ಹಾಡಲು ಕಲಿಯಿರಿ(CLICK HERE TO LEARN THIS SONG)
ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ||
ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ ಸಂತೆ ತುಂಬ ಚಿಂತೆ
ಮಧ್ಯ ಮದಗಳಿಂದ
ಚಿಂತೆ ಬೆಳೆವುದಂತೆ
ಅಂಕೆ ಇರದ ಮನಸನು ದಂಡಿಸುವುದು ನ್ಯಾಯ
ಮೂ ಕ
ಮುಗ್ಧ ದೇಹವ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು||1||
ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ
ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ
ಇಲ್ಲಿ ಈಸಬೇಕು ಇದ್ದು ಜಯಿಸಬೇಕು
ನಾಗರಿಕರಾದ ಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ
ಮನದ ಡೊಂಕು
ಕಾಣದೆ ಜಗವನೇಕೆ
ನೀ ದೂರುವೆ||2||
Also SEe:
ಅಮ್ಮ ನಿನ್ನ ಎದೆಯಾಳದಲ್ಲಿ|AMMA NINNA EDEYAALADALLI LYRICS IN KANNADA
No comments:
Post a Comment