ಹರಸಿದೆ
ತನ್ನನೆ ಮರೆತು, ಕಡಲಲೆ ಬೆರೆತು
ಧನ್ಯವು ತಾನಾಗಿದೆ

ಪ್ರಕೃತಿ ನಿಯಮವೋ, ಪ್ರೇಮದ ಧರ್ಮವೋ
ಬಳಿ ಸೇರುತ ಓಡುವ ಅಲೆಯ ತಲೆಯಲಿ
ಪ್ರೇಮಾ ಹಾಡಾಗಿದೆ ||೪||

........................................................................................................................................................

No comments:

Post a Comment

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)   ಬಾ ಸವಿತಾ .... ಬಾ ಸವಿತಾ ... ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ , ತಿಳಿವಿಗೆ ಬಣ್ಣವ ಹಚ್ಚಿಸ...