ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ SONG LYRICS IN KANNADA |BAARE SAKHI POGUVA

 ಹಾಡಲು ಕಲಿಯಿರಿ(CLICK HERE TO LEARN THIS SONG)

ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ
ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ |
ಕೊಳಲನೂದುವಾ ಕೃಷ್ಣ ಕೊಳಲನೂದುವ ||

ಜಾರನೆಂದು ಸಣ್ಣಮಾತನಾಡಿದ್ದಾಯಿತು
ಚೋರನೆಂದು ಬಹಳ ದೂರು ಮಾಡಿದ್ದಾಯಿತು | 
ಮೂರು ನಿಮಿಷ ಅವನ ಮರೆಯಲಾಗದಾಯಿತು |
ಬೀರುತಿರುವ ಮೋಹಜಾಲ ಸಡಲದಾಯಿತು ||1||


ಯಾವನೀತನೆಂದು ಚಿಂತೆ ಮಾಡಿದ್ದಾಯಿತು
ಗೋವಳನಿವನಲ್ಲವೆಂದು ನಿರ್ಧರಾಯಿತು |
ಯಾವನಾದರೇನು ಇವನ ಕ್ಷಣವು ಕಾಣದೆ | 
ಜೀವನ ಕಳೆಯುವುದೆ ದೊಡ್ಡ ಭಾರವಾಯಿತು ||2||


ಮಂದಹಾಸದಿಂದ ಸಕಲ ಜಗವ ಬೆಳಗುವ
ಚಂದ್ರನು ತಾನಿವನ ನೋಡಿ ಬಹಳ ನಾಚುವ | 
ಸಾಂದ್ರವಾಯಿತಂತರಿಕ್ಷ ಮಧುರ ನಾದದಿ |
ಮಲಯ ಮಾರುತ ತಾ ತಲೆಯನಾಡುವ ||3||


ನಾದದ ಸುಧೆ ಸಾಗರದಲಿ ತೇಲುವಂತಿದೆ 
ಮಾಧವ ತಾ ಸುಧೆಯ ರಸವನೆರಚುವಂತಿದೆ |
ಬಾಧಿಸುತಿಹ ಭವದ ತಾಪವಡಗಿದಂತಿದೆ | 
ಮಾದರಿಫಲ ರಾಸಕ್ರೀಡೆ ತೋರುವಂತಿದೆ ||4||


ಸಕಲ ಲೋಕನಾಥನೀತನೆಂದು ತಿಳಿಯಿತು.
  ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು |
ಲಕುಮಿ ಮುರುಳಿ ರೂಪದಲ್ಲಿಇಹುದು ಹೊಳೆಯಿತು | 
ಭಕುತಿ ಹರಿದು ಎನ್ನ ಮನ ಪ್ರಸನ್ನವಾಯಿತು || 5||

‌

............................................................................................................................................

 


No comments:

Post a Comment

ಬಾ ಸವಿತಾ.... ಬಾ ಸವಿತಾ... ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ |Lyrics in Kannada Baa Savitha song

ಹಾಡಲು ಕಲಿಯಿರಿ(CLICK HERE TO LEARN THIS SONG)   ಬಾ ಸವಿತಾ .... ಬಾ ಸವಿತಾ ... ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ , ತಿಳಿವಿಗೆ ಬಣ್ಣವ ಹಚ್ಚಿಸ...