Jul 29, 2022

SUBHASHITA:ತೈಲಾದ್ ರಕ್ಷೇತ್ ಜಲಾದ್ ರಕ್ಷೇತ್ (ಪುಸ್ತಕಗಳನ್ನು ಹೇಗೆ ರಕ್ಷಿಸಬೇಕು?)| Tailad rakshet jalat rakshet with meaning

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


तैलात् रक्षेत् जलात रक्षेत् रक्षेत् शिथिल बन्धनात् |

मॊर्खहस्ते दातव्यं एवं वदति पुस्तकम्  ||

 

ತೈಲಾದ್ ರಕ್ಷೇತ್ ಜಲಾದ್ ರಕ್ಷೇತ್ ರಕ್ಷೇತ್ ಶಿಥಿಲ ಬಂಧನಾತ್|

ಮೂರ್ಖ ಹಸ್ತೇ ದಾತವ್ಯಂ ಏವಂ ವದತಿ ಪುಸ್ತಕಮ್||

 

ಪುಸ್ತಕವು ಹೇಳುತ್ತದೆ "ನನ್ನನ್ನು ತೈಲದಿಂದ, ನೀರಿನಿಂದ,  ಶಿಥಿಲ ಬಂಧನದಿಂದ ಹಾಗೂ ಮೂರ್ಖನಿಂದ ರಕ್ಷಿಸಿ" ಎಂದು.

...........................................................................................

Jul 28, 2022

'ಗು'ಕಾರಾಶ್ಚಾoಧಕಾರ: ಸ್ಯಾತ್ (MEANING OF 'GURU' WORD)- GUKAARAATH ANDHAKARASYAT

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


'गु'काराश्चान्धकारः स्यात् 'रु'कारस्तन्निरोधकः |

अन्धकार निरोधित्वात 'गुरु'रित्यभिधीयते ||

 

'ಗು'ಕಾರಾಶ್ಚಾoಧಕಾರ: ಸ್ಯಾತ್ 'ರು'ಕಾರಸ್ತನ್ನಿರೋಧಕ:

ಅಂಧಕಾರ ನಿರೋಧಿತ್ವಾತ್ 'ಗುರು'ರಿತ್ಯಭಿಧೀಯತೆ॥

 

'ಗು' ಎಂದರೆ ಅಂಧಕಾರ, 'ರು' ಎಂದರೆ 'ನಿವಾರಣೆ. ಆದ್ದರಿಂದ ಅಂಧಕಾರವನ್ನು ನಿವಾರಿಸುವವನು 'ಗುರು' ಎಂದು ಕರೆಯಲ್ಪಡುತ್ತಾನೆ

.................................................................................................


Jul 27, 2022

SUBHASHITA:ಪ್ರಿಯವಾಕ್ಯ ಪ್ರದಾನೇನ| PRIYAVAKYA PRADAANENA- SUBHASHITA WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

प्रियवाक्य प्रदानेन सर्वे तुष्यन्ति जन्तवः |

तस्मात् तदेव वक्तव्यं वचने का दरिद्रता||

 

ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ:

ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ॥

 

ಪ್ರಿಯವಾದ ಮಾತುಗಳನ್ನು ಆಡುವುದರಿಂದ ಎಲ್ಲಾ ಜೀವಿಗಳು ಸಂತೋಷಗೊಳ್ಳುತ್ತವೆ. ಆದ್ದರಿಂದ ಪ್ರಿಯವಾದ ಮಾತುಗಳನ್ನೇ ಆಡಬೇಕು.  ಮಾತಿಗೆ ಬಡತನವೆಲ್ಲಿದೆ?

...............................................................................................................

Also See:

ಸುಭಾಷಿತಗಳ ಮಹತ್ವ| IMPORTANCE OF SUBHASHITAS


Jul 25, 2022

ಸುಖಾರ್ಥೀ ಚೇತ್ ತ್ಯಜೇತ್ ವಿದ್ಯಾ೦| SUKHARTHI CHET TYAJET VIDYAM|SUBHASHITA WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

सुखार्थी चेत् त्यजेत् विद्यां विद्यार्थी चेत् त्यजेत् सुखम् |

सुखार्थिनः कुतो विद्या कुतो विद्यार्थिनः सुखम् ||

 

