Oct 31, 2022

ಸರಳ ಸುಭಾಷಿತ - ವ್ಯಾಯಾಮಾತ್ ಲಭತೇ ಸ್ವಾಸ್ಥ್ಯ೦ (ವ್ಯಾಯಾಮದ ಮಹತ್ವ) | SUBHASHITA ON IMPORTANCE OF HEALTH

ಹಾಡಲು ಕಲಿಯಿರಿ(CLICK HERE TO LEARN THIS SUBHASHITA) 


व्यायामात् लभते स्वास्थ्यं दीर्घायुष्यं बलं सुखम् |

आरोग्यं परमं भाग्यं स्वास्थ्यं सर्वत्र साधनम् ||

 

ವ್ಯಾಯಾಮಾತ್ ಲಭತೇ ಸ್ವಾಸ್ಥ್ಯ೦ ದೀರ್ಘಾಯುಷ್ಯ೦ ಬಲ೦ ಸುಖಮ್।

ಆರೋಗ್ಯ೦ ಪರಮ೦ ಭಾಗ್ಯ೦ ಸ್ವಾಸ್ಥ್ಯ೦ ಸರ್ವತ್ರ ಸಾಧನಮ್॥

 

ವ್ಯಾಯಾಮದಿಂದ ಆರೋಗ್ಯ ಬಲ ಸುಖ ಹಾಗೂ ದೀರ್ಘಾಯುಷ್ಯ ದೊರಕುತ್ತದೆ ಆರೋಗ್ಯವೇ ಭಾಗ್ಯ. ಆರೋಗ್ಯದಿಂದಿದ್ದರೆ ನಮಗೆ ಸಾಧನೆಗೆ ಹುಮ್ಮಸ್ಸು ಬರುತ್ತದೆ . ಆದ್ದರಿಂದ ನಿತ್ಯ ಜೀವನಶೈಲಿಯಲ್ಲಿ ವ್ಯಾಯಾಮವನ್ನು ರೂಢಿಸಿಕೊಳ್ಳಬೇಕು

 

Exercise brings health, happiness and long life. Health is wealth. If we are healthy, we will be motivated to achieve. Therefore, exercise should be a regular part of daily life.

..............................................................................................

ALSO SEE:

ಸರಳ ಸುಭಾಷಿತ - ಶ್ರೂಯತಾಂ ಧರ್ಮ ಸರ್ವಸ್ವಂ (ಧರ್ಮ ಪಾಲನೆ) LYRICS |SUBHASHITA : SHRUYATAM DHARMA SARVASWAM

ಸರಳ ಸುಭಾಷಿತ -ನ ಕಶ್ಚಿದಪಿ ಜಾನಾತಿ LYRICS WITH MEANING | SUBHASHITA - NA KASHCHIDAPI JANATI WITH MEANING

Oct 21, 2022

ಸರಳ ಸುಭಾಷಿತ - ಶ್ರೂಯತಾಂ ಧರ್ಮ ಸರ್ವಸ್ವಂ (ಧರ್ಮ ಪಾಲನೆ) LYRICS |SUBHASHITA : SHRUYATAM DHARMA SARVASWAM

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


श्रूयतां धर्मसर्वस्वं श्रुत्वा चैव विचार्यतात्।

आत्मन​: प्रतिकूलानि परेषान्नसमाचरेत्॥

 

ಶ್ರೂಯತಾಂ ಧರ್ಮ ಸರ್ವಸ್ವಂ ಶ್ರುತ್ವಾ ಚೈವ ವಿಚಾರ್ಯತಾತ್।

ಆತ್ಮನ: ಪ್ರತಿಕೂಲಾನಿ ಪರೆಷಾನ್ನಸಮಾಚರೇತ್॥

 

ಧರ್ಮದ ಸಾರಾಂಶವೆಲ್ಲವನ್ನು ಕೇಳಿಸಿಕೊಳ್ಳಬೇಕು. ಕೇಳಿಸಿಕೊಂಡ ಧರ್ಮವನ್ನು ವಿಚಾರಿಸಿ , ವಿಮರ್ಶಿಸಬೇಕು. ಧರ್ಮವು ಪರಿಸ್ಥಿತಿಗೆ ಪ್ರತಿಕೂಲವಾಗಿದ್ದರೆ ಅದನ್ನು ಆಚರಿಸಬಾರದು. ಉದಾಹರಣೆಗೆ: ಅಹಿಂಸಾ ಪರಮೋ ಧರ್ಮ ಎನ್ನುವುದು ವೈಯಕ್ತಿಕ ನೆಲೆಯಲ್ಲಿ ಆಚರಿಸಬಹುದು. ಆದರೆ,ದೇಶದ ಕುಲದ, ಚಾರಿತ್ರ್ಯದ ವಿಷಯ ಬಂದಾಗ ಹೋರಾಡಲೇ ಬೇಕಾಗುತ್ತದೆ.

 

All the essence of religion should be heard. Ask and criticize the religion heard. If religion is unfavorable to the situation then it should not be practiced. For example: Ahimsa paramo dharma can be practiced on a personal basis. But, when it comes to the matter of country, clan and character, we have to fight.

 ............................................................................................

Also See:

SUBHASHITA: ಯಥಾ ಹಿ ಮಲಿನೈ: ವಸ್ತ್ರೈ: |YATHA HI MALINAI HI VASTRAI HI SUBHASHITA

SUBHASHITA: ಗುರವೋ ಬಹವ: ಸಂತಿ (ಎರಡು ವಿಧದ ಗುರುಗಳು)| GURAVO BAHAVAHA SANTI| SUBHASHITA WITH MEANING

Oct 19, 2022

ಸರಳ ಸುಭಾಷಿತ - ಯಾದೃಶೈ: ಸನ್ನಿವಿಶತೆ (3 ವ್ಯಕ್ತಿಗಳ ಪ್ರಭಾವ) | SUBHASHITA YADRASHAI SANNIVISHATE MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


यादृशै: सन्निविशते यादृशाम्श्चोपसेवते |

याद्र्गिच्छेच्छ भवितुं तादृग्भवति पुरुष:||

 

ಯಾದೃಶೈ: ಸನ್ನಿವಿಶತೆ ಯಾದೃಶಾಮ್ಶ್ಚೋಪಸೇವತೆ।

ಯಾದೃಗಿಚ್ಚೇಚ್ಚ್ಯ ಭವಿತು೦ ತಾದೃಗ್ಭವತಿ ಪುರುಷ:

 

ಮನುಷ್ಯನು ಯಾರ ಸಮೀಪದಲ್ಲಿ ಯಾವಾಗಲೂ ಇರುತ್ತಾನೋ ಯಾರ ಸೇವೆಯಲ್ಲಿ ನಿರತನಾಗಿರುತ್ತಾನೆ ಯಾರ ಹಾಗೆ ಆಗಲು ಬಯಸುತ್ತಾನೆ ಅವನ ವರ್ತನೆಗಳು ಅವರಿಂದ ಪ್ರಭಾವಿತವಾಗುತ್ತವೆ

 

A man's behavior is influenced by whom he is always near, whose service he is engaged in, whom he aspires to be like.

                                            ...............................................................

Also See:

SUBHASHITA - ಕೃಪಣೇನ ಸಮೋ ದಾತಾ (ಜಿಪುಣನು ಮಹಾದಾನಿ)| SUBHASHITA-KRUPANENA SAMO DAATA WITH MEANING IN KANNADA

Oct 17, 2022

ಸರಳ ಸುಭಾಷಿತ -ನ ಕಶ್ಚಿದಪಿ ಜಾನಾತಿ LYRICS WITH MEANING | SUBHASHITA - NA KASHCHIDAPI JANATI WITH MEANING

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


कश्चिदपि जानाति किं कस्य श्वॊ भविष्यति |

अत: श्व: करणीयानि कुर्यादद्यैव बुद्धिमान् ||

 

ಕಶ್ಚಿದಪಿ ಜಾನಾತಿ ಕಿಂ ಕಸ್ಯ ಶ್ವೋ ಭವಿಷ್ಯತಿ।

ಅತ: ಶ್ವ: ಕರಣೀಯಾನಿ ಕುರ್ಯಾದದ್ಯೈವ ಬುದ್ಧಿಮಾನ್॥

 

ನಾಳೆ ಯಾರಿಗೆ ಏನು ಆಗುವುದನ್ನುವ ವಿಷಯ ಯಾರಿಗೂ ಗೊತ್ತಿರುವುದಿಲ್ಲ ಆದ್ದರಿಂದ ನಾಳೆ ಮಾಡಬೇಕೆಂದುಕೊಂಡ ರುವಂತಹ ಒಳ್ಳೆಯ ಕಾರ್ಯಗಳನ್ನು ಇಂದೇ ಮಾಡಿ ಮುಗಿಸುವುದು ಬುದ್ಧಿವಂತರ ಲಕ್ಷಣ.

 

No one knows what will happen to whom tomorrow, so it is the characteristic of the wise to finish doing good deeds today that they wanted to do tomorrow.

                                                 ................................................................

Also See:

SUBHASHITA: ಮನಸ್ಯೇಕಂ ವಚಸ್ಯೇಕಂ (ಸಜ್ಜನ-ದುರ್ಜನರ ವ್ಯತ್ಯಾಸ)|MANASYEKAM VACHASYEKAM SUBHASHITA WITH MEANING IN KANNADA

Oct 16, 2022

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ (ಸಾಹಿತ್ಯ /LYRICS)| BAARO KRISHNAYYA |SONG ON LORD KRISHNA

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ

 ರಂಗಯ್ಯ ಬಾರೋ ಕೃಷ್ಣಯ್ಯ|

ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗದೊಡೆಯ ಶೀಲನೆ ||

 

ಅಂದುಗೆ ಪಾದಗಳ ಕಾಲಂದುಗೆ ಕಿರುಗೆಜ್ಜೆ

 ಧಿಮ್ ಧಿಮಿ ಧಿಮಿ ಧಿಮಿ ಧಿಮಿರೆನ್ನುತ।

ಪೊಂಗೊಳಲನೂದುತ ಬಾರಯ್ಯ ಪೊಂಗೊಳಲನೂದುತ ಬಾರಯ್ಯ||1||

 

ಕಂಕಣ ಕರದಲ್ಲಿ ಹೊನ್ನುಂಗುರ ಹೊಳೆಯುತ

 ಕಿಂಕಿಣಿ ಕಿಣಿ ಕಿಣಿ ಕಿಣಿರೆನ್ನುತ|

ಪೊಂಗೊಳಲೂದುತ ಬಾರಯ್ಯ ... ಬಾರೋ ಕೃಷ್ಣಯ್ಯ||2||

 

ವಾಸ ಉಡುಪಿಲಿ ನೆಲೆಯಾದಿ ಕೇಶವನೆ

ದಾಸ ನಿನ್ನ ಪದ ದಾಸ।

ದಾಸ ನಿನ್ನ ಪದ ದಾಸ ನಿನ್ನ ಪದ ದಾಸ (3 ಸಲ)

ಸಲಹಲು ಬಾರಯ್ಯ||3||

..........................................................................................

Also See:

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ AMMA NAANU DEVARANE SONG LYRICS IN KANNADA| LORD KRISHNA SONG


Oct 13, 2022

ಸರಳ ಸುಭಾಷಿತ - ಪಿತಾ ರಕ್ಷತಿ ಕೌಮಾರೆ |SUBHASHITA -PITA RAKSHATI KAUMAARE WITH MEANING

ಹಾಡಲು ಕಲಿಯಿರಿ(CLICK HERE TO LEARN THIS SUBHASHITA) 


पिता रक्षति कौमारे भर्ता रक्षति यौव्वने

पुत्रो रक्षति वार्धक्ये  स्त्री स्वातन्र्यमर्हसि||

 

ಪಿತಾ ರಕ್ಷತಿ ಕೌಮಾರೆ ಭರ್ತಾ ರಕ್ಷತಿ ಯೌವ್ವನೆ।

ಪುತ್ರೋ ರಕ್ಷತಿ ವಾರ್ಧಕ್ಯೆ ಸ್ತ್ರೀ ಸ್ವಾತಂತ್ರ್ಯಮರ್ಹಸಿ॥

 

ಸ್ತ್ರೀಯನ್ನು ಬಾಲ್ಯದಲ್ಲಿ ತಂದೆಯು ಕಾಪಾಡುತ್ತಾನೆ ಯೌವ್ವನದಲ್ಲಿ ಗಂಡನು ಕಾಪಾಡುತ್ತಾನೆ.ಮುಪ್ಪಿನಲ್ಲಿ ಮಗನು ಕಾಪಾಡುತ್ತಾನೆ ಆದ್ದರಿಂದ ಸ್ತ್ರೀ ಗೆ ಯಾವುದೇ ತೊಂದರೆ ಇರುವುದಿಲ್ಲ.

 

A woman is protected by her father in her childhood, her husband protects her in her youth, and her son protects her in her adulthood, so there is no problem for her.

                         ..................................................

Also See:

ಸುಭಾಷಿತ: ಯತ್ರ ನಾರ್ಯಸ್ತು ಪೂಜ್ಯಂತೆ (ಅರ್ಥ ಸಹಿತ) |YATRA NAARYASTU POOJYANTE WITH MEANING

ಸುಭಾಷಿತ: ನ ಗೃಹ೦ ಗೃಹ ಮಿತ್ಯಾಹು: (ಅರ್ಥ ಸಹಿತ) | NA GRAHAM GRAHAMITYAHU: SUBHASHITA WITH MEANING

Oct 12, 2022

ಸರಳ ಸುಭಾಷಿತ - ಆಶಾ ನಾಮ ಮನುಷ್ಯಾಣಾಂ ('ಆಸೆ' ಯೆನ್ನುವ ವಿಚಿತ್ರ ಸರಪಳಿ) LYRICS WITH MEANING | ASHA NAMA SUBHASHITA WITH MEANING

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


आशा नाम मनुष्याणां काचिदाश्चर्य श्रन्खला |

यया बद्धा: प्रधावन्ति मुक्तास्तिष्टति पङ्गुवत् ||

 

ಆಶಾ ನಾಮ ಮನುಷ್ಯಾಣಾಂ ಕಾಚಿದಾಶ್ಚರ್ಯ ಶೃಂಖಲಾ।

ಯಯಾ ಬದ್ಧಾ: ಪ್ರಧಾವಂತಿ ಮುಕ್ತಾಸ್ತಿಷ್ಟತಿ ಪಂಗುವತ್॥

 

ಆಸೆ ಎನ್ನುವ ಸರಪಳಿಯು ತುಂಬಾ ವಿಚಿತ್ರವಾದದ್ದು. ಅದರಲ್ಲಿ ಬಂಧಿತರಾದವರು ಯದ್ವಾತದ್ವಾ ,ನಿಗ್ರಹವಿಲ್ಲದೇ ಓಡುತ್ತಿರುತ್ತಾರೆ. ಆದರೆ ಅದರಿಂದ ಮುಕ್ತರಾದವರು ತನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ,ಕುಂಟನ ಹಾಗೆ ಅಲ್ಲಿಯೇ ನಿಂತಿರುತ್ತಾರೆ

 

The chain of desire is very strange. Those who are trapped in it are running hastily and without restraint. But those who are freed from it keep their mind under control and stand there like a lame person.

                             .............................................................................

Also See:

ಸರಳ ಸುಭಾಷಿತ-ನಿಂದಾ ಯ: ಕುರುತೇ ಸಾಧೋ: (ಸಜ್ಜನರ ನಿಂದನೆಯ ಪರಿಣಾಮ) |NINDA YAH KURUTE SADHOHO LYRICS

SUBHASHITA:ಪಿಪೀಲಿಕಾರ್ಜಿತಂ ಧಾನ್ಯಂ(ಲೋಭತನ ಒಳ್ಳೆಯದಲ್ಲ)|PIPEELIKARJITAM DHANYAM WITH MEANING

Oct 11, 2022

ಸರಳ ಸುಭಾಷಿತ - ಅವ್ಯಾಕರಣಮಧೀತ೦ lyrics with meaning | SUBHASHITA-AVYAKARANA MADHITAM | WHAT SHOULD NOT BE DONE

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


अव्याकरणमधीतम्  भिन्नद्रोण्या तरङ्गिणी तरणम्।

भॆषजमपत्य सहितं   त्रयमिदमकृतम् वरं कृतम् ||

 

ಅವ್ಯಾಕರಣಮಧೀತ೦ ಭಿನ್ನದ್ರೋಣ್ಯಾ ತರಂಗಿಣೀ ತರಣಮ್।

ಭೇಷಜಮಪತ್ಯಸಹಿತ೦ ತ್ರಯಮಿದಮಕೃತ೦ ವರ೦ ಕೃತ೦॥

 

ವ್ಯಾಕರಣವನ್ನು ತಿಳಿಯದೇ ಓದುವುದು, ತೂತು ಬಿದ್ದಿರುವ ದೋಣಿಯಲ್ಲಿ ನದಿಯನ್ನು ದಾಟುವುದು,ಪಥ್ಯವಿಲ್ಲದೇ ಔಷಧ ದಿಂದ ಖಾಯಿಲೆಯನ್ನು ಗುಣಪಡಿಸಲು ಪ್ರಯತ್ನಿಸುವುದು ಮೂರು ಅನುಕೂಲಕ್ಕಿಂತ ಅನಾನುಕೂಲವನ್ನ್ನೆ ಮಾಡುವುವು. ಆದ್ದರಿಂದ ಇವುಗಳನ್ನು ಮಾಡದಿರುವುದೇ ಒಳ್ಳೆಯದು.

 

Reading without knowing grammar, crossing a river in an overturned boat, trying to cure a disease with medicine without diet, these three things do more harm than good. So it is better not to do these.

                                                     .........................................

Also See:

SUBHASHITA: ಅರ್ಥ ನಾಶ೦ ಮನಸ್ತಾಪ೦|ARTHA NASHAM MANASTAAPAM|ಈ ಐದನ್ನು ರಹಸ್ಯವಾಗಿಡಬೇಕು|These five must be kept secret


SUBHASHITA:ಆಕಾಶಾತ್ ಪತಿತಂ ತೋಯಂ (ದೇವನೊಬ್ಬ -ನಾಮ ಹಲವು)|SUBHASHITAS WITH MEANING IN KANNADA | AKASHATH PATITAM TOYAM

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ Lyrics| nammamma sharade uma maheshwari song lyrics in Kannada


Oct 10, 2022

ಸರಳ ಸುಭಾಷಿತ -ಪರೋಪಿ ಹಿತವಾನ್ ಬಂಧು: LYRICS |SUBHASHITA :PAROPI HITAVAN BANDHU WITH MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

परोपि हितवान् बन्धु: बन्धुरप्यहित: पर:

अहितो दॆहजो व्याधि:  हितमारण्यमौषधम्॥

 

ಪರೋಪಿ ಹಿತವಾನ್ ಬಂಧು: ಬಂಧುರಪ್ಯ ಹಿತಪರ:

ಅಹಿತೋ ದೇಹಜೋ ವ್ಯಾಧಿ: ಹಿತಮಾರಣ್ಯಮೌಷಧಮ್॥

 

ನಮ್ಮದೇ ಶರೀರದಲ್ಲಿರುವ ವ್ಯಾಧಿಯು ದೇಹಕ್ಕೆ  ಹಿತವಾಗುವುದಿಲ್ಲ. ಆದರೆ ದೂರದ ಅರಣ್ಯದಲ್ಲಿರುವ ಔಷಧೀಯ ಸಸ್ಯ ದಿಂದ ತಯಾರಿಸಿದ ಔಷಧವು ನಮ್ಮ ದೇಹಕ್ಕೆ ಹಿತವಾಗುತ್ತದೆ .ಹಾಗೆಯೇ  ಒಂದೇ ಕುಲದಲ್ಲಿ ಹುಟ್ಟಿದವರಾದರೂ ನಮ್ಮ ಕಷ್ಟಸುಖಗಳಲ್ಲಿ ಜೊತೆಯಾಗದವರು /ನಮಗೆ ಅಹಿತವನ್ನು ಬಯಸುವವರು ಬಂಧುಗಳೆನಿಸಿಕೊಳ್ಳುವುದಿಲ್ಲ.  ಆದರೆ ಅಪರಿಚಿತರಾದರೂ, ಒಂದೇ ಕುಲದಲ್ಲಿ ಜನಿಸದೇ ಇದ್ದರೂ, ನಮ್ಮ ಕಷ್ಟ-ಸುಖಕ್ಕೆ ಜೊತೆಯಾದವರು/ನಮಗೆ ಹಿತವನ್ನು ಬಯಸಿವವರು ನಿಜವಾದ ಬಂಧುಗಳೆನಿಸಿಕೊಳ್ಳುತ್ತಾರೆ.

 

Disease in our own body is not good for the body. But medicine prepared from a medicinal plant in a distant forest is good for our body.

 Even those who are born and do not accompany us in our hardships and pleasures / those who wish us harm do not consider us relatives.

But even if they are strangers, not born in the same clan, those who accompany us in our trials and tribulations/ wish us well are considered true relatives.

                                   ............................................................

