ಹಾಡಲು ಕಲಿಯಿರಿ(CLICK HERE TO LEARN THIS SONG)
ಓಡಿ ಬಾರಯ್ಯ
ವೈಕುಂಠಪತಿ ನಿನ್ನ
ನೋಡುವೆ ಮನದಣಿಯೆ
ಆ..|
ನೋಡಿ ಮುದ್ದಾಡಿ
ಮಾತಾಡಿ ಸಂತೋಷದಿ
ಪಾಡಿ ಪೊಗಳುವೆನು ಪರಮ
ಪುರುಷ ಹರಿ||
ಕೆಂದಾವರೆಯನು ಪೋಲುವ ಪಾದಂಗಳು
ಧಿಮಿ ಧಿಮಿ ಧಿಮಿರೆಂದು ಕುಣಿಯುತಲಿ
ಅಂದುಗೆ ಕಿರುಗೆಜ್ಜೆ ಘಲು ಘಲು ಎನುತಿರೆ
ಅರವಿಂದ ನಯನನೆ ಗೋವಿಂದನೇ ಬಾರೋ||
ಕರಿ ತುರುಬಿನ ಮೇಲೆ ನಲಿ ನಲಿಯುತಲಿಹ
ಮರುಗ ಮಲ್ಲಿಗೆ ಜಾಜಿ ತುಳಸಿಯ ದಂಡೆ|
ಕರದಲಿ ಪಿಡಿದಿಹ ಮುತ್ತಿನ ಚೆಂಡು
ಸರಸದಿಂದಲಿ ನಲಿದಾಡುತ ಬಾರೋ||
ಮಂಗಳಾತ್ಮಕ ಮೋಹನಕಾರ
ಸಂಗೀತಲೋಲ ಸದ್ಗುಣಶೀಲ
ಅಂಗನೆಯರಿಗೆಲ್ಲ ಅತಿ ಪ್ರಿಯನಾದ
ಮಂಗಳ ಮೂರುತಿ ಪುರಂದರ ವಿಠಲ||
No comments:
Post a Comment