Sep 17, 2022

ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ-LYRICS IN KANNADA |PATARAGITTI PAKKA LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ

ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ

ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಶಿಣ ಹಚ್ಚಿ

ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಶಿಣ ಹಚ್ಚಿ||

 

ಎನೋ ಬಣ್ಣ ಬಣ್ಣ ನಡುವೇ ನವಿಲಗಣ್ಣಾ

ಎನೋ ಬಣ್ಣ ಬಣ್ಣ ನಡುವೇ ನವಿಲಗಣ್ಣಾ

ರೇಶಿಮೆ ಪಕ್ಕ ನಯ ಮುಟ್ಟಲಾರೆ ಭಯ

ರೇಶಿಮೆ ಪಕ್ಕ ನಯ ಮುಟ್ಟಲಾರೆ ಭಯ||1||

 

ಹೂವಿನ ಪಕಳಿಗಿಂತ ತಿಳಿವು ತಿಳಿವು ಅಂತ

ಹೂವಿನ ಪಕಳಿಗಿಂತ ತಿಳಿವು ತಿಳಿವು ಅಂತ

ಹೂವಿಗೆ ಹೋಗತಾವ ಗಲ್ಲಾ ತಿವೀತಾವ

ಹೂವಿಗೆ ಹೋಗತಾವ ಗಲ್ಲಾ ತಿವೀತಾವ||2||

 

ಬನ ಬನದಾಗ ಆಡಿ ಪಕ್ಕಾ ಹುಡಿ ಹುಡಿ

ಬನ ಬನದಾಗ ಆಡಿ ಪಕ್ಕಾ ಹುಡಿ ಹುಡಿ

ಹುಲ್ಲುಗಾವಲುದಾಗ ಹಳ್ಳಿ ಹುಡುಗಿ ಹಂಗಾ

ಹುಲ್ಲುಗಾವಲುದಾಗ ಹಳ್ಳಿ ಹುಡುಗಿ ಹಂಗಾ||3||

 

ಕಾಣದೆಲ್ಲೋ ಮೂಡಿ ಬಂದೂ ಗಾಳಿಗೂಡಿ

ಕಾಣದೆಲ್ಲೋ ಮೂಡಿ ಬಂದೂ ಗಾಳಿಗೂಡಿ

ಇನ್ನು ಎಲ್ಲಿಗೋಟ ನಂದನದ ತೋಟ

ಇನ್ನು ಎಲ್ಲಿಗೋಟ ನಂದನದ ತೋಟ||4||


No comments:

Post a Comment