Sep 30, 2022

ಒಲವೆ ಜೀವನ ಸಾಕ್ಷಾತ್ಕಾರ lyrics | olave jeevana sakshatkara | kannada film song| dr. rajkumar

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ

ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ದು೦ಬಿಯ ಹಾಡಿನ ಝೇ೦ಕಾರದಲ್ಲು
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ತು೦ಬಿದೆ ಒಲವಿನ ಸಾಕ್ಷಾತ್ಕಾರ||1||

ವಸ೦ತ ಕೋಗಿಲೆ ಪಂಚಮನೋಂಚರ
ಗಾ೦ಧಾರ ಭಾಷೆಯ ಹಕ್ಕಿಗಳಿ೦ಚರ
ಈ ಮಲೆನಾಡಿನ ಭೂರ
ಮೆ ಶೃ೦ಗಾರ
ಚೆಲುವಿನ ಒಲವಿನ ಸಾಕ್ಷಾತ್ಕಾರ||2||

ಒಲವಿನ ಪೂಜೆಗೆ ಒಲವೆ ಮ೦ದಾರ
ಒಲವೆ ಬದುಕಿನ ಬ೦ಗಾರ
ಒಲವಿನ ನೆನಪೆ ಹೃದಯಕೆ ಮಧುರ
ಒಲವೆ ದೈವದ ಸಾಕ್ಷಾತ್ಕಾರ||3||

      ................

Also See:

ನಗುತ ನಗುತ ಬಾಳು ನೀನು ನೂರು ವರುಷ lyrics in kannada| naguta naguta baalu neenu song lyrics

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು|HUTTIDARE KANNADA NAADAL HUTTABEKU SONG LYRICS IN KANNADA

ಸರಳ ಸುಭಾಷಿತ-ಕಾಕ ಆಹ್ವಯತೇ ಕಾಕಾನ್ LYRICS (ಕಾಗೆಯಿಂದ ಕಲಿಯುವ ಗುಣ)|SUBHASHITA KAAKA AAHVAYATE KAAKAAN

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

काक आह्वयते काकान् याचको तु याचकान्|

काक याचकयोर्मध्ये वरं काको याचकः ||

 

ಕಾಕ ಆಹ್ವಯತೇ ಕಾಕಾನ್ ಯಾಚಕೋ ತು ಯಾಚಕಾನ್।

ಕಾಕ ಯಾಚಕಯೊರ್ಮಧ್ಯೆ ವರ೦ ಕಾಕೋ ಯಾಚಕ:

 

ಕಾಗೆ ತನಗೆ ಆಹಾರ ಸಿಕ್ಕಿದಾಗ ಬಂಧುಬಾಂಧವರನ್ನು ಕರೆಯುತ್ತದೆ ಆದರೆ ಭಿಕ್ಷುಕನು ತನಗೆ ಆಹಾರ ದೊರೆತಾಗ ಇನ್ನೊಬ್ಬ ಭಿಕ್ಷುಕನಿಗೆ ಹಂಚಲು ಮನಸ್ಸು ಮಾಡುವುದಿಲ್ಲ. ಹಂಚಿ ತಿನ್ನುವ ಗುಣದಲ್ಲಿ ಮನುಷ್ಯನಿಗಿಂತ ಕಾಗೆಯೇ ಶ್ರೇಷ್ಠ ಪ್ರಾಣಿಗಳಿಂದಲೂ ನಾವು ಕಲಿಯುವುದು ಬಹಳಷ್ಟು ಇರುತ್ತದೆ.

 

A crow calls its relatives when it gets food but a beggar does not share it with another beggar when he gets food. We have a lot to learn from even animals/birds that are superior to humans in their behaviour.

                                            ..........................................................

Also See:

ಸರಳ ಸುಭಾಷಿತ-ಪ್ರಥಮ ವಯಸಿ ದತ್ತಂ (ಉಪಕಾರ ಸ್ಮರಣೆ)|SUBHASHITA PRATHAMA VAYASI DATTAM LYRICS

ನಿದ್ರೆ ಬಾರದೋ ಶ್ರೀ ರಾಘವೇಂದ್ರ (ಭಕ್ತಿಗೀತೆ) ಸಾಹಿತ್ಯ | NIDRE BAARADO SHRI RAGHAVENDRA(DEVOTIONAL SONG)

Sep 29, 2022

ಸರಳ ಸುಭಾಷಿತ- ಅರ್ಥಾ ಗೃಹೇ ನಿವರ್ತಂತೇ LYRICS WITH MEANING(ಯಾರು ಬರುವರು ನಿನ್ನ ಹಿಂದೆ?) |SUBHASHITA ARTHA GRAHE NIVARTANTE

