ಹಾಡಲು ಕಲಿಯಿರಿ(CLICK HERE TO LEARN THIS SONG)
ಆಡೋಣ ಬನ್ನಿ ಕಣ್ಣ ಮುಚ್ಚಾಲೆ ,
ತೂಗೋಣ ಬನ್ನಿ ಉಯ್ಯಾಲೆ
ಜೀವನ್ವೊಂದು ನಾಟಕ ಶಾಲೆ,
ನಾವೆಲ್ಲ ಕುಣಿಯುವ ನರ್ತನ ಶಾಲೆ ||
ಸುತ್ತಾಲು ಚೆಲ್ಲಿದ ರಂಗುರಂಗೋಲೆ,
ಬಳುಕುತ ಬರುವಳು ವನಮಾಲೆ
ಭರದಿಂದ ಬಂದು ಪಚ್ಚೆಯ ಸಾಲೆ,
ತೂಗಾಡಿ ಕರೆದಾವು ತೆಂಗಿನ ಸಾಲೆ
ಉಯ್ಯಾಲೆ ಚಂಪಾಲೆ, ಉಯ್ಯಾಲೆ ಚಂಪಾಲೆ ||
ಹಕ್ಕಿಗಳಿಂಚರ ಕರೆಯೋಲೆ,
ಕುಣಿಯುತ ಬರುವಳು ನವ್ವಾಲೆ
ಇಂಪು ಇಂಪಿನ ಗುಂಪು ಕೋಗಿಲೆ,
ಕಂಪನು ಸೂಸುವ ಹೂಗಳ ಮಾಲೆ
ಉಯ್ಯಾಲೆ ಚಂಪಾಲೆ, ಉಯ್ಯಾಲೆ ಚಂಪಾಲೆ ||
...........................................................................................................
No comments:
Post a Comment