ಹಾಡಲು ಕಲಿಯಿರಿ(CLICK HERE TO LEARN THIS SONG)
ಆಕಾಶದಾಗೆ ಯಾರೊ ಮಾಯಗಾರನು
ಚಿತ್ತಾರ ಮಾಡಿ ಹೋಗೊನೇ..ಏಏಏ
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲನಾಡ ಮಾಡಿ ಹೋಗೋನೇ...
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ..ಆಆಆ..
ಆಕಾಶದಾಗೆ ಯಾರೊ ಮಾಯಗಾರನು
ಚಿತ್ತಾರ ಮಾಡಿ ಹೊಗೋನೇ
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲೆನಾಡ ಮಾಡಿ ಹೋಗೋನೇ..ಏಏಏ
ಸುದ್ದಿ ಇಲ್ಲದೇ ಮೋಡ ಶುದ್ಧಿಯಾಗೋದು
ಸದ್ದೆ ಇಲ್ಲದೇ ಗಂಧ ಗಾಳಿಯಾಗೋದು
ತಂಟೇನೆ ಮಾಡದೆ ಹೊತ್ತುಟ್ಟಿ ಹೋಗೊದು
ಏನೇನು ಮಾಡದೆ ನಾವ್ಯಾಕೆ ಬಾಳೋದು
{ಗಂಡು}
ಹಾರೊ ಹಕ್ಕಿನ ತಂದು ಕೂಡಿಹಾಕೊದು
ಕಟ್ಟೊದೇ ನನ್ನ ಸುಟ್ಟು ತಿಂದು ಹಾಕೊದು
ನರಮನ್‍ಷ್ಯ ಕಲಿಯಲ್ಲ ಒಳ್ಳೇದು ಉಳಿಸೊಲ್ಲ
ಅವನಡಿಯೋ ದಾರಿಲಿ ಗರಿಕೆನು ಬೆಳೆಯೊಲ್ಲ
{ಹೆಣ್ಣು}
ಚಿಲಿಪಿಲಿಗಳ ಸರಿಗಮ ಕಿವಿಯೊಳಗೆ..ಏಏಏ
{ಗಂಡು}
ನೀರಲೆಗಳ ತಕಧಿಮಿ ಎದೆಯೊಳಗೆ..ಏಏಏ
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ..ಆಆಆಆಆ
ಆಕಾಶದಾಗೆ ಯಾರೊ ಮಾಯಗಾರನು
ಚಿತ್ತಾರ ಮಾಡಿ ಹೊಗೋನೇ..ಏಏಏ
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲೆನಾಡ ಮಾಡಿ ಹೋಗೋನೇ...ಏಏಏ
ಕಾಡು ಸುತ್ತುವಾ ಆಸೆ ರಾಣಿಗೇಕಮ್ಮ
ಕಾಲು ಇಟ್ಟರೆ ಸುತ್ತ ಕಲ್ಲು ಮುಳ್ಳಮ್ಮಾ
ಏಳೋದು ಬೀಳೋದು ಬಡವರ ಪಾಡಮ್ಮಾ
ನೀವ್ಯಾಕೆ ಹಾಡಿರಿ ಈ ಹಳ್ಳಿ ಹಾಡಮ್ಮಾ
{ಹೆಣ್ಣು}
ಇಲ್ಲಿ ಬೀಸುವಾ ಗಾಳಿ ಊರಲ್ಯಾಕಿಲ್ಲ
ಇಲ್ಲಿ ಸಿಕ್ಕುವ ಪಾಠ ಶಾಲೆಲ್ಯಾಕಿಲ್ಲ
ಬಂಗಾರ ಸಿಂಗಾರ ಸಾಕಾಗಿ ಹೋಯಿತು
ಅರಮನೆ ಆನಂದ ಬೇಸತ್ತು ಹೋಯಿತು
{ಗಂಡು}
ಕೆಳಗಿಳಿಸುವ ಮನಸಿನ ಭಾರಗಳಾ..ಆಆಆ
ಜಿಗಿಜಿಗಿಯುವ ಚಿಂತೆಯ ದೂರ್ತಗಳ..ಆಆಆ
{ಜೊತೆ}
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ..ಆ..
{ಹೆಣ್ಣು}
ಆಕಾಶದಾಗೆ ಯಾರೊ ಮಾಯಗಾರನು
ಚಿತ್ತಾರ ಮಾಡಿ ಹೊಗೋನೇ
{ಗಂಡು}
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲೆನಾಡ ಮಾಡಿ ಹೋಗೋನೇ...ಏಏಏಏ
{ಜೊತೆ}
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ..ಆಆ
............
ALSO SEE:ಬಾಳುವಂತ ಹೂವೆ ಬಾಡುವ ಆಸೆ ಏಕೆ(AKASMIKA MOVIE SONG)| Dr. Rajkumar song lyrics |Baaluvantha hoove
No comments:
Post a Comment