ಸುಖಾರ್ಥೀ ಚೇತ್ ತ್ಯಜೇತ್ ವಿದ್ಯಾ೦, ವಿದ್ಯಾರ್ಥೀ ಚೇತ್ ತ್ಯಜೇತ್ ಸುಖ೦

ಸುಖಾರ್ಥಿನ: ಕುತೋ ವಿದ್ಯಾ, ಕುತೋ ವಿದ್ಯಾರ್ಥಿನ: ಸುಖ೦॥

 

ಯಾವಾಗಲೂ ಸುಖವನ್ನು ಬಯಸುವವನು ವಿದ್ಯೆಯನ್ನು ತ್ಯಜಿಸಬೇಕು  ವಿದ್ಯೆಯನ್ನು ಬಯಸುವವನು ಸುಖವನ್ನು ತ್ಯಜಿಸಬೇಕು. ಸುಖಾರ್ಥಿಗಳಿಗೆ ವಿದ್ಯೆ ಹೇಗೆ ಪ್ರಾಪ್ತವಾಗುತ್ತದೆ ಹಾಗೆಯೇ ವಿದ್ಯಾರ್ಥಿಗಳಿಗೆ ಸುಖವೆಲ್ಲಿದೆ?

He who always wants happiness should renounce knowledge. He who wants knowledge should renounce happiness. How happy students get education and how happy students are?


Jul 24, 2022

PATRITOIC SONG LYRICS:ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ|BHOGA METTI TYAGA MEREDA|

 ಹಾಡಲು ಕಲಿಯಿರಿ(CLICK HERE TO LEARN THIS SONG)


ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ |

ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ

ಮನುಜರಾಗಿ ಹುಟ್ಟಲಿಲ್ಲಿ ಜನುಮಜನುಮ ಸುಕೃತ || ||


ನಾಲ್ಕುದಿನದ ಬಾಳು ನಮದು ಆಗಲಿಂದು ಸಾರ್ಥಕ

ತ್ಯಾಗ ಮೆರೆದು ಅಮರರಾದ ಸಂತರೆಮೆಗೆ ಪ್ರೇರಕ

 ಮಣ್ಣ ಋಣವ ಕಳೆವುದಕ್ಕೆ ಸೇವೆಯೊಂದೇ ಸಾಧಕ

 ನಗುತ ನಲಿವ ರಾಷ್ಟ್ರಕ್ಕಾಗಿ ಸಾಗಬೇಕು ಕಾಯಕ || 1 ||


 ಧ್ಯೇಯ ಪಥವ ಬಿಟ್ಟ ಬಾಳ್ವೆ ಬೇಡ ನಮಗೆ ನೀರಸ

 ಪರರಿಗಾಗಿ ಸತತ ಮಿಡಿವ ಹೃದಯದಿಂದ ಸಂತಸ

 ಕಳೆದು ಬಿಡುವ ರೋಷ ದ್ವೇಷ ಎಲ್ಲ ಮನದ ಕಲ್ಮಶ

 ವಿರಸ ಸರಿಸಿ ಹರಿಸಿ ಬಿಡುವ ಶುದ್ಧ ಸ್ನೇಹ ಮಾನಸ || 2 ||


ಸ್ವಾರ್ಥ ಲಾಭ ಸ್ತುತಿಯ ಮೋಹ ಬೇರು ಸಹಿತ ಕೀಳುವ

 ತರುವಿನಂತೆ ನೆರಳ ನೀಡಿ ಬದುಕ ಧನ್ಯಗೊಳಿಸುವ

 ತಮವು ನಮಗೆ ಬೆಳಕು ಜಗಕೆ ದೀಪದಂತೆ ಬೆಳಗುವ

 ಅಳುವನಳಿಸಿ ಪ್ರೀತಿ ಬೆಳೆಸಿ ನಾಡಿನೇಳ್ಗೆ ಕಾಣುವ || 3 ||

..............................................................................................................

