ಹಾಡಲು ಕಲಿಯಿರಿ(CLICK HERE TO LEARN THIS SONG)
ಐದು
ಬೆರಳು ಕೂಡಿ ಒಂದು ಮುಷ್ಟಿಯು
ಹಲವು
ಮಂದಿ ಸೇರಿ ಈ ಸಮಷ್ಠಿಯು
ಬೇರೆ
ಬೇರೆ ಒಕ್ಕಲು ಒಂದೇ ತಾಯ ಮಕ್ಕಳು
ಕೂಡಿ
ಹಾಡಿದಾಗ ಗೆಲುವು ಗೀತೆಗೆ ಭರತಮಾತೆಗೆ,ಭರತಮಾತೆಗೆ||
ಮೊಳಗಲಿ
ಮೊಳಗಲಿ ನಾಡಗೀತೆಯು
ಮೂಡಲಿ
ಮೂಡಲಿ ಸುಪ್ರಭಾತವು||
ಹಿಮಾಲಯದ
ನೆತ್ತಿಯಲ್ಲಿ ಕಾಶ್ಮೀರದ ಭಿತ್ತಿಯಲ್ಲಿ
ಅಸ್ಸಾಮಿನ
ಕಾಡಿನಲ್ಲಿ ಐದು ನದಿಯ ನಾಡಿನಲ್ಲಿ
ಹೊತ್ತಿ
ಉರಿವ ಬೆಂಕಿ ಆರಿ ತಣ್ಣಗಾಗಲಿ
ಬಂಜರಲ್ಲಿ
ಬೆಳೆದು ಹಚ್ಚ ಹಸಿರು ತೂಗಲಿ
ಗಂಗೆ
ತಂಗಿ ಕಾವೇರಿಯ ತಬ್ಬಿಕೊಳ್ಳಲಿ||
ಮೊಳಗಲಿ
ಮೊಳಗಲಿ ನಾಡಗೀತೆಯು
ಮೂಡಲಿ
ಮೂಡಲಿ ಸುಪ್ರಭಾತವು||
ಲಡಾಕ
ನೇಪ ಗಡಿಗಳಲ್ಲಿ ಮಂತ್ರಾಲಯ ಗುಡಿಗಳಲ್ಲಿ
ಭತ್ತ ಗೋಧಿ ಬೆಳೆಯುವಲ್ಲಿ
ಪ್ರೀತಿಯು ಮೈ ತಳೆಯುವಲ್ಲಿ
ದುಡಿವ
ಹಿಂದೂ-ಮುಸಲ್ಮಾನರೊಂದುಗೂಡಲಿ
ಆರದಿರಲಿ
ಪ್ರೀತಿ ದೀಪ ಕಣ್ಣಗೂಡಲಿ
ಎದೆಯ
ಕೊಳಗಳನ್ನು ಅಶ್ರುಧಾರೆ ತೊಳೆಯಲಿ||
ಮೊಳಗಲಿ
ಮೊಳಗಲಿ ನಾಡಗೀತೆಯು
ಮೂಡಲಿ
ಮೂಡಲಿ ಸುಪ್ರಭಾತವು||
ಐದು
ಬೆರಳು ಕೂಡಿ ಒಂದು ಮುಷ್ಟಿಯು
ಹಲವು
ಮಂದಿ ಸೇರಿ ಈ ಸಮಷ್ಠಿಯು
ಬೇರೆ
ಬೇರೆ ಒಕ್ಕಲು ಒಂದೇ ತಾಯ ಮಕ್ಕಳು
ಕೂಡಿ
ಹಾಡಿದಾಗ ಗೆಲುವು ಗೀತೆಗೆ ಭರತಮಾತೆಗೆ,ಭರತಮಾತೆಗೆ||
ಮೊಳಗಲಿ
ಮೊಳಗಲಿ ನಾಡಗೀತೆಯು
ಮೂಡಲಿ
ಮೂಡಲಿ ಸುಪ್ರಭಾತವು||
..............................................................................................
ಹೊಳೆ ಸಾಲಿನ ಮರಗಳೇ , ಸಿರಿ ಬನಗಳ ಗಿರಿಗಳೇ (ಸಾಹಿತ್ಯ) | Hole saalina Maragale song lyrics in Kannada
No comments:
Post a Comment