ಹಾಡಲು ಕಲಿಯಿರಿ(CLICK HERE TO LEARN THIS SONG)
ನಗುತ
ನಗುತ ಬಾಳು ನೀನು ನೂರು
ವರುಷ
ಎಂದೂ
ಹೀಗೆ ಇರಲಿ ಇರಲಿ ಹರುಷ
ಹರುಷ|
ಬಾಳಿನ
ದೀಪ ನಿನ್ನ ನಗೂ
ದೇವರ
ರೂಪ ನೀನೆ ಮಗು
ನಗುತ
ನಗುತ ಬಾಳು ನೀನು ನೂರು
ವರುಷ
ಎಂದೂ
ಹೀಗೆ ಇರಲಿ ಇರಲಿ ಹರುಷ
ಹರುಷ|
ಉಲ್ಲಾಸದ
ಶುಭದಿನಕೆ ಸಂತೋಷವೇ ಉಡುಗೊರೆಯು||
ಹೂವು
ನಕ್ಕಾಗ ತಾನೆ ಅಂದ ಇರುವುದು
ದುಂಬಿ ಬರುವುದು
ಚಂದ್ರ
ನಕ್ಕಾಗ ತಾನೆ ಬೆಳಕು ಬರುವುದು
ಕಡಲು ಕುಣಿವುದು
ಸೂರ್ಯನಾಡೊ
ಜಾರೊ ಆಟ ಬಾನು ನಗಲೆಂದೆ
ಬೀಸೊ ಗಾಳಿ ತೂಗೊ
ಪೈರು ಭೂಮಿ ನಗಲೆಂದೆ
ದೇವರು
ತಂದ ಸೃಷ್ಟಿಯ ಅಂದ ಎಲ್ಲರೂ ನಗಲೆಂದೇ||1||
ಆಕಾಶದಾಚೆ
ಎಲ್ಲೋ ದೇವರಿಲ್ಲವೋ ಹುಡುಕಬೇಡವೋ
ಆ ಮಾಯಗಾರ ತಾನು ಗಿರಿಯಲಿಲ್ಲವೋ ಗುಡಿಯಲಿಲ್ಲವೋ
ಪ್ರೀತಿಯಲ್ಲಿ
ಸ್ನೇಹದಲ್ಲಿ ಇರುವನು ಒಂದಾಗಿ
ತಂಪಿನಲ್ಲೂ
ಕಂಪಿನಲ್ಲೂ ಬರುವನು ಹಿತವಾಗಿ
ಸಂತಸದಲ್ಲಿ
ಸಂಭ್ರಮದಲ್ಲಿ ಮಕ್ಕಳ ನಗುವಾಗಿ||2||
Also See:
ಬಾಳುವಂತ ಹೂವೆ ಬಾಡುವ ಆಸೆ ಏಕೆ(AKASMIKA MOVIE SONG)| Dr. Rajkumar song lyrics |Baaluvantha hoove
No comments:
Post a Comment