PATRIOTIC SONGS(ದೇಶಭಕ್ತಿಗೀತೆಗಳು)

Jul 22, 2022

SUBHASHITA: ಛಿನ್ನೋಪಿ ಚಂದನತರು(ಉತ್ತಮರ ಗುಣ) | CHINNOPI CHANDANA TARU -SUBHASHITA WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


छिन्नॊपि चन्दनतरुर्नजहाति गन्धम्

व्रद्धोपि वारणपतिर्नजहाति लीलाम् |

यन्त्रार्पितॊ मधुरतां जहाति चेक्षुः

क्षीणोपि त्यजति शील गुणान् कुलीन: ||

 

ಛಿನ್ನೋಪಿ ಚಂದನತರುರ್ನ ಜಹಾತಿ ಗಂಧಂ

ವೃದ್ಧೋಪಿ ವಾರಣಪತಿರ್ನ ಜಹಾತಿ ಲೀಲಾಮ್

ಯಂತ್ರಾರ್ಪಿತೋ ಮಧುರತಾ೦ ಜಹಾತಿ ಚೇಕ್ಷು:

ಕ್ಷೀಣೋಪಿ ತ್ಯಜತಿ ಶೀಲ ಗುಣಾನ್ ಕುಲೀನ:

 

ಗಂಧದ ಮರವನ್ನು ಕತ್ತರಿಸಿದರು ಅದು ತನ್ನ ಪರಿಮಳವನ್ನು ತ್ಯಜಿಸುವುದಿಲ್ಲ. ವಯಸ್ಸಾದರೂ ಕೂಡ ಆನೆ ಯಜಮಾನನು ತನ್ನ ವಿಲಾಸವನ್ನು/ ಮದವನ್ನು ಬಿಡುವುದಿಲ್ಲ. ಯಂತ್ರದಲ್ಲಿ ಸಿಕ್ಕಿದರು ಕೂಡ ಕಬ್ಬು ತನ್ನ ಸಿಹಿಯನ್ನು ಬಿಡುವುದಿಲ್ಲ. ಹಾಗೆಯೇ ಸಂಸ್ಕಾರವಂತ ಮನುಷ್ಯನು ತನಗೆ ಎಷ್ಟೇ ಕಷ್ಟದ ಪರಿಸ್ಥಿತಿ ಬಂದರೂ ತನ್ನ ಉತ್ತಮ ನಡತೆಯನ್ನು ಬಿಡುವುದಿಲ್ಲ ,ಕೆಟ್ಟ ದಾರಿಯನ್ನು ಹಿಡಿಯುವುದಿಲ್ಲ.

..................................................................................................


Jul 21, 2022

SUBHASHITA: ಪಶವೋ ಯತ್ರ ಹನ್ಯಂತೇ (ದಾರಿದ್ರ್ಯದ ನೆಲೆಯೆಲ್ಲಿ?) |PSHAVO YATRA HANYANTI- SUBHASHITA WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SONG)


पशवो यत्र हन्यन्ते यत्र नार्यः निरादरः |

तत्र गच्छ दरिद्रं त्वं यत्र वैरी सहोदरः ||

 

ಪಶವೋ ಯತ್ರ ಹನ್ಯಂತೇ ಯತ್ರ ನಾರ್ಯ: ನಿರಾದರ:

ತತ್ರ ಗಚ್ಛ ದರಿದ್ರ೦ ತ್ವ೦ ಯತ್ರ ವೈರೀ ಸಹೋದರ:

 

ಎಲ್ಲಿ ಪ್ರಾಣಿಗಳು ವಧಿಸಲ್ಪಡುತ್ತವೆಯೋ, ಎಲ್ಲಿ ಮಹಿಳೆಗೆ ಗೌರವವಿರುವುದಿಲ್ಲವೋ ಎಲ್ಲಿ ಸಹೋದರರು ವೈರಿಗಳಾಗಿರುತ್ತಾರೊ, ಎಲೈ ದಾರಿದ್ರ್ಯ ವೇ, ನೀನು ಅಲ್ಲಿಗೆ ಹೋಗಿ ನೆಲೆಸು.

................................................................................................................



Jul 20, 2022

SUBHASHITA: ಪ್ರಾಣಾ ಯಥಾತ್ಮನೋಭೀಷ್ಟಾ (ದಯೆ)|SUBHASHITA WITH MEANING: PRANA YATHATMANO

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

प्राणा यथात्मनोभीष्टा  भूतानामपि ते तथा |

आत्मौपम्येन भूतेषु दयां कुर्वन्ति साधवः ||

 

ಪ್ರಾಣಾ ಯಥಾತ್ಮನೋಭೀಷ್ಟಾ ಭೂತಾನಾಮಪಿ ತೇ ತಥಾ।

ಆತ್ಮೌಪಮ್ಯೇನ ಭೂತೇಷು ದಯಾ೦ ಕುರ್ವನ್ತಿ ಸಾಧವ:॥

 

