Aug 29, 2022

SUBHASHITA:ಕಾವ್ಯಶಾಸ್ತ್ರ ವಿನೋದೇನ |KAVYA SHASTRA VINODENA LYRICS WITH MEANING

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


काव्य शास्त्र विनॊदेन कालो गच्छति धीमताम् |

व्यसनेन मूर्खाणां निद्त्रया कलहेन वा ||

 

ಕಾವ್ಯಶಾಸ್ತ್ರ ವಿನೋದೇನ ಕಾಲೋ ಗಚ್ಛತಿ ಧೀಮತಾಂ।

ವ್ಯಸನೇನ ಮೂರ್ಖಾಣಾ೦ ನಿದ್ರಯಾ ಕಲಹೇನ ವಾ॥

 

ಬುದ್ಧಿವಂತರು /ವಿವೇಕಿಗಳು ತಮ್ಮ ಬಿಡುವಿನ ವೇಳೆಯನ್ನು ಕಾವ್ಯಶಾಸ್ತ್ರ ಗಳನ್ನು ತಿಳಿಯುವುದರ ಮೂಲಕ/ನೋಡುವುದರ ಮೂಲಕ /ಚರ್ಚಿಸುವುದರ ಮೂಲಕ ತಮ್ಮ ಸಮಯವನ್ನು ಉಪಯೋಗಿಸಿಕೊಳ್ಳುತ್ತಾರೆ .ಆದರೆ ಮೂರ್ಖರು ತಮ್ಮ ಕಾಲವನ್ನು ಬೇಡದ ಅಭ್ಯಾಸಗಳಲ್ಲಿ ತೊಡಗಿಸಿಕೊಂಡು ಅಥವಾ ನಿದ್ರಿಸುತ್ತಾ/ಜಗಳವಾಡುತ್ತಾ ವ್ಯಯಿಸುತ್ತಾರೆ.

 The intelligent/wise use their free time by knowing/watching/discussing poetry. But the foolish spend their time engaging in unwanted habits or sleeping/quarrelling.

...................................................................................................


Aug 27, 2022

ಗಣೇಶ ಶ್ಲೋಕಗಳು ಅರ್ಥ ಸಹಿತ lyrics with meaning| ganesha shloka with meaning

 

ಹಾಡಲು ಕಲಿಯಿರಿ(CLICK HERE TO LEARN THIS SHLOKAS))


ವಾಗೀಶಾದ್ಯಾ: ಸುಮನಸ: ಸರ್ವಾರ್ಥಾನಾಮುಪಕ್ರಮೇ।

ಯ೦ ನತ್ವಾ ಕೃತಕೃತ್ಯಾಸ್ಯು: ತ೦ ನಮಾಮಿ ಗಜಾನನ೦॥

 

ಬ್ರಹ್ಮನೇ ಮೊದಲಾದ ದೇವತೆಗಳು ಎಲ್ಲಾ ಕೆಲಸಗಳ ಆರಂಭದಲ್ಲಿ ಯಾರನ್ನು ಸ್ತುತಿಸಿ ಕೃತಾರ್ಥರಾಗುತ್ತಾರೋ ಆ ಗಜಾನನನಿಗೆ ನಮಸ್ಕರಿಸುತ್ತೇನೆ.

 ...................................................................................................................

 ಮಾತಾಮಹ ಮಹಾಶೈಲ೦ ಮಹಸ್ತದ ಪಿತಾಮಹ೦ |

ಕಾರಣಂ ಜಗತಾಂ ವಂದೇ ಕಂಠಾದುಪರಿ ವಾರಣಮ್ ||

 

ಯಾರ ತಾಯಿಯ ತಂದೆ ಪರ್ವತರಾಜನೋ, ಯಾರ ತಂದೆಯ ತಂದೆ ಬ್ರಹ್ಮದೇವನೋ, ಯಾರು ಈ ಜಗತ್ತಿನ ಎಲ್ಲಾ ಆಗುಹೋಗುಗಳಿಗೆ ಕಾರಣರೋ ಹಾಗೂ ಆನೆಯ ಮುಖವನ್ನು ಧರಿಸಿದ ಗಜಾನನನಿಗೆ ನಮಸ್ಕರಿಸುತ್ತೇನೆ

 .............................................................................................................................

ಆಲಂಬೆ ಜಗದಾಲಂಬಂ ಲಂಬೋದರ ಪದಾಂಬುಜo |

ಶುಷ್ಯಂತಿ ಯದ್ರಜಸ್ಪರ್ಶಾತ್ ಸದ್ಯ: ಪ್ರತ್ಯೂಹವಾರ್ಧಯ: ||

 

ಜಗತ್ತಿಗೆ ಆಧಾರನಾದ, ಯಾರ ಪಾದಧೂಳಿಯ ಸ್ಪರ್ಶಮಾತ್ರದಿಂದ ವಿಘ್ನಗಳ ಸಾಗರಗಳು ಶುಷ್ಕವಾಗುತ್ತವೆಯೋ ಅಂತಹ ಲಂಬೋದರನ ಪಾದಗಳನ್ನು ಆಶ್ರಯಿಸುತ್ತೇನೆ.

................................................................................................................................................

Aug 26, 2022

ಅಂಬಾತನಯ ಹೇರಂಬ(ಸಾಹಿತ್ಯ)|AMBA TANAY HE RAMBA SONG LYRICS IN KANNADA, SONG ON LORD GANESHA

 ಹಾಡಲು ಕಲಿಯಿರಿ(CLICK HERE TO LEARN THIS SONG)


ಅಂಬಾತನಯ ಹೇರಂಬ, ಅಂಬಾತನಯ ಹೇರಂಬ

ಕರುಣಾಂಬುಧೇ ತವ ಚರಣಾಂಬುಜಕೆರಗುವೆ||

 

ದಶನ ಮೋದಕ ಪಾಶಾಂಕುಶ ಪಾಣಿ

ಅಸಮ ಚಾರುದೇಷ್ಣ ಕುಸುಮನಾಭನುತ||1||

 

ವೃಂದಾರಕ ವೃಂದ ವಂದಿತ ಚರಣಾರವಿಂದ

ಯುಗಳ ದಯದಿಂದ ನೋಡೆನ್ನ|

ಯೂಥಪ ವದನ ಪ್ರದ್ಯೋತ ಸನ್ನಿಭ    

ಜಗನ್ನಾಥ ವಿಠ್ಠಲನ ಸಂಪ್ರೀತಿ ವಿಷಯ||2||

.................................................................................................

Also See:

ಮಧುಕರ ವೃತ್ತಿ ಎನ್ನದು song lyrics in Kannada and English |song on Lord Krishna/Vishnu

SUBHASHITA:ಪಿಪೀಲಿಕಾರ್ಜಿತಂ ಧಾನ್ಯಂ(ಲೋಭತನ ಒಳ್ಳೆಯದಲ್ಲ)|PIPEELIKARJITAM DHANYAM WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

पिपीलिकार्जितं धान्यं मक्षिका संचितं मधु |

लुब्धेन संचितं द्रव्यं समूलं हि विनश्यति ||

 

ಪಿಪೀಲಿಕಾರ್ಜಿತಂ ಧಾನ್ಯಂ ಮಕ್ಷಿಕಾ ಸಂಚಿತ೦ ಮಧು।

ಲುಬ್ಧೇನ ಸಂಚಿತ೦ ದ್ರವ್ಯ೦ ಸಮೂಲ೦ ಹಿ ವಿನಷ್ಯತಿ॥

 

ಹೇಗೆ ಇರುವೆಗಳು ಸಂಗ್ರಹಿಸಿದ ಧಾನ್ಯಗಳು, ಜೇನುನೊಣಗಳು ಸಂಗ್ರಹಿಸಿದ ಮಧು ಅವುಗಳ ಉಪಯೋಗಕ್ಕೆ ಬರುವುದಿಲ್ಲವೋ ಹಾಗೆಯೇ ಜಿಪುಣನು ಸಂಗ್ರಹಿಸಿದ ಸಂಪತ್ತು ಬೇರೆಯವರ ಕೈ ಸೇರುತ್ತದೆ.

 

Just as grains gathered by ants and honey gathered by bees are of no use to them, so the wealth gathered by a miser goes into someone else's hands.

..............................................................................................................................................

Also See:

ಬಂದನೋ ಬಂದನೋ ನಮ್ಮ ಗಣಪ ಬಂದನೋ (BANDANO BANDANO SONG LYRICS )

Aug 25, 2022

SUBHASHITA:ಸಂಸಾರ ವಿಷ ವೃಕ್ಷಸ್ಯ(IMPORTANCE OF SUBHASHITA)|SAMSARA VISHA VRAKSHASYA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


संसार विषवृक्षस्य द्वे फले अमृतॊपमे |

सुभाषित रस्सास्वादः संगति: सुजनै: सह ||

 

ಸಂಸಾರ ವಿಷ ವೃಕ್ಷಸ್ಯ ದ್ವೇ ಫಲೇ ಅಮೃತೋಪಮೇ।

ಸುಭಾಷಿತ ರಸಾಸ್ವಾದ: ಸಂಗತಿ: ಸುಜನೈ: ಸಹ॥

 

ಸಂಸಾರವೆನ್ನುವ ವಿಶ್ವ ವೃಕ್ಷದಲ್ಲಿ ಅಮೃತಕ್ಕೆ ಸಮಾನವಾದ ಎರಡು ಹಣ್ಣುಗಳಿವೆ ಅವುಗಳೆಂದರೆ ಸುಭಾಷಿತಗಳ ರಸವನ್ನು ಆಸ್ವಾದಿಸುವುದು ಹಾಗೂ ಸಜ್ಜನರ ಸಹವಾಸ.

.................................................................................................

Aug 24, 2022

ಈಶ್ವರ ಪರಮೇಶ್ವರ |Eshwara parameshawara ,song on lord shiva lyrics

 ಹಾಡಲು ಕಲಿಯಿರಿ(CLICK HERE TO LEARN THIS SONG)

ಈಶ್ವರ ಪರಮೇಶ್ವರ ಜಯ ಜಯ ಶಿವ ಹರ ಹರ ಜಗದೀಶ್ವರ

ಸರ್ವಲೋಕ ಪಾಲಕ ಧರ್ಮ ಲೋಕ ಪೋಷಕ

ಜಯ ಜಯ ಶಿವ ಹರ ಹರ ಮಹದೀಶ್ವರ||


ಕಾಲ ಕಾಲ ಲೋಕಪಾಲ ವಿಲಸದೀಶ್ವರ

ನಾಕಲೋಕ ನಾಗಲೋಕ ರಕ್ಷಕೇಶ್ವರ

ವಿಧಿ ಹರಿನುತ ಈಶ್ವರ ಯತಿಗಣನುತ ಈಶ್ವರ

ಜಯ ಜಯ ಶಿವ ಹರ ಹರ ಮಹದೀಶ್ವರ||2||

…………………………………………………………………………..

Eshwara parameshwara

Jaya jaya shiva hara hara jagadishwara

Sarva loka paalaka dharma loka poShaka

Jaya jaya shiva hara hara mahadeeshwara||

 

Kaala kaala lokapaala vilasadheeshwara

Naakaloka naagaloka rakshakeshwara

Vidhi harinutha eshwara yathi gananutha eshwara

Jaya jaya shiva hara hara mahadheeshwara||

..................................................................................................................

Aslo See:

ಶಂಕರ ಶಶಿಧರ ಗಜಚರ್ಮಾಂಬರ SONG LYRICS IN KANNADA |SHANKARA SHASHIDHARA SONG LYRICS|

SUBHASHITA:ಯಥಾ ಕಂದುಕಪಾತೇನ (ಕಷ್ಟಗಳು ಬಂದಾಗ ಸಜ್ಜನರು Vs ದುರ್ಜನರು )|YATHA KANDUKA PAATENA WITH MEANING

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


यथा कन्दुकपातॆनोत्पतयार्य  पतन्नपि |

तथात्वनार्यः पतति मृत्पिन्ड पतनं यथा||

 

ಯಥಾ ಕಂದುಕಪಾತೇನೋತ್ಪತಯಾರ್ಯ ಪತನ್ನಪಿ।

ತಥಾತ್ವನಾರ್ಯ: ಪತತಿ ಮೃತ್ಪಿಂಡಪತನ೦ ಯಥಾ॥

 

