Sep 24, 2022

ನಿದ್ರೆ ಬಾರದೋ ಶ್ರೀ ರಾಘವೇಂದ್ರ (ಭಕ್ತಿಗೀತೆ) ಸಾಹಿತ್ಯ | NIDRE BAARADO SHRI RAGHAVENDRA(DEVOTIONAL SONG)

 ಹಾಡಲು ಕಲಿಯಿರಿ(CLICK HERE TO LEARN THIS SONG)


ನಿದ್ರೆ ಬಾರದೋ ಶ್ರೀ ರಾಘವೇಂದ್ರ ದ್ವೇಷಾಸೂಯೆಗಳ ಕಾಡಿನಲ್ಲಿ|

 

ಚಿಗುರಿಲ್ಲದ ಮರ ಜಲವಿಲ್ಲದ ಕೆರೆ

ಕೂಗದ ಕೋಗಿಲೆ ಬೆಳೆಯದ ಭೂಮಿಯ ಕಂಡು||1||

 

ಮಾತು ಬೇಡ ಮೌನ ಬೇಕು । ಕತ್ತಲು ಬೇಡ ಬೆಳಕು ಬೇಕು

ದುರಾಸೆ ಬೇಡ ಆಸೆ ಬೇಕು। ವ್ಯಸನ ಬೇಡ ವಸನ ಬೇಕು

ದ್ವೇಷ ಬೇಡ ಧರ್ಮ ಬೇಕು||2||

 

ಪಾಪ ಬೇಡ ಪುಣ್ಯ ಬೇಕು।ಗದ್ದಲ ಬೇಡ ಗಾನ ಬೇಕು

ನಾನು ಬೇಡ ನೀನು ಬೇಕು।ರಾಜ ಬೇಡ ಗುರುರಾಜ ಬೇಕು

ಎಂದೆಂದೂ ನೀ ಬೇಕು ಪದ್ಮನಾಭ ದಾಸಗೆ||3||

Other songs of R.K Padmanaabha:

Manasa Vandipe ಮನಸಾ ವಂದಿಪೆ ಗಣನಾಯಕ| LORD GANESHA SONG LYRICS

bandhisenna nee : ಬಂಧಿಸೆನ್ನ ನೀ ನಾದ ಕೋಟೆಯಲ್ಲಿ SONG ON LORD SARASWATI



No comments:

Post a Comment