ನಮಗೆ ನಮ್ಮ ಪ್ರಾಣ,ಇಚ್ಛೆಗಳು ಎಷ್ಟು ಮುಖ್ಯವೋ ಹಾಗೆಯೇ ಇತರ ಜೀವಿಗಳಿಗೂ ಅವರವರ ಪ್ರಾಣ ಇಚ್ಛೆಗಳು ಮುಖ್ಯವಾಗಿರುತ್ತವೆ. 'ತನ್ನಂತೆ ಪರರ ಬಗೆದೊಡೆ' ಎಂಬ ಸರ್ವಜ್ಞನ ವಚನದಂತೆ, ಇತರ ಜೀವಿಗಳಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವ ಸಜ್ಜನರು ದಯೆಯನ್ನು ತೋರಿಸುತ್ತಾರೆ.

................................................................................................................


SUBHASHITA: ಆಹಾರ ನಿದ್ರಾ ಭಯ ಮೈಥುನಂ ಚ|AHARA NIDRA BHAYA| kannada savigana

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

आहार निद्रा भय मैथुनं   समानवेतत् पशुभिर्नराणाम् |

ज्ञानं नराणां त्वधिको विशेषः ज्ञानेन हीनः पशुभिर्समानः ||

 

ಆಹಾರ ನಿದ್ರಾ ಭಯ ಮೈಥುನಂ

ಸಮಾನವೇತತ್ ಪಶುಭಿರ್ನರಾಣಾಂ|

ಜ್ಞಾನಂ ನರಾಣಾಮ್ ತ್ವಧಿಕೋ ವಿಶೇಷ:

ಜ್ಞಾನೇನ ಹೀನ: ಪಶುಭಿರ್ಸಮಾನ ||

 

ಆಹಾರ,ನಿದ್ರೆ,ಭಯ ಹಾಗೂ ಸಂತಾನೋತ್ಪತ್ತಿ ನಾಲ್ಕು ಅಂಶಗಳು ಮನುಷ್ಯ ಹಾಗೂ ಪ್ರಾಣಿಗಳಲ್ಲಿ ಸಮಾನವಾಗಿರುತ್ತವೆ. ಮಾನವನಲ್ಲಿ ಮಾತ್ರ ಇರುವ ವಿಶೇಷ ಗುಣವೆಂದರೆ ಜ್ಞಾನ/ಯೋಚನಾ ಶಕ್ತಿ.

ಜ್ಞಾನವನ್ನು ಹೊಂದದ ಮನುಷ್ಯ ಪಶುವಿಗೆ ಸಮಾನ.

.........................................................................................................


Jul 18, 2022

SUBHASHITA: ಉದಯೇ ಸವಿತಾ ರಕ್ತೋ (ಸ್ಥಿತಪ್ರಜ್ಞತೆ) | UDAYE SAVITA RAKTO- SUBHASHITA WITH MEANING IN KANNADA


 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


उदये सविता रक्तो रक्तश्चास्तमने तथा |

संपत्तौ विपत्तौ महतामेक  रूपता |

 

ಉದಯೇ ಸವಿತಾ ರಕ್ತೋ ರಕ್ತಶ್ಚಾಸ್ತಮನೇ ತಥಾ

 ಸಂಪತ್ತೌ ವಿಪತ್ತೌ ಮಹತಾಮೇಕ ರೂಪತಾ॥

 

ಹೇಗೆ ಸೂರ್ಯನು ಉದಯಿಸುವ ಸಮಯದಲ್ಲಿ ಹಾಗೂ ಅಸ್ತಮಾನ ಸಮಯದಲ್ಲಿ ಕೆಂಪಗೆ ಇರುತ್ತಾನೋ ಹಾಗೆಯೇ ಮಹಾಪುರುಷರೂ ಕೂಡ ಸಿರಿ ಬಂದಾಗಲೂ ,ಆಪತ್ತು ಬಂದಾಗಲೂ ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿರುತ್ತಾರೆ.

................................................................................................................

