ನೀಲ ಮೇಘ ಗಾಳಿ ಬೀಸಿ ದೂರಾದ ಹಾಗೆ SONG LYRICS | NEELA MEGHA GAALI BEESI SONG LYRICS |ಆನಂದ್ MOVIE SONGS

 ಹಾಡಲು ಕಲಿಯಿರಿ(CLICK HERE TO LEARN THIS SONG)

ನೀಲ ಮೇಘ ಗಾಳಿ ಬೀಸಿ ದೂರಾದ ಹಾಗೆ
ಚಂದ್ರ ತಾರೆ ತಂಪು ಕಾಂತಿ ಚೆಲ್ಲಾಡೊ ಹಾಗೆ
ಎದೆಯ ತುಂಬಿ ಕೆಣಕಿದ ಚಿಂತೆ
ಕರಗಿ ಕರಗಿ ಇಬ್ಬನಿಯಂತೆ
ಮನ ಉಯ್ಯಾಲೆಯಂತಾಗಿ ತೂಗಾಡಿದೆ


ಹೂವಾಯಿತು ಮನ ಹೂವಾಯಿತು
ನೀ ಸೇರಲು ಸವಿ ಜೇನಾಯಿತು

ಹಾಡಾಯಿತು ಹೊಸ ಹಾಡಾಯಿತು
ನೀ ಹಾಡಲು ಬಲು ಇಂಪಾಯಿತು

ಬಳಿ ಬಂದಾಗ, ಸುಖ ತಂದಾಗ
ಆನಂದವೇ ತುಂಬಿತು ||1||


ಹಾರಾಡುವ ಗಿಳಿಯಂತಾಗುವ
ಆ ಬಾನಲಿ ಜೊತೆ ನಾವಾಗುವ

ಆ ದೂರದ ಗಿರಿ ಮೇಲೇರುವ
ಸೌಂದರ್ಯದ ಸಿರಿ ಬಾ ನೋಡುವ

ಮಳೆ ಬಂದಾಗ, ಹಿತ ತಂದಾಗ
ಮಳೆಬಿಲ್ಲಲಿ ಜಾರುವ ||2||


..........................................

ದೇಶಭಕ್ತಿ ಗೀತೆಗಳು

No comments:

Post a Comment

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)   ಬಾ ಸವಿತಾ .... ಬಾ ಸವಿತಾ ... ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ , ತಿಳಿವಿಗೆ ಬಣ್ಣವ ಹಚ್ಚಿಸ...