ಹೇಗೆ ಚೆಂಡನ್ನು ಕೆಳಕ್ಕೆ ಎಸೆದರೆ ಮತ್ತೆ ತಾನಾಗಿಯೇ ಮೇಲಕ್ಕೆ ಚಿಮ್ಮುವುದು ಹಾಗೆಯೇ ಆರ್ಯರು ಅಥವಾ ಉತ್ತಮ ಪುರುಷರು ಜೀವನದಲ್ಲಿ ಸೋಲು ಕಷ್ಟಗಳು ಬಂದರೂ ಸಹ ಅವುಗಳನ್ನು ಎದುರಿಸಿ ಮತ್ತೆ ಮುಂದಿನ ಜೀವನಕ್ಕೆ ಸಜ್ಜಾಗುತ್ತಾರೆ .ಆದರೆ  ಅನಾರ್ಯರು, ಜೀವನೋತ್ಸಾಹವಿಲ್ಲದ  ಮನುಷ್ಯ ಮಣ್ಣಿನ ಮುದ್ದೆಯನ್ನು ನೆಲಕ್ಕೆಸೆದರೆ ಹೇಗೆ ಪುಡಿಯಾಗುವುದೋ ಹಾಗೆಯೇ ಸೋಲು/ ಕಷ್ಟಗಳು ಬಂದಾಗ ಎದುರಿಸಲಾಗದೆ ನಾಶ ಹೊಂದುತ್ತಾರೆ.

Just as if a ball is thrown down, it bounces up again by itself, good men face them even if there are failures and hardships in life and prepare for the next life. But a man without enthusiasm for life, just as if a lump of clay is thrown on the ground, they are irresistibly destroyed when defeats/difficulties come.

...............................................................................................................................

Aug 23, 2022

ಬಾಳುವಂತ ಹೂವೆ ಬಾಡುವ ಆಸೆ ಏಕೆ(AKASMIKA MOVIE SONG)| Dr. Rajkumar song lyrics |Baaluvantha hoove

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಬಾಳುವಂತ ಹೂವೆ ಬಾಡುವ ಆಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ||

 

ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ ಸಂತೆ ತುಂಬ ಚಿಂತೆ
ಮಧ್ಯ
ಗಳಿಂದ ಚಿಂತೆ ಬೆಳೆವುದಂತೆ

ಅಂಕೆ ಇರದ ಮನಸನು ದಂಡಿಸುವುದು ನ್ಯಾಯ
ಮೂ
ಮುಗ್ಧ ದೇಹವ ಹಿಂಸಿಸುವುದು ಹೇಯ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೇರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಲು||1||

 

ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ
ನಾವೆ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ

ಇಲ್ಲಿ ಈಸಬೇಕು ಇದ್ದು ಜಯಿಸಬೇಕು
ನಾಗರಿಕರಾದ ಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ

ಮನದ ಡೊಂಕು ಕಾಣದೆ ಜಗವನೇಕೆ ನೀ ದೂರುವೆ||2||

.............................................................................................................................

Also SEe:

ಅಮ್ಮ ನಿನ್ನ ಎದೆಯಾಳದಲ್ಲಿ|AMMA NINNA EDEYAALADALLI LYRICS IN KANNADA

SUBHASHITA:ವಿದ್ಯಾ ವಿವಾದಾಯ ಧನಂ ಮದಾಯ(ಸಜ್ಜನರು ದುರ್ಜನರ ವ್ಯತ್ಯಾಸ)|VIDYA VIVADAAYA DHANAM MADAAYA WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

विद्या विवादाय धनं मदाय शक्ति:परेषां परपीडनाय |

खलस्य साधो: विपरीतमेतत् ज्ञानाय दानाय रक्षणाय ||

 

ವಿದ್ಯಾ ವಿವಾದಾಯ ಧನಂ ಮದಾಯ ಶಕ್ತಿ: ಪರೇಷಾಂ ಪರ ಪೀಡನಾಯ।

ಖಲಸ್ಯ ಸಾಧೋ: ವಿಪರೀತಮೇತತ್ ಜ್ಞಾನಾಯ ದಾನಾಯ ಚ್ ರಕ್ಷಣಾಯ॥

 

ದುಷ್ಟರು ತಮ್ಮಲ್ಲಿರುವ ವಿದ್ಯೆಯನ್ನು ಬರೀ ವಾದವಿವಾದಗಳಿಗೆ ಉಪಯೋಗಿಸುತ್ತಾರೆ.ಅವರಲ್ಲಿರುವ ಧನಸಂಪತ್ತು ಬರಿ ತೋರ್ಪಡಿಕೆ ಗಾಗಿ. ಅವರಲ್ಲಿರುವ ಶಕ್ತಿಯನ್ನೆಲ್ಲ ಬೇರೆಯವರ ಪೀಡನೆ ಗೋಸ್ಕರ ಉಪಯೋಗಿಸುತ್ತಾರೆ.

ಆದರೆ ಸಜ್ಜನರು ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ ಅವರು ತಮ್ಮಲ್ಲಿರುವ ವಿದ್ಯೆಯನ್ನು ಜ್ಞಾನವನ್ನು ವೃದ್ಧಿಗೊಳಿಸಲು ,ತಮ್ಮಲ್ಲಿರುವ ಧನವನ್ನು ದಾನ ಧರ್ಮಗಳಿಗೆ ಹಾಗೂ ತಮ್ಮ ಶಕ್ತಿಯನ್ನು ಬೇರೆಯವರ ರಕ್ಷಣೆಗಾಗಿ ಉಪಯೋಗಿಸುತ್ತಾರೆ.

 

The wicked use their knowledge only for arguments.Their wealth is just for show. They use all their power to torment others. But gentlemen act on the contrary, they use their knowledge to increase knowledge, their wealth for charity and their strength for the protection of others.

..........................................................................................................................


Aug 22, 2022

SUBHASHITA: ಆರೋಪ್ಯತೇ ಶಿಲಾ ಶೈಲೇ (ಅಭ್ಯಾಸದ ಮಹತ್ವ)| AROPYATE SHILA SHAILE SUBHASHITA IN KANNADA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

आरोप्यते शिला शैले यत्नेन महता यथा |

पात्यते तु क्षणेनार्धे स्तथात्मा गुणदोषयॊ:||

 

ಆರೋಪ್ಯತೇ ಶಿಲಾ ಶೈಲೇ ಯತ್ನೇನ ಮಹತಾ ಯಥಾ।

ಪಾತ್ಯತೇ ತು ಕ್ಷಣೇನಾರ್ಧೇ ಸ್ತಥಾತ್ಮಾ ಗುಣದೋಷಯೋ:

 

ಒಂದು ಕಲ್ಲನ್ನು ಬಂಡೆಯ ಮೇಲೆ ಇಡಬೇಕಾದರೆ ಬಹಳ ಕಷ್ಟಪಡಬೇಕಾಗುತ್ತದೆ ಆ ಬಂಡೆಯನ್ನು ಏರುವುದೇ ಒಂದು ಸಾಹಸದ ಕೆಲಸ ಆದರೆ ಅದೇ ಕಲ್ಲನ್ನು ಬಂಡೆಯಿಂದ ಕೆಳಗೆ ಇಳಿಸಬೇಕಾದರೆ ಒಂದು ಕ್ಷಣ ಸಾಕು ಹಾಗೆಯೇ ಒಂದು ಒಳ್ಳೆಯ ನಡತೆಯನ್ನು ಬೆಳೆಸಿಕೊಳ್ಳಬೇಕಾದರೆ ಬಹಳ ಕಷ್ಟ ಪಡಬೇಕು ನಿರಂತರ ಪರಿಶ್ರಮದಿಂದ ಮಾತ್ರ ಅದು ಸಾಧ್ಯ ಆದರೆ ಕೆಟ್ಟ ಗುಣ ಬೆಳೆಸಿಕೊಳ್ಳಬೇಕಾದರೆ ಒಂದು ಕ್ಷಣ ಸಾಕು.

If you want to place a stone on a rock it takes a lot of hard work. To climb that rock is an adventure but if you want to bring the same stone down from the rock ,it takes a moment just as if you want to develop a good character you need a lot of hard work, it is possible only with constant effort but if you want to develop a bad character a moment is enough.

........................................................................................

Also See:

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು|HUTTIDARE KANNADA NAADAL HUTTABEKU SONG LYRICS IN KANNADA

Aug 20, 2022

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು|HUTTIDARE KANNADA NAADAL HUTTABEKU SONG LYRICS IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SONG)


ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣನ್ ಮೆಟ್ಟಬೇಕು
ಬದುಕಿದು ಜಟಕಾ ಬಂಡಿ,
ಇದು ವಿಧಿ ಓಡಿಸುವ ಬಂಡಿ
ಬದುಕಿದು ಜಟಕಾ ಬಂಡಿ
ವಿಧಿ ಅಲೆದಾಡಿಸುವ ಬಂಡಿ||


ಕಾಶಿಲಿ ಸ್ನಾನ ಮಾಡು ಕಾಶ್ಮೀರ ಸುತ್ತಿ ನೋಡು
ಜೋಗದ ಗುಂಡಿಗೊಡೆಯ ನಾನೆಂದು ಕೂಗಿ ಹಾಡು
ಅಜಂತ ಎಲ್ಲೋರವ ಬಾಳಲ್ಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚೆಂದಾನ ತೂಕಮಾಡು
ಕಲಿಯೋಕೆ ಕೋಟಿ ಭಾಷೆ ಆಡೋಕ್ಕೆ ಒಂದೇ ಭಾಷೆ 

ಕನ್ನಡಾ..ಕನ್ನಡಾ..ಕಸ್ತೂರಿ ಕನ್ನಡಾ||1||


ಧ್ಯಾನಕ್ಕೆ ಭೂಮಿ ಇದು, ಪ್ರೇಮಕ್ಕೆ ಸ್ವರ್ಗ ಇದು
ಸ್ನೇಹಕ್ಕೆ ಶಾಲೆ ಇದು ,ಜ್ಞಾನಕ್ಕೆ ಪೀಠ ಇದು
ಕಾವ್ಯಕ್ಕೆ ಕಲ್ಪ ಇದು, ಶಿಲ್ಪಕ್ಕೆ ತಲ್ಪ ಇದು
ನಾಟ್ಯಕ್ಕೆ ನಾಡಿ ಇದು, ನಾದಾಂತರಂಗವಿದು
ಕುವೆಂಪು ಬೇಂದ್ರೆಯಿಂದ ಕಾರಂತ ಮಾಸ್ತಿಯಿಂದ
ಧನ್ಯವೀ ಕನ್ನಡ ....ಗೋಕಾಕಿನ ಕನ್ನಡಾ..||2||


ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ

ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು

ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು?
ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು?
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮ
ಇಲ್ಲಿಯೇ....ಇಲ್ಲಿಯೇ.... ಎಂದಿಗೂ ನಾನಿಲ್ಲಿಯೇ.....||3||

.........................................................



Aug 19, 2022

ಓಡಿ ಬಾರಯ್ಯ ವೈಕುಂಠಪತಿ LYRICS IN KANNADA| ODI BARAYYA SONG LYRICS| LORD KRISHNA

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯೆ ..|

ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ

ಪಾಡಿ ಪೊಗಳುವೆನು  ಪರಮ ಪುರುಷ ಹರಿ||

 

ಕೆಂದಾವರೆಯನು ಪೋಲುವ ಪಾದಂಗಳು

  ಧಿಮಿ ಧಿಮಿ ಧಿಮಿರೆಂದು ಕುಣಿಯುತಲಿ

ಅಂದುಗೆ ಕಿರುಗೆಜ್ಜೆ ಘಲು ಘಲು ಎನುತಿರೆ

ಅರವಿಂದ ನಯನನೆ ಗೋವಿಂದನೇ ಬಾರೋ||

 

ಕರಿ ತುರುಬಿನ ಮೇಲೆ ನಲಿ ನಲಿಯುತಲಿಹ

ಮರುಗ ಮಲ್ಲಿಗೆ ಜಾಜಿ ತುಳಸಿಯ ದಂಡೆ|

ಕರದಲಿ ಪಿಡಿದಿಹ ಮುತ್ತಿನ ಚೆಂಡು

ಸರಸದಿಂದಲಿ ನಲಿದಾಡುತ ಬಾರೋ||

 

ಮಂಗಳಾತ್ಮಕ ಮೋಹನಕಾರ

ಸಂಗೀತಲೋಲ ಸದ್ಗುಣಶೀಲ

ಅಂಗನೆಯರಿಗೆಲ್ಲ ಅತಿ ಪ್ರಿಯನಾದ

 ಮಂಗಳ ಮೂರುತಿ ಪುರಂದರ ವಿಠಲ||

.............................................................................................................................

Also See:

SUBHASHITA: ಕಾರ್ಯಾರ್ಥೀ ಭಜತೇ ಲೋಕಂ|KARYARTHI BHAJATE LOKAM MEANING IN KANNADA

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

कार्यार्थी भजते लोकं यावत् कार्यं सिध्यति |

उत्तीर्णॆ परे पारे नौकायां किं प्रयोजनम् ||

 

ಕಾರ್ಯಾರ್ಥೀ ಭಜತೇ ಲೋಕಂ ಯಾವತ್ ಕಾರ್ಯಂ ಸಿಧ್ಯತಿ।

ಉತ್ತೀರ್ಣೇ ಪರೇ ಪಾರೆ ನೌಕಾಯಾ೦ ಕಿ೦ ಪ್ರಯೋಜನಮ್॥

 

ಮನುಷ್ಯನು ಬೇರೆಯವರಿಂದ ತನಗೆ ಆಗಬೇಕಾದ ಕೆಲಸ ಮುಗಿಯುವ ತನಕ ಅವರನ್ನು ಹೋಗುತ್ತಿರುತ್ತಾನೆ ಆದರೆ ಕೆಲಸ ಮುಗಿದ ಮೇಲೆ ಅವರನ್ನುನದಿ ದಾಟಿದ ಮೇಲೆ ಅಂಬಿಗನನ್ನು ದೋಣಿಯನ್ನು ಮರೆಯುವ ಪ್ರಯಾಣಿಕನಂತೆ ಮರೆತು ಬಿಡುತ್ತಾನೆ

............................................................................................................................

Aug 18, 2022

ಮಧುಕರ ವೃತ್ತಿ ಎನ್ನದು song lyrics in Kannada and English |song on Lord Krishna/Vishnu

 ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ:ಪುರಂದರ ದಾಸರು


 ಮಧುಕರ ವೃತ್ತಿ ಎನ್ನದು ಬಲು ಚೆನ್ನದು

 ಮಧುಕರ ವೃತ್ತಿ ಎನ್ನದು|

 ಪದುಮನಾಭನ ಪಾದ ಪದುಮ ಮಧುಪವೆಂಬ||

 ಕಾಲಿಗೆ ಗೆಜ್ಜೆ ಕಟ್ಟಿ ನೀಲವರ್ಣನ ಗುಣ

ಆಲಾಪಿಸುತ ಬಲು ಓಲಗ ಮಾಡುವಂಥ||1||

 ರಂಗನಾಥನ ಗುಣ ಹಿಂಗದೆ ಪಾಡುತ್ತ

ಶೃಂಗಾರ ನೋಡುತ್ತ ಕಂಗಳ ಆನಂದವೆಂಬ||2||

 ಇಂದಿರಾಪತಿ ಪುರಂದರ ವಿಠಲನಲ್ಲಿ

ಚೆಂದದ ಭಕ್ತಿಯಿಂದ ಆನಂದ ಪಡುವಂಥ||3||

……………………………………………………………………………

  

Lyrics: Purandara Dasa

 

Madhukara vratti ennadu balu chennadu

Madhukara vratti ennadu|

 

Padumanaabhana paada paduma madhupavemba||

 

Kaalige gekke katti neelavarnana guna

Aalaapisuta balu olaga maaduvantha||1||

 

Ranganaathana guna hingade paadutta

Shrangaara noodutta kangala aanandavemba||2||

 

Indiraapati purandara vittalanalli

Chendada bhaktiyinda aananda paduvantha||3||

...............................................................................................................................................

Also See:

ನೀಲ ನೀಲ ಮೇಘ ಶ್ಯಾಮ ಓಡಿ ಓಡಿ ಬಾ(song on lord krishna)lyrics in Kannada and English

ಶ್ರೀ ತುಳಸಿ ಶ್ಲೊಕಗಳು:SHLOKAS ON LORD TULASI (LYRICS, HOW TO SING) IN KANNADA

SUBHASHITA:ಆಚಾರ್ಯಾತ್ ಪಾದಮಾದತ್ತೆ(ಜ್ಞಾನಾರ್ಜನೆಯ ಮಾರ್ಗಗಳು)| ACHARYAT PAADAMAADATTE WITH MEANING

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

आचार्यात् पादमादत्ते पादं शिष्य स्वमेधया |

पादं सब्रह्मचारिभ्यः  पादं कालक्रमॆण तु ||

 

ಆಚಾರ್ಯಾತ್ ಪಾದಮಾದತ್ತೆ ಪಾದಂ ಶಿಷ್ಯ ಸ್ವಮೇಧಯಾ।

 ಪಾದಂ ಸಬ್ರಹ್ಮಚಾರಿಭ್ಯ: ಪಾದಂ  ಕಾಲಕ್ರಮೇಣ ತು॥

 

ವಿದ್ಯಾರ್ಥಿಯು ತನ್ನ ಜ್ಞಾನಾರ್ಜನೆಯ ಕಾಲುಭಾಗವನ್ನು ಗುರುಗಳಿಂದಲೂ, ಕಾಲುಭಾಗವನ್ನು ಸ್ವಂತ ಬುದ್ಧಿ ಶಕ್ತಿಯಿಂದಲೂ, ಕಾಲುಭಾಗವನ್ನು ತನ್ನ ಸಹಪಾಠಿಗಳಿಂದಲೂ ಹಾಗೂ ಉಳಿದ ಕಾಲು ಭಾಗವನ್ನು ಕಾಲಕ್ರಮೇಣ ಅನುಭವದಿಂದಲೂ ಪಡೆಯುತ್ತಾನೆ.

 

A student acquires a quarter of his knowledge from his teacher, a quarter from his own intellect, a quarter from his classmates and the remaining quarter from experience over time.

...........................................................................................................................................

Also See:

Aug 17, 2022

ನೀಲ ನೀಲ ಮೇಘ ಶ್ಯಾಮ ಓಡಿ ಓಡಿ ಬಾ(song on lord krishna)lyrics in Kannada and English

ಹಾಡಲು ಕಲಿಯಿರಿ(CLICK HERE TO LEARN THIS SONG) 


ನೀಲ ನೀಲ ಮೇಘ ಶ್ಯಾಮ ಓಡಿ ಓಡಿ ಬಾ|

ನೀಲಾದೇವಿ ರಮಣ ನಿಗಮ ವೇದ್ಯ ಬಾ||

 

ಬಾಯಿಬಾಯಿ ಪುಟ್ಟ ಬಾಯಿ ಮಣ್ಣನು೦ಡ ಬಾಯಿ|

ಮಣ್ಣು ಕಾಣಲಿಲ್ಲ ಜಗವ ಕಂಡಳು ತಾಯಿ||1||

 

ದೂರ ದೂರ ದುರಿತಕೆ ದೂರ ನಿನ್ನ ನಾಮ।

ಸಾರಿಸಾರಿ ಭಜಿಪೆನೊ ಪೊರೆಯೊ ಮೇಘಶ್ಯಾಮ॥2||

 

ಸತ್ಯ ಸತ್ಯ ಸತ್ಯ ರಮಣ ಸತ್ಯ ಸಂಕಲ್ಪನೆ

ನಿತ್ಯ ನಿತ್ಯ ತೋರು ತಂದೆ ಪುರಂದರವಿಠಲನೆ॥3||

 

Neela neela megha shyama odi odi baa|

Neeladevi ramanane nigama vedya baa||

 

Baayi baayi putta baayi mannanunda baayi|

Mannu kaanalilla jagava kandalu taayi||1||

 

Doora doora duritake doora ninna naama|

Saari saari bhajipeno poreyo megha shyama||2||

 

Satya satya satya ramana satya sankalpane|

Nitya nitya toru tande purandara vittalane||3||

......................................................................................................

Also See:

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ (ಸಾಹಿತ್ಯ) | TOREDU JEEVISABAHUDE SONG LYRICS IN KANNADA|

ಓ೦ ಗ೦ ಗಣಪತೆ ನಮಿಪೆ (OM GAM GANAPATE NAMIPE) SONG LYRICS IN KANNADA SONG ON LORD GANESHA