SUBHASHITA: ಪ್ರತ್ಯಹಂ ಪ್ರತ್ಯವೇಕ್ಷೇತ(ಆತ್ಮಾವಲೋಕನದ ಪ್ರಾಮುಖ್ಯತೆ) | SUBHASHITA WITH MEANING- PRATYAHAM PRATYAVEKSHEHA-introspection


Jul 15, 2022

SUBHASHITA: ಪ್ರತ್ಯಹಂ ಪ್ರತ್ಯವೇಕ್ಷೇತ(ಆತ್ಮಾವಲೋಕನದ ಪ್ರಾಮುಖ್ಯತೆ) | SUBHASHITA WITH MEANING- PRATYAHAM PRATYAVEKSHEHA-introspection

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

प्रत्यहं प्रत्यवेक्षेत नरश्चरितमात्मनः |

किं नु मे पशुभिस्तुल्यं किं नु सत्पुरुषैरिति ||

 

ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನ:

ಕಿಂ ನು ಮೇ ಪಶುಭಿಸ್ತುಲ್ಯಂ ಕಿಂ ನು ಸತ್ಪುರುಷೈರಿತಿ॥

 

ಪ್ರತಿದಿನವೂ ರಾತ್ರಿ ಮಲಗುವಾಗ ಮನುಷ್ಯನು "ಇಂದು ನಾನು ಪಶುವಿನಂತೆ ವರ್ತಿಸಿದ್ದೆನೋ ಅಥವಾ ಸ್ವಲ್ಪವಾದರೂ ಸತ್ಪುರುಷನಂತೆ ವರ್ತಿಸಿದ್ದೆನೋ" ಎಂದು ದಿನದ ತನ್ನ ನಡತೆಯ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕು .

.................................................................................................................

Also See:

ಚೆಲ್ಲಿದರು ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ(ಸಾಹಿತ್ಯ) | CHELLIDARU MALLIGEYA SONG LYRICS IN KANNADA

SUBHASHITAS(ಸುಭಾಷಿತಗಳು -ಅರ್ಥ)

Jul 14, 2022

SUBHASHITA-ಅನ್ಯಾಯೋಪಾರ್ಜಿತ೦ ದ್ರವ್ಯಂ(ಅನ್ಯಾಯದ ಸಂಪತ್ತು) | SUBHASHITA WITH MEANING -ANYAYOPARJITAM DRAVYAM

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

अन्यायोपार्जितं द्रव्यं दशवर्षाणि तिष्ठाति |

प्राप्ते चैकादशे वर्षे समूलं विनष्यति ||

 

ಅನ್ಯಾಯೋಪಾರ್ಜಿತ೦ ದ್ರವ್ಯಂ ದಶ ವರ್ಷಾಣಿ ತಿಷ್ಠತಿ|

ಪ್ರಾಪ್ತೇ ಚೈಕಾದಶೇ ವರ್ಷೇ ಸಮೂಲ೦ ವಿನಶ್ಯತಿ||

 

ಅನ್ಯಾಯದಿಂದ ಗಳಿಸಿರುವ ಸಂಪತ್ತು ಹತ್ತು ವರ್ಷಗಳು ನಮ್ಮ ಜೊತೆ ಇರಬಹುದು ಆದರೆ ಹನ್ನೊಂದನೆಯ ವರುಷ ಅದು ಬೇರುಸಮೇತ ನಾಶವಾಗುತ್ತದೆ

.....................................................................................................

ಬ್ರಹ್ಮಾನಂದಂ ಪರಮಸುಖದಂ (ಗುರು ಸ್ತೋತ್ರ) | BRAHMANANDAM PARAM SUKHADAM LYRICS IN KANNADA AND ENGLISH

SUBHASHITAS(ಸುಭಾಷಿತಗಳು -ಅರ್ಥ).

Jul 13, 2022

ಬ್ರಹ್ಮಾನಂದಂ ಪರಮಸುಖದಂ (ಗುರು ಸ್ತೋತ್ರ) | BRAHMANANDAM PARAM SUKHADAM LYRICS IN KANNADA AND ENGLISH


 ಹಾಡಲು ಕಲಿಯಿರಿ(CLICK HERE TO LEARN THIS SONG)


ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನ ಮೂರ್ತಿಂ

ದ್ವಂದ್ವಾತೀತಂ ಗಗನ ಸದೃಶಂ ತತ್ವಮಸ್ಯಾದಿ ಲಕ್ಷ್ಯ೦

ಏಕಂ ನಿತ್ಯಂ ವಿಮಲಮಚಲಂ ಸರ್ವಧೀ ಸಾಕ್ಷಿಭೂತಂ

ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ||


.....................................................................................................

BRAHMAANANDAM PARAM SUKHADAM

KEVALAM JNAANA MOORTIM

DWANDWAATEETAM GAGANA SADRASHAM

TATVAMASYAADI LAKSHYAM

EKAM NITYAM VIMALAMACHALAM

SARVADHI SAAKSHI BHOOTAM

BHAAVAATEETAM TRIGUNA RAHITAM

SADGURUM TAM NAMAAMI||

...........................................................................................................................

Also See:

ಕಲಿಸು ಗುರುವೆ ಕಲಿಸು(ಸಾಹಿತ್ಯ)|KALISU GURUVE KALISU LYRICS IN KANNADA|GURU POORNIMA

ಸ್ವಾಮಿ ದೇವನೆ ಲೋಕ ಪಾಲನೆ |SWAMY DEVANE LOKA PALANE SONG LYRICS IN KANNADA

Jul 12, 2022

ಐದು ಬೆರಳು ಕೂಡಿ ಒಂದು ಮುಷ್ಟಿಯು (ಮೊಳಗಲಿ ಮೊಳಗಲಿ ನಾಡಗೀತೆಯು) | KANNADA PATRIOTIC SONG, MOLAGALI MOLAGALI LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಐದು ಬೆರಳು ಕೂಡಿ ಒಂದು ಮುಷ್ಟಿಯು

ಹಲವು ಮಂದಿ ಸೇರಿ   ಸಮಷ್ಠಿಯು

ಬೇರೆ ಬೇರೆ ಒಕ್ಕಲು ಒಂದೇ ತಾಯ ಮಕ್ಕಳು

ಕೂಡಿ ಹಾಡಿದಾಗ ಗೆಲುವು ಗೀತೆಗೆ ಭರತಮಾತೆಗೆ,ಭರತಮಾತೆಗೆ||

ಮೊಳಗಲಿ ಮೊಳಗಲಿ ನಾಡಗೀತೆಯು

ಮೂಡಲಿ ಮೂಡಲಿ ಸುಪ್ರಭಾತವು||

 

ಹಿಮಾಲಯದ ನೆತ್ತಿಯಲ್ಲಿ ಕಾಶ್ಮೀರದ ಭಿತ್ತಿಯಲ್ಲಿ

ಅಸ್ಸಾಮಿನ ಕಾಡಿನಲ್ಲಿ ಐದು ನದಿಯ ನಾಡಿನಲ್ಲಿ

ಹೊತ್ತಿ ಉರಿವ ಬೆಂಕಿ ಆರಿ ತಣ್ಣಗಾಗಲಿ

ಬಂಜರಲ್ಲಿ ಬೆಳೆದು ಹಚ್ಚ ಹಸಿರು ತೂಗಲಿ

ಗಂಗೆ ತಂಗಿ ಕಾವೇರಿಯ ತಬ್ಬಿಕೊಳ್ಳಲಿ||

 

ಮೊಳಗಲಿ ಮೊಳಗಲಿ ನಾಡಗೀತೆಯು

ಮೂಡಲಿ ಮೂಡಲಿ ಸುಪ್ರಭಾತವು||

 

ಲಡಾಕ ನೇಪ ಗಡಿಗಳಲ್ಲಿ ಮಂತ್ರಾಲಯ ಗುಡಿಗಳಲ್ಲಿ

 ಭತ್ತ ಗೋಧಿ ಬೆಳೆಯುವಲ್ಲಿ ಪ್ರೀತಿಯು ಮೈ ತಳೆಯುವಲ್ಲಿ

ದುಡಿವ ಹಿಂದೂ-ಮುಸಲ್ಮಾನರೊಂದುಗೂಡಲಿ

ಆರದಿರಲಿ ಪ್ರೀತಿ ದೀಪ ಕಣ್ಣಗೂಡಲಿ

ಎದೆಯ ಕೊಳಗಳನ್ನು ಅಶ್ರುಧಾರೆ ತೊಳೆಯಲಿ||

ಮೊಳಗಲಿ ಮೊಳಗಲಿ ನಾಡಗೀತೆಯು

ಮೂಡಲಿ ಮೂಡಲಿ ಸುಪ್ರಭಾತವು||

 

ಐದು ಬೆರಳು ಕೂಡಿ ಒಂದು ಮುಷ್ಟಿಯು

ಹಲವು ಮಂದಿ ಸೇರಿ   ಸಮಷ್ಠಿಯು

ಬೇರೆ ಬೇರೆ ಒಕ್ಕಲು ಒಂದೇ ತಾಯ ಮಕ್ಕಳು

ಕೂಡಿ ಹಾಡಿದಾಗ ಗೆಲುವು ಗೀತೆಗೆ ಭರತಮಾತೆಗೆ,ಭರತಮಾತೆಗೆ||

ಮೊಳಗಲಿ ಮೊಳಗಲಿ ನಾಡಗೀತೆಯು

ಮೂಡಲಿ ಮೂಡಲಿ ಸುಪ್ರಭಾತವು||

..............................................................................................

ಹೊಳೆ ಸಾಲಿನ ಮರಗಳೇ , ಸಿರಿ ಬನಗಳ ಗಿರಿಗಳೇ (ಸಾಹಿತ್ಯ) | Hole saalina Maragale song lyrics in Kannada


SUBHASHITA - ಕೃಪಣೇನ ಸಮೋ ದಾತಾ (ಜಿಪುಣನು ಮಹಾದಾನಿ)| SUBHASHITA-KRUPANENA SAMO DAATA WITH MEANING IN KANNADA

 


ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


कृपणेन समो दाता भूतो भविष्यति |

अस्प्रशन्नॆव वित्तानि यः परेभ्यो प्रयच्छति ||

 

ಕೃಪಣೇನ ಸಮೋ ದಾತಾ, ಭೂತೋ ಭವಿಷ್ಯತಿ

ಅಸ್ಪೃಶನ್ನೇವ ವಿತ್ತಾನಿ : ಪರೇಭ್ಯೋ ಪ್ರಯಛ್ಚತಿ।

 

ಜಿಪುಣನಿಗೆ ಸಮನಾದ ದಾನಿಯು ಜಗತ್ತಿನಲ್ಲಿ ಹಿಂದೆಯೂ ಇರಲಿಲ್ಲ,ಮುಂದೆಯೂ ಇರುವುದಿಲ್ಲ. ಏಕೆಂದರೆ ಅವನು ತನ್ನಲ್ಲಿರುವ ಸಂಪತ್ತೆಲ್ಲವನ್ನೂ ಕೈಯಿಂದ ಸ್ಪರ್ಶಿಸದೆ ಬೇರೆಯವರಿಗೆ ಕೊಡುತ್ತಾನೆ.

......................................................................................................................

SUBHASHITAS(ಸುಭಾಷಿತಗಳು -ಅರ್ಥ).

PATRIOTIC SONGS(ದೇಶಭಕ್ತಿಗೀತೆಗಳು)

Jul 11, 2022

SUBHASHITA: ಪರೋಪಕಾರಶೀಲತ್ವ೦ (ಸಜ್ಜನರ ಗುಣ) | SUBHASHITA PAROPAKAARA SHEELATVAM WITH MEANING IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

परोपकार शीलत्वम् परदुखाषहिष्णुता |

दयापरत्वं दाक्षिण्यं सतां स्वाभाविका गुणाः ||

 

ಪರೋಪಕಾರಶೀಲತ್ವ೦ ಪರದು:ಖಾಸಹಿಷ್ಣುತಾ।

ದಯಾಪರತ್ವ೦ ದಾಕ್ಷಿಣ್ಯ೦ ಸತಾ೦ ಸ್ವಾಭಾವಿಕಾ ಗುಣಾ:

 

ಪರೋಪಕಾರ ಬುದ್ಧಿ, ಬೇರೆಯವರ ದುಃಖವನ್ನು ನೋಡಿ ಸಹಿಸಿಕೊಳ್ಳಲು ಆಗದಿರುವುದು,ದಯೆ,ದಾಕ್ಷಿಣ್ಯ ಇವುಗಳು ಸಜ್ಜನರ ಸ್ವಾಭಾವಿಕ ಗುಣಗಳು.

...........................................................................................................................

Also See:

ಶಿರಬಾಗಿ ನಮಿಸುವೆನು ಶಂಕರ ಪದಾಂಬುಜಗೆ |SHIRABAGI NAMISUVENU|SHNKARACHARYA SONG LYRICS

ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ(Hindustanavu Endu Mareyada ....Janmisali) Lyrics in Kannada And English