Also See:

ಸರಳ ಸುಭಾಷಿತ -ಅಲಂಕಾರ ಪ್ರಿಯೋ ವಿಷ್ಣು LYRICS WITH MEANING | SUBHASHITA-ALANKARA PRIYO VISHNU

SUBHASHITA: ಪ್ರತ್ಯಹಂ ಪ್ರತ್ಯವೇಕ್ಷೇತ(ಆತ್ಮಾವಲೋಕನದ ಪ್ರಾಮುಖ್ಯತೆ) | SUBHASHITA WITH MEANING- PRATYAHAM PRATYAVEKSHEHA-introspection


Oct 8, 2022

ಬಂಗಾರ ನೀರ ಕಡಲಾಚೆಗೀಚೆಗಿದೆ (ಭಾವಗೀತೆ) LYRICS | BANGARA NEERA KADALACHE SONG WITH LYRICS | DA.RA BENDRE| C. ASHWATH SONGS

 

ಹಾಡಲು ಕಲಿಯಿರಿ(CLICK HERE TO LEARN THIS SONG)

ರಚನೆ: ದ. ರಾ ಬೇಂದ್ರೆ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ)

 

ಹೊಸ ದ್ವೀಪಗಳಿಗೆ ಹೊರಟಾನಾ ಬನ್ನೀ  ಅಂದದೋ ಅಂದದಾ

ಹೊಸ ದ್ವೀಪಗಳಿಗೆ ಹೊರಟಾನಾ ಬನ್ನೀ  ಅಂದದೋ ಅಂದದಾ

 

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರ

ಮಿಂಚು ಬಳಗ ತೆರೆ ತೆರೆಗಳಾಗಿ ಅಲೆಯುವುದು ಪುಟ್ಟ ಪೂರ

ಅದು ನಮ್ಮ ಊರು ಇದು ನಿಮ್ಮ ಊರು ತಮ್ ತಮ್ಮಊರು ಧೀರ

ಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ||

 

ಕರೆ ಬಂದಿತಣ್ಣ ತೆರೆ ಬಂದಿತಣ್ಣ ನೆರೆ ಬಂದಿತಣ್ಣ ಬಳಿಗೆ

ಹರಿತದಾ ಭಾವ ಬೆರಿತದಾ ಜೀವ ಅದರೊಳಗೆ ಒಳಗೆ ಒಳಗೆ

ಇದೆ ಸಮಯವಣ್ಣ ಇದೆ ಸಮಯ ತಮ್ಮ  ನಮ್ಮ್ ನಿಮ್ಮ ಆತ್ಮಗಳಿಗೆ

ಅಂಬಿಗನು ಬಂದ ನಂಬಿಗನು ಬಂದ ಬಂದದಾ ದಿವ್ಯ ಘಳಿಗೆ||1||

 

ಇದು ಉಪ್ಪು ನೀರ ಕಡಲಲ್ಲೊ ನಮ್ಮ ಒಡಲಲ್ಲು ಇದರ ನೆಲೆಯು

ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದದಾ ಇದರ ಬೆಲೆಯು

ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವುದು ಇದರ ಸೆಲೆಯು

ಕಣ್ಣರಳಿದಾಗ ಕಣ್ಹೊರಳಿದಾಗ ಹೊಳೆಯುವುದು ಇದರ ಕಳೆಯು||2||

 

ಬಂದವರ ಬಳಿಗೆ ಬಂದದಾ ಮತ್ತು ನಿಂದವರಾ ನೆರೆಗೂ

ಬಂದದೋ ಬಂದದಾ

ನವ ಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನಾ ಬನ್ನೀ

ಅಂದದೋ ಅಂದದಾ

ನವ ಮನುವು ಬಂದ ಹೊಸ ದ್ವೀಪಗಳಿಗೆ ಹೊರಟಾನಾ ಬನ್ನೀ

ಅಂದದೋ ಅಂದದಾ ||3||

               .............................................................................

Also See:

ಕಾಣದ ಕಡಲಿಗೆ ಹಂಬಲಿಸಿದೆ ಮನ Lyrics| kanada kadalige song lyrics in Kannada| C Ashwath songs lyrics


Oct 7, 2022

ಸರಳ ಸುಭಾಷಿತ -ಬಾಲ: ಪುತ್ರೋ ನೀತಿವಾಕ್ಯೋಪಚಾರೈ: lyrics | subhashita on importance of value education for kids

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


बाल: पुत्रॊ नीतिवाक्यॊपचारै:  कार्यॆ कार्यॆ यत्नत शिक्ष्णीय:

 लॆखा मग्ना याम पात्रॆ विचित्रा नाऽसा नाशं पाककालॆऽपि याति॥

 

ಬಾಲ: ಪುತ್ರೋ ನೀತಿವಾಕ್ಯೋಪಚಾರೈ:

ಕಾರ್ಯೇ ಕಾರ್ಯೇ ಯತ್ನತ ಶಿಕ್ಷಣೀಯ:

ಲೇಖಾ ಮಗ್ನಾ ಯಾಮ ಪಾತ್ರೇ ವಿಚಿತ್ರಾ

ನಾ ಸಾ ನಾಶ೦ ಪಾಕಕಾಲೇಪಿ ಯಾತಿ||

 

ಹೇಗೆ ಪಾತ್ರೆಯನ್ನು ತಯಾರಿಸುವಾಗ ಅದರ ಮೇಲೆ ಬರೆದಿರುವ ಚಿತ್ರಗಳು ,ಅಕ್ಷರಗಳು ಪಾತ್ರೆಯನ್ನು ಉಪಯೋಗಿಸಿ ಅಡುಗೆ ಮಾಡಿದಾಗಲೂ ಅಳಿಸಿ ಹೋಗುವುದಿಲ್ಲವೋ ಹಾಗೆಯೇ ಚಿಕ್ಕಮಕ್ಕಳಿಗೆ ಕಲಿಸಿದ ನೀತಿ ಪಾಠಗಳು ,ಸಂಸ್ಕಾರವು ದೊಡ್ಡವರಾದಮೇಲೂ ಅಳಿಸಿ ಹೋಗುವುದಿಲ್ಲ


Just as the pictures and letters written on the utensil while making it do not get erased even when the utensil is used for cooking, similarly the moral lessons taught to the little children, the rituals do not get erased even when they grow up.

................................................................................

Also See:

ಸರಳ ಸುಭಾಷಿತ-ಕಾಕ ಆಹ್ವಯತೇ ಕಾಕಾನ್ LYRICS (ಕಾಗೆಯಿಂದ ಕಲಿಯುವ ಗುಣ)|SUBHASHITA KAAKA AAHVAYATE KAAKAAN


ಸರಳ ಸುಭಾಷಿತ-ಪ್ರಥಮ ವಯಸಿ ದತ್ತಂ (ಉಪಕಾರ ಸ್ಮರಣೆ)|SUBHASHITA PRATHAMA VAYASI DATTAM LYRICS

Oct 6, 2022

ಸರಳ ಸುಭಾಷಿತ -ಅಲಂಕಾರ ಪ್ರಿಯೋ ವಿಷ್ಣು LYRICS WITH MEANING | SUBHASHITA-ALANKARA PRIYO VISHNU

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


अलङ्कार प्रियॊ विष्णु: अभिषॆक प्रिय: शिव: ।

नमस्कार्प्रियॊ भानु: ब्राह्मणॊ भोजनप्रिय:॥

 

ಅಲಂಕಾರ ಪ್ರಿಯೋ ವಿಷ್ಣು: ಅಭಿಷೇಕ ಪ್ರಿಯ: ಶಿವ:

ನಮಸ್ಕಾರಪ್ರಿಯೋ ಭಾನು: ಬ್ರಾಹ್ಮಣೋ ಭೋಜನಪ್ರಿಯ:

 

ವಿಷ್ಣುವಿಗೆ ಬೇರೆ ಬೇರೆ ಅಲಂಕಾರಗಳನ್ನು ಮಾಡಿ ಪೂಜಿಸಿ ಒಲಿಸಿಕೊಳ್ಳಬಹುದು.   ಭಕ್ತಿಯಿಂದ ನೀರನ್ನು ಅಭಿಷೇಕ ಮಾಡಿದರೂ ಈಶ್ವರನು ಒಲಿಯುತ್ತಾನೆ. ಜಗತ್ತಿಗೇ ಬೆಳಕನ್ನು ಕೊಡುವ ಸೂರ್ಯನು ದ್ವಾದಶ ನಾಮಗಳಿಂದ ನಮಸ್ಕಾರ ಮಾಡಿದರೆ ಸಾಕು ಒಲಿದು ಆರೋಗ್ಯ ಭಾಗ್ಯವನ್ನು ಕರುಣಿಸುತ್ತಾನೆ. ವೇದ ಶಾಸ್ತ್ರಗಳಲ್ಲಿ ಪಾರಂಗತರಾದ ,ವೇದಪುರುಷರಾದ ಬ್ರಾಹ್ಮಣರಿಗೆ ರುಚಿಕರವಾದ ಭೋಜನವನ್ನು ಉಣಿಸಿದರೆ ಅಷ್ಟಕ್ಕೆ ತೃಪ್ತರಾಗಿ ನಮ್ಮನ್ನು ಹರಸುತ್ತಾರೆ.

                   ..........................................................

Also See:

ಸರಳ ಸುಭಾಷಿತ -ಅಪೂರ್ವ ಕೋಪಿ ಕೋಶೋಯ೦ lyrics(ವಿದ್ಯಾನಿಧಿಯ ವೈಶಿಷ್ಟ್ಯತೆ)| SUBHASHITA-SPECIALITY OF EDUACATION WEALTH

SUBHASHITA: ರತ್ನಾಕರ ಧೌತಪದಾಂ(ವಂದೇ ಭಾರತ ಮಾತರಂ) | SUBHASHITA- RATNAKAR DHAUTAPADAM WITH MEANING


Oct 2, 2022

ಸರಳ ಸುಭಾಷಿತ -ಅಪೂರ್ವ ಕೋಪಿ ಕೋಶೋಯ೦ lyrics(ವಿದ್ಯಾನಿಧಿಯ ವೈಶಿಷ್ಟ್ಯತೆ)| SUBHASHITA-SPECIALITY OF EDUACATION WEALTH

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


अपूर्व कोऽपि कोशोयं विद्यते तव भारती |

व्ययतो वृद्दीमायाति  क्षयमायाति संचयात् ||

 

ಅಪೂರ್ವ ಕೋಪಿ ಕೋಶೋಯ೦ ವಿದ್ಯತೇ ತವೆ ಭಾರತಿ।

ವ್ಯಯತೋ ವೃದ್ದಿಮಾಯಾತಿ ಕ್ಷಯಮಾಯಾತಿ ಸಂಚಯಾತ್॥

 

ಎಲ್ಲಾ ಸಂಪತ್ತಿನ ಭಂಡಾರ ಗಳಿಗಿಂತಲೂ ವಿದ್ಯೆಯೆಂಬ ಸಂಪತ್ತಿನ ಭಂಡಾರವು ಅಪೂರ್ವವಾದದ್ದು ವಿಶಿಷ್ಟವಾದದ್ದು. ಉಳಿದ ಸಂಪತ್ತುಗಳನ್ನು ಕೂಡಿಟ್ಟರೆ ಮಾತ್ರ ವೃದ್ಧಿಸುತ್ತವೆ ಉಪಯೋಗಿಸಿದರೆ ಕ್ಷೀಣಿಸುತ್ತವೆ. ಆದರೆ ವಿದ್ಯೆಯೆಂಬ ಸಂಪತ್ತು ಕೂಡಿಟ್ಟರೆ  ಕ್ಷಯಿಸುತ್ತದೆ ಹಾಗೂ ಉಪಯೋಗಿಸಿದರೆ ವೃದ್ಧಿಸುತ್ತದೆ.

 

Among all the treasures of wealth, the treasure of knowledge is unique. The rest of the wealth increases only if it is accumulated, if it is used it decreases. But the wealth of knowledge diminishes if accumulated and increases if used.

                     ...............................................................

Also See:

SUBHASHITA:ಕಾಮಕ್ರೋಧೌ ತಥಾ ಲೋಭ೦(ವಿದ್ಯಾರ್ಥಿಯು ಏನನ್ನು ತ್ಯಜಿಸಬೇಕು?) | KAMAKRODHAU (student life)

SUBHASHITA: ರೂಪ ಯೌವನ ಸಂಪನ್ನಾ: LYRICS| SUBHASHITA ROOPA YAVVAN SAMPANNA WITH MEANING

ಸರಸ್ವತಿ ದೇವಿಯ ಶ್ಲೋಕಗಳು(LORD SARASWATI SHLOKA LYRICS IN KANNADA)

ಎಂಥ ಅಂದ ಎಂಥ ಚೆಂದ ಶಾರದಮ್ಮ|ENTHA ANDHA ENTHA CHENDA SHARADAMMA SONG LYRICS

SUBHASHITA:ಆಚಾರ್ಯಾತ್ ಪಾದಮಾದತ್ತೆ(ಜ್ಞಾನಾರ್ಜನೆಯ ಮಾರ್ಗಗಳು)| ACHARYAT PAADAMAADATTE WITH MEANING