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

अर्था गृहे निवर्तन्ते स्मशाने मित्र बान्धवाः |

सुकृतम् दुष्कृतम् चैव कर्तारमनुगच्छति ||

 

ಅರ್ಥಾ ಗೃಹೇ ನಿವರ್ತಂತೇ ಸ್ಮಶಾನೇ ಮಿತ್ರ ಬಾಂಧವಾ: |

ಸುಕೃತಂ ದುಷ್ಕೃತಂ ಚೈವ ಕರ್ತಾರಮನುಗಚ್ಚತಿ||

 

ಮನುಷ್ಯನಿಗೆ ಸಾವು ಬಂದಾಗ ಅವನು ಕೂಡಿಟ್ಟ ಸಂಪತ್ತು ಅವನ ಮನೆಯಲ್ಲಿಯೇ ಇರುತ್ತದೆ. ಬಂಧು-ಬಾಂಧವರು ಸ್ಮಶಾನದವರೆಗೆ ಬರಬಹುದು. ಆದರೆ ಅವನು ಮಾಡಿದ ಪಾಪ-ಪುಣ್ಯಗಳು ಮಾತ್ರ ಅವನ ಜೊತೆಗೆ ಬರುತ್ತವೆ. ಮುಂದಿನ ಜನ್ಮದಲ್ಲಿ ಇರುತ್ತವೆ. ಆದ್ದರಿಂದ ಯಾವಾಗಲೂ ಪುಣ್ಯ ಕೆಲಸಗಳನ್ನೇ ಮಾಡಬೇಕು.

 

When a man dies, his accumulated wealth remains in his house. Relatives can come till the crematorium. But only the sins and merits he has done come with him. will be in the next birth. So always do good deeds.


ALSO SEE:

ಸರಳ ಸುಭಾಷಿತ-ಪರದ್ರವ್ಯೇಷ್ವಭಿಧ್ಯಾನ೦(ತ್ರಿವಿಧ ಮಾನಸ ಪಾಪಗಳು)| SUBHASHITA: PRADRAVYESH WABHIDHYANAM LYRICS

SUBHASHITA: ಅಸ್ಥಿರಂ ಜೀವಿತಂ ಲೋಕೇ (ಯಾವುದು ಶಾಶ್ವತ?) |ASTHIRAM JEEVITAM LOKE SHUBHASHITA IN KANNADA

Sep 28, 2022

ಆಕಾಶದಾಗೆ ಯಾರೊ ಮಾಯಗಾರನು(ರಾಮಾಚಾರಿ ) lyrics | akashadaage yaaro maayagaaranu song lyrics

 

ಹಾಡಲು ಕಲಿಯಿರಿ(CLICK HERE TO LEARN THIS SONG)

ಆಕಾಶದಾಗೆ ಯಾರೊ ಮಾಯಗಾರನು
ಚಿತ್ತಾರ ಮಾಡಿ ಹೋಗೊನೇ..ಏಏಏ
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲನಾಡ ಮಾಡಿ ಹೋಗೋನೇ...

ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ..ಆಆಆ..

ಆಕಾಶದಾಗೆ ಯಾರೊ ಮಾಯಗಾರನು
ಚಿತ್ತಾರ ಮಾಡಿ ಹೊಗೋನೇ
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲೆನಾಡ ಮಾಡಿ ಹೋಗೋನೇ..ಏಏಏ

ಸುದ್ದಿ ಇಲ್ಲದೇ ಮೋಡ ಶುದ್ಧಿಯಾಗೋದು
ಸದ್ದೆ ಇಲ್ಲದೇ ಗಂಧ ಗಾಳಿಯಾಗೋದು
ತಂಟೇನೆ ಮಾಡದೆ ಹೊತ್ತುಟ್ಟಿ ಹೋಗೊದು
ಏನೇನು ಮಾಡದೆ ನಾವ್ಯಾಕೆ ಬಾಳೋದು

{ಗಂಡು}
ಹಾರೊ ಹಕ್ಕಿನ ತಂದು ಕೂಡಿಹಾಕೊದು
ಕಟ್ಟೊದೇ ನನ್ನ ಸುಟ್ಟು ತಿಂದು ಹಾಕೊದು
ನರಮನ್‍ಷ್ಯ ಕಲಿಯಲ್ಲ ಒಳ್ಳೇದು ಉಳಿಸೊಲ್ಲ
ಅವನಡಿಯೋ ದಾರಿಲಿ ಗರಿಕೆನು ಬೆಳೆಯೊಲ್ಲ

{ಹೆಣ್ಣು}
ಚಿಲಿಪಿಲಿಗಳ ಸರಿಗಮ ಕಿವಿಯೊಳಗೆ..ಏಏಏ
{ಗಂಡು}
ನೀರಲೆಗಳ ತಕಧಿಮಿ ಎದೆಯೊಳಗೆ..ಏಏಏ
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ..ಆಆಆಆಆ

ಆಕಾಶದಾಗೆ ಯಾರೊ ಮಾಯಗಾರನು
ಚಿತ್ತಾರ ಮಾಡಿ ಹೊಗೋನೇ..ಏಏಏ
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲೆನಾಡ ಮಾಡಿ ಹೋಗೋನೇ...ಏಏಏ

ಕಾಡು ಸುತ್ತುವಾ ಆಸೆ ರಾಣಿಗೇಕಮ್ಮ
ಕಾಲು ಇಟ್ಟರೆ ಸುತ್ತ ಕಲ್ಲು ಮುಳ್ಳಮ್ಮಾ
ಏಳೋದು ಬೀಳೋದು ಬಡವರ ಪಾಡಮ್ಮಾ
ನೀವ್ಯಾಕೆ ಹಾಡಿರಿ ಈ ಹಳ್ಳಿ ಹಾಡಮ್ಮಾ

{ಹೆಣ್ಣು}
ಇಲ್ಲಿ ಬೀಸುವಾ ಗಾಳಿ ಊರಲ್ಯಾಕಿಲ್ಲ
ಇಲ್ಲಿ ಸಿಕ್ಕುವ ಪಾಠ ಶಾಲೆಲ್ಯಾಕಿಲ್ಲ
ಬಂಗಾರ ಸಿಂಗಾರ ಸಾಕಾಗಿ ಹೋಯಿತು
ಅರಮನೆ ಆನಂದ ಬೇಸತ್ತು ಹೋಯಿತು

{ಗಂಡು}
ಕೆಳಗಿಳಿಸುವ ಮನಸಿನ ಭಾರಗಳಾ..ಆಆಆ
ಜಿಗಿಜಿಗಿಯುವ ಚಿಂತೆಯ ದೂರ್ತಗಳ..ಆಆಆ
{ಜೊತೆ}
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ..ಆ..
{ಹೆಣ್ಣು}
ಆಕಾಶದಾಗೆ ಯಾರೊ ಮಾಯಗಾರನು
ಚಿತ್ತಾರ ಮಾಡಿ ಹೊಗೋನೇ
{ಗಂಡು}
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲೆನಾಡ ಮಾಡಿ ಹೋಗೋನೇ...ಏಏಏಏ
{ಜೊತೆ}
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ..ಆಆ

      ............

ALSO SEE:

ಬಾಳುವಂತ ಹೂವೆ ಬಾಡುವ ಆಸೆ ಏಕೆ(AKASMIKA MOVIE SONG)| Dr. Rajkumar song lyrics |Baaluvantha hoove

KANNADA FILM SONGS LYRICS

ಸರಳ ಸುಭಾಷಿತ-ಪ್ರಥಮ ವಯಸಿ ದತ್ತಂ (ಉಪಕಾರ ಸ್ಮರಣೆ)|SUBHASHITA PRATHAMA VAYASI DATTAM LYRICS

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

प्रथम वयसि दत्तं तोयमल्पं स्मरन्तः

शिरसि निहितभारा नारिकेला नराणाम् |

सलिलममृतकल्पम् दध्य्राजीवनान्तं

नहि कर्तमुपकारम् साधवो विस्मरन्ति||

 

ಪ್ರಥಮ ವಯಸಿ ದತ್ತಂ ತೋಯಮಲ್ಪಂ ಸ್ಮರಂತ:

 ಶಿರಸಿ ನಿಹಿತ ಭಾರಾ ನಾರಿಕೇಲ ನರಾಣಾಂ

ಸಲಿಲಮಮೃತಕಲ್ಪ೦ ದಧ್ಯುರಾ ಜೀವನಾಂತ0

ನಹಿ ಕೃತಮುಪಕಾರ೦ ಸಾಧವೋ ವಿಸ್ಮರಂತಿ||

 

ಹೇಗೆ ತನ್ನ ಬೆಳೆಯುವ ಪ್ರಕ್ರಿಯೆಯ ಮೊದಲ  ವರ್ಷದಲ್ಲಿ ಮನುಷ್ಯನು ಹಾಕಿದ ಸ್ವಲ್ಪ ನೀರನ್ನು ಸ್ಮರಿಸುತ್ತಾ ತೆಂಗಿನ ಮರವು ತನ್ನ ತಲೆಯಲ್ಲಿರುವ ಭಾರವಾದ ತೆಂಗಿನಕಾಯಿಯ ಒಳಗೆ ಅಮೃತಕ್ಕೆ ಸಮಾನವಾದ ನೀರನ್ನು ಇಟ್ಟು ಅವನಿಗೆ ಪ್ರತ್ಯುಪಕಾರವನ್ನು ತನ್ನ ಜೀವನ ಪರ್ಯಂತ ಮಾಡುವುದೋ ಹಾಗೆಯೇ ಸಜ್ಜನರು ಕೂಡ ಬೇರೆಯವರು ತಮಗೆ ಮಾಡಿದ ಚಿಕ್ಕ ಉಪಕಾರವನ್ನೂ ಎಂದಿಗೂ ಮರೆಯುವುದಿಲ್ಲ

 

Just as a coconut tree remembers the little water a man puts in during the first year of its growth process and returns water equivalent to nectar inside the heavy coconut on its head and repays him for the rest of its life, so also gentlemen never forget a small favor done to them by others.

Related subhashitas:

SUBHASHITA: ಕಾರ್ಯಾರ್ಥೀ ಭಜತೇ ಲೋಕಂ|KARYARTHI BHAJATE LOKAM MEANING IN KANNADA

SUBHASHITA: ಮನಸ್ಯೇಕಂ ವಚಸ್ಯೇಕಂ (ಸಜ್ಜನ-ದುರ್ಜನರ ವ್ಯತ್ಯಾಸ)|MANASYEKAM VACHASYEKAM SUBHASHITA WITH MEANING IN KANNADA


Sep 27, 2022

ಸರಳ ಸುಭಾಷಿತ-ದರ್ಶನೇ ಸ್ಪರ್ಶನೇ ವಾಪಿ (ಸ್ನೇಹ / ಪ್ರೀತಿ ) | SUBHASHITA ON FRIENDSHIP LYRICS AND MEANING

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


दर्शने स्पर्शने वापि श्रवणे भाषणॊपि वा |

यत्र द्रवत्यन्तरङ्गं स्नेह इति कथ्यते ||

 

ದರ್ಶನೇ ಸ್ಪರ್ಶನೇ ವಾಪಿ ಶ್ರವಣೇ ಭಾಷಣೋಪಿ ವಾ।

ಯತ್ರ ದ್ರವತ್ಯಂತರಂಗಮ್ ಸ್ನೇಹ ಇತಿ ಕಥ್ಯತೆ॥

 

ಯಾವ ವ್ಯಕ್ತಿಯ ಭೇಟಿಗೆ/ ದರ್ಶನಕ್ಕೆ, ಸ್ಪರ್ಶಕ್ಕೆ, ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಹಾಗೂ ಅವರೊಂದಿಗೆ ಸಮಯವನ್ನು ಕಳೆಯಲು ನಮ್ಮ ಮನಸ್ಸು ಹಾತೊರೆಯುತ್ತದೋ/ ಆನಂದಿಸುತ್ತದೋ ಅಂತಹ ಭಾವನೆಯನ್ನು ಸ್ನೇಹ ಅಥವಾ ಪ್ರೀತಿ ಎಂದು ಕರೆಯುತ್ತಾರೆ.

 

The feeling that our mind yearns/enjoys to meet/see, touch, hear their words and spend time with a person is called friendship or love.


Related subhashitas:

SUBHASHITA: ದುರ್ಜನೇನ ಸಮ೦ ಸಖ್ಯ೦(ದುರ್ಜನರ ಸಂಗ ಒಳ್ಳೆಯದಲ್ಲ) |DURJANENA SAMAM SAKHYAM SUBHASHITA IN KANNADA

SUBHASHITA - ಪಾಪಾನ್ನಿವಾರಯತಿ ಯೋಜಯತೇ ಹಿತಾಯ (ಸನ್ಮಿತ್ರರ ಲಕ್ಷಣ) WITH MEANING IN KANNADA

Sep 24, 2022

ನಿದ್ರೆ ಬಾರದೋ ಶ್ರೀ ರಾಘವೇಂದ್ರ (ಭಕ್ತಿಗೀತೆ) ಸಾಹಿತ್ಯ | NIDRE BAARADO SHRI RAGHAVENDRA(DEVOTIONAL SONG)

 ಹಾಡಲು ಕಲಿಯಿರಿ(CLICK HERE TO LEARN THIS SONG)


ನಿದ್ರೆ ಬಾರದೋ ಶ್ರೀ ರಾಘವೇಂದ್ರ ದ್ವೇಷಾಸೂಯೆಗಳ ಕಾಡಿನಲ್ಲಿ|

 

ಚಿಗುರಿಲ್ಲದ ಮರ ಜಲವಿಲ್ಲದ ಕೆರೆ

ಕೂಗದ ಕೋಗಿಲೆ ಬೆಳೆಯದ ಭೂಮಿಯ ಕಂಡು||1||

 

ಮಾತು ಬೇಡ ಮೌನ ಬೇಕು । ಕತ್ತಲು ಬೇಡ ಬೆಳಕು ಬೇಕು

ದುರಾಸೆ ಬೇಡ ಆಸೆ ಬೇಕು। ವ್ಯಸನ ಬೇಡ ವಸನ ಬೇಕು

ದ್ವೇಷ ಬೇಡ ಧರ್ಮ ಬೇಕು||2||

 

ಪಾಪ ಬೇಡ ಪುಣ್ಯ ಬೇಕು।ಗದ್ದಲ ಬೇಡ ಗಾನ ಬೇಕು

ನಾನು ಬೇಡ ನೀನು ಬೇಕು।ರಾಜ ಬೇಡ ಗುರುರಾಜ ಬೇಕು

ಎಂದೆಂದೂ ನೀ ಬೇಕು ಪದ್ಮನಾಭ ದಾಸಗೆ||3||

Other songs of R.K Padmanaabha:

Manasa Vandipe ಮನಸಾ ವಂದಿಪೆ ಗಣನಾಯಕ| LORD GANESHA SONG LYRICS

bandhisenna nee : ಬಂಧಿಸೆನ್ನ ನೀ ನಾದ ಕೋಟೆಯಲ್ಲಿ SONG ON LORD SARASWATI



Sep 23, 2022

ನಗುತ ನಗುತ ಬಾಳು ನೀನು ನೂರು ವರುಷ lyrics in kannada| naguta naguta baalu neenu song lyrics

 ಹಾಡಲು ಕಲಿಯಿರಿ(CLICK HERE TO LEARN THIS SONG)


ನಗುತ ನಗುತ ಬಾಳು ನೀನು ನೂರು ವರುಷ

ಎಂದೂ ಹೀಗೆ ಇರಲಿ ಇರಲಿ ಹರುಷ ಹರುಷ|

ಬಾಳಿನ ದೀಪ ನಿನ್ನ ನಗೂ

ದೇವರ ರೂಪ ನೀನೆ ಮಗು

ನಗುತ ನಗುತ ಬಾಳು ನೀನು ನೂರು ವರುಷ

ಎಂದೂ ಹೀಗೆ ಇರಲಿ ಇರಲಿ ಹರುಷ ಹರುಷ|

ಉಲ್ಲಾಸದ ಶುಭದಿನಕೆ ಸಂತೋಷವೇ ಉಡುಗೊರೆಯು||

 

ಹೂವು ನಕ್ಕಾಗ ತಾನೆ ಅಂದ ಇರುವುದು ದುಂಬಿ ಬರುವುದು

ಚಂದ್ರ ನಕ್ಕಾಗ ತಾನೆ ಬೆಳಕು ಬರುವುದು ಕಡಲು ಕುಣಿವುದು

ಸೂರ್ಯನಾಡೊ ಜಾರೊ ಆಟ ಬಾನು ನಗಲೆಂದೆ

 ಬೀಸೊ ಗಾಳಿ ತೂಗೊ ಪೈರು ಭೂಮಿ ನಗಲೆಂದೆ

ದೇವರು ತಂದ ಸೃಷ್ಟಿಯ ಅಂದ ಎಲ್ಲರೂ ನಗಲೆಂದೇ||1||

 

ಆಕಾಶದಾಚೆ ಎಲ್ಲೋ ದೇವರಿಲ್ಲವೋ ಹುಡುಕಬೇಡವೋ

ಮಾಯಗಾರ ತಾನು ಗಿರಿಯಲಿಲ್ಲವೋ ಗುಡಿಯಲಿಲ್ಲವೋ

ಪ್ರೀತಿಯಲ್ಲಿ ಸ್ನೇಹದಲ್ಲಿ ಇರುವನು ಒಂದಾಗಿ

ತಂಪಿನಲ್ಲೂ ಕಂಪಿನಲ್ಲೂ ಬರುವನು ಹಿತವಾಗಿ

ಸಂತಸದಲ್ಲಿ ಸಂಭ್ರಮದಲ್ಲಿ ಮಕ್ಕಳ ನಗುವಾಗಿ||2||

Also See:

ಬಾಳುವಂತ ಹೂವೆ ಬಾಡುವ ಆಸೆ ಏಕೆ(AKASMIKA MOVIE SONG)| Dr. Rajkumar song lyrics |Baaluvantha hoove

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು|HUTTIDARE KANNADA NAADAL HUTTABEKU SONG LYRICS IN KANNADA

ಸರಳ ಸುಭಾಷಿತ-ಪರದ್ರವ್ಯೇಷ್ವಭಿಧ್ಯಾನ೦(ತ್ರಿವಿಧ ಮಾನಸ ಪಾಪಗಳು)| SUBHASHITA: PRADRAVYESH WABHIDHYANAM LYRICS

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


परद्र्व्येश्वभिध्यानं मनसानिष्ट चिन्तनम् |

वितथाभिनिवेशश्च त्रिविधं पाप मानसम् ||

 

ಪರದ್ರವ್ಯೇಷ್ವಭಿಧ್ಯಾನ೦ ಮನಸಾನಿಷ್ಟ ಚಿಂತನಂ।

ವಿತಥಾಭಿನಿವೇಶಶ್ಚ ತ್ರಿವಿಧ೦ ಪಾಪ ಮಾನಸಮ್॥

 

ಬೇರೆಯವರ ವಸ್ತುವಿಗೆ ಮನಸ್ಸಿನಲ್ಲೇ ಆಸೆ ಪಡುತ್ತಿರುವುದು, ಬೇರೆಯವರಿಗೆ ಯಾವಾಗಲೂ ಮನಸ್ಸಿನಲ್ಲಿ ಕೆಟ್ಟದ್ದನ್ನೇ ಬಯಸುವುದು ಹಾಗೂ ಬಯಸಿದ ವಸ್ತುವನ್ನು ಪಡೆಯಲು, ಮನಸ್ಸಿನಲ್ಲಿ ಬಯಸಿದ ಕೆಟ್ಟದ್ದನ್ನು ಕಾರ್ಯಗತಗೊಳಿಸಲು ಯಾವಾಗಲೂ ಪ್ರಯತ್ನಿಸುತ್ತಿರುವುದು ಮೂರೂ ಮಾನಸ ಪಾಪಗಳು ಎಂದು ಪರಿಗಣಿಸಲ್ಪಡುತ್ತವೆ.

 

Desire for someone else's things in the mind, always wishing bad things in the mind for someone else and always trying to get the desired object, and always trying to implement the bad things desired in the mind, these three are considered as mental sins.

..............................................................................................................................

Related Topics:

SUBHASHITA: ಕರ್ತಾ ಕಾರಯಿತಾ ಚೈವ(ಸಮಭಾಗಿಗಳು) KARTA KARYITA CHAIVA WITH MEANING IN KANNADA

SUBHASHITA:ಅಕರ್ತವ್ಯಂ ನಕರ್ತವ್ಯಂ(ಕರ್ತವ್ಯವನ್ನು ಹೇಗೆ ಮಾಡಬೇಕು?)| AKARTAVYAM NA KARTAVYAM WITH MEANING

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ |ANTAKANA DOOTARIGE SONG LYRICS

Sep 22, 2022

ಬಸವಣ್ಣನವರ ವಚನಗಳು: ದಯವಿಲ್ಲದ ಧರ್ಮವದಾವುದಯ್ಯ lyrics in Kannada and English

 


ದಯವಿಲ್ಲದ ಧರ್ಮವದಾವುದಯ್ಯ 

ದಯವೇ ಬೇಕು ಸಕಲ ಪ್ರಾಣಿಗಳಲ್ಲಿ

ದಯವೇ ಧರ್ಮದ ಮೂಲವಯ್ಯ

ಕೂಡಲಸಂಗಮನಂತಲ್ಲದೊಲ್ಲನಯ್ಯ||


DAYAVILLADA DHARMAVADAAVUDAYYA

DAYAVE BEKU SAKALA PRAANIGALALLI

DAYAVE DHARMADA MOOLAVAYYA

KOODALASANGAMA NANTALLADOLLANAYYA||


Related Topic:

ಬಸವಣ್ಣನವರ ವಚನ: ಕಳಬೇಡ ಕೊಲಬೇಡ | KALABEDA KOLABEDA |BASAVANNA|KANNADA SAVIGANA LYRICS

Also See:

ಜ್ಞಾನವಿಲ್ಲದೇ ಮೋಕ್ಷವಿಲ್ಲಾ/JNANAVILLADE MOKSHAVILLA song lyrics in kannada


ಸರಳ ಸುಭಾಷಿತ- ಆರಂಭ ಗುರ್ವೀ ಕ್ಷಯಿಣೀ ಕ್ರಮೇಣಾ (ಸಜ್ಜನ -ದುರ್ಜನ ಸ್ನೇಹ ವ್ಯತ್ಯಾಸ)ARAMBHA GURVI KSHAYINI LYRICS AND MEANING

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)

आरम्भ गुर्वी क्षयिणी क्रमॆण लघ्ह्वी पुरा वृद्धिमती पश्चात् |

दिनस्य पूर्वार्ध -परार्ध भिन्ना छायेव मैत्री खल सज्जनानां ||

 

ಆರಂಭ ಗುರ್ವೀ ಕ್ಷಯಿಣೀ ಕ್ರಮೇಣಾ

ಲಘ್ವೀ ಪುರಾ ವೃದ್ಧಿಮತೀ ಪಶ್ಚಾತ್।

ದಿನಸ್ಯ ಪೂರ್ವಾರ್ಧ-ಪರಾರ್ಧ ಭಿನ್ನಾ:

ಛಾಯೇವ ಮೈತ್ರಿ ಖಲ-ಸಜ್ಜನಾನಾಮ್॥

 

ಹೇಗೆ ದಿನದ ಪೂರ್ವಾರ್ಧದಲ್ಲಿ ನೆರಳು ಮೊದಲು ದೊಡ್ಡದಾಗಿದ್ದು ಕ್ರಮೇಣ ಚಿಕ್ಕದಾಗುತ್ತಾ ಹೋಗುತ್ತದೋ ಹಾಗೆಯೇ ದುರ್ಜನರ ಸ್ನೇಹವು ಮೊದಲು ಗಾಢವಾಗಿತ್ತು ನಂತರ ನಿಧಾನವಾಗಿ ಕ್ಷೀಣಿಸುತ್ತಾ ಬರುತ್ತದೆ.  ಆದರೆ ಹೇಗೆ ದಿನದ ಉತ್ತರಾರ್ಧದಲ್ಲಿ ನೆರಳು ಮೊದಲು ಚಿಕ್ಕದಾಗಿದ್ದು ಆಮೇಲೆ ದೊಡ್ಡದಾಗುತ್ತಾ ಹೋಗುತ್ತದೋ ಸಜ್ಜನರ ಮೈತ್ರಿಯೂ  ಮೊದಮೊದಲು ಸ್ವಲ್ಪ ವಿದ್ದರೂ ಆಮೇಲೆ ಗಾಢವಾಗುತ್ತದೆ.

 

Just as the shadow in the first half of the day is first large and gradually becomes smaller, so the friendship of the wicked is first dark and then slowly diminishes.

But as in the latter half of the day the shadow first becomes small and then becomes larger, so the alliance of the gentlemen, though a little at first, then deepens.

.......................................................................................................................................

Related Topics:

SUBHASHITA:ಯಥಾ ಕಂದುಕಪಾತೇನ (ಕಷ್ಟಗಳು ಬಂದಾಗ ಸಜ್ಜನರು Vs ದುರ್ಜನರು )|YATHA KANDUKA PAATENA WITH MEANING

SUBHASHITAS WITH MEANING

Sep 21, 2022

ಸರಳ ಸುಭಾಷಿತ-ನಿಂದಾ ಯ: ಕುರುತೇ ಸಾಧೋ: (ಸಜ್ಜನರ ನಿಂದನೆಯ ಪರಿಣಾಮ) |NINDA YAH KURUTE SADHOHO LYRICS

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


निन्दा यः कुरुते साधोः तथा स्त्वं दूष्यत्यसौ |

खे भूतिं यः क्षिपेदुछै: मूर्ध्नि तस्येव सा पतेत् ||

 

ನಿಂದಾ : ಕುರುತೇ ಸಾಧೋ: ತಥಾ ಸ್ತ್ವ೦ ದೂಷಯತ್ಯಸೌ।

ಖೇ ಭೂತಿ೦ : ಕ್ಷಿಪೇದುಚೈ: ಮೂರ್ಧ್ನಿ ತಸ್ಯೇವ ಸಾ ಪತೇತ್॥

 

ಆಕಾಶಕ್ಕೆ ಅಭಿಮುಖವಾಗಿ ಉಗಿದ ಎಂಜಲು ಹೇಗೆ ಮತ್ತೆ ನಮ್ಮ ಮುಖದ ಮೇಲೇ ಬಂದು ಬೀಳುತ್ತದೋ ಹಾಗೆಯೇ ಸಾಧುಸಂತರಿಗೆ ಮಾಡಿದ ನಿಂದನೆ ದೂಷಣೆಗಳು ಪುನ: ನಮಗೇ ಬಂದು ಸೇರುತ್ತವೆ.

................................................................................................................................................

Related Topics:


Sep 20, 2022

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ AMMA NAANU DEVARANE SONG LYRICS IN KANNADA| LORD KRISHNA SONG

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ||

 

ನೀನೇ ನೋಡು ಬೆಣ್ಣೆ ಗಡಿಗೆ ಸೂರಿನ ನಿಲುವಲ್ಲಿ

ಹೇಗೆ ತಾನೆ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ||1||

  

ಶ್ಯಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ

ಬೆಣ್ಣೆ ಒರೆಸಿದಾ ಕೈಯ ಬೆನ್ನ ಹಿಂದೆ ಮರೆಸುತ್ತಾ||2||

 

ಎತ್ತಿದ ಕೈಯ್ಯ ಕಡಗೋಲನ್ನ ಮೂಲೆಲಿಟ್ಟು ನಕ್ಕಳು ಗೋಪಿ

ಸೂರದಾಸ ಪ್ರಿಯ ಶ್ಯಾಮನ ಮುತ್ತಿಟ್ಟು ನಕ್ಕಳು ಗೋಪಿ||3||

................................................................................................................

Related Topics:

LORD KRISHNA SONGS (ಕೃಷ್ಣನ ಹಾಡುಗಳು)

ಪುರಂದರ ದಾಸರ ಕೀರ್ತನೆಗಳು(PURANDARA DASA SONGS LYRICS)

ಸರಳ ಸುಭಾಷಿತ-ಏಕಂ ಕ್ಷಮವತಾ೦ ದೋಷೋ LYRICS WITH MEANING | SUBHASHITA:EKAM KSHAMAVATAM DOSHO

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


एकं क्षमावतां दॊषो द्वितीयो नोपलभ्यते |

यदेन क्षमयायुक्तं अशक्तं मन्यते जन:||

 

ಏಕಂ ಕ್ಷಮವತಾ೦ ದೋಷೋ ದ್ವಿತೀಯಂ ನೋಪಲಭ್ಯತೆ।

ಯದೇನ ಕ್ಷಮಯಾಯುಕ್ತಮಶಕ್ತ೦ ಮನ್ಯತೇ ಜನಾ:

 

ಕ್ಷಮಾಗುಣದವರ ಒಂದೇ ಒಂದು ದೋಷ (ಎರಡನೆಯದು ಇಲ್ಲ) ವೆಂದರೆ ಅವರ ಕ್ಷಮಾಗುಣವನ್ನೇ ಜನರು ದುರ್ಬಲತೆಯೆಂದು ಭಾವಿಸುತ್ತಾರೆ

...............................................................................................


Sep 19, 2022

ಸರಳ ಸುಭಾಷಿತ-ತಕ್ಷಕಸ್ಯ ವಿಷಂ ದಂತೆ(ದುರ್ಜನರ ಸಹವಾಸ )| TAKSHAKASYA VISHAM DANTE WITH MEANING

 ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


तक्षकस्य विषं दन्ते मश्चिकायाश्च मस्तके |

वृश्चिकस्य विषं पुच्छे सर्वाङ्गे दुर्जनस्य तु ||

 

ತಕ್ಷಕಸ್ಯ ವಿಷಂ ದಂತೆ ಮಕ್ಷಿಕಾಯಾಶ್ಚ ಮಸ್ತಕೇ।

ವೃಶ್ಚಿಕಸ್ಯ ವಿಷ೦ ಪುಚ್ಛೇ ಸರ್ವಾಂಗೇ ದುರ್ಜನಸ್ಯ ತು॥

 

ಹಾವಿನ ವಿಷವು ದಂತದಲ್ಲಿ ಮಾತ್ರ ಇರುತ್ತದೆ . ನೊಣದ ವಿಷವು ತಲೆಯಲ್ಲಿ ಇರುತ್ತದೆ, ಚೇಳಿನಲ್ಲಿ ವಿಷವು ಬಾಲದಲ್ಲಿ ಮಾತ್ರ ಇರುತ್ತದೆ. ಆದರೆ ದುರ್ಜನರ ದೇಹವೆಲ್ಲಾ ವಿಷವು ತುಂಬಿರುತ್ತದೆ. ಅವರು ಆಡುವ ಮಾತು,ಕೇಳುವ ವಿಷಯಗಳು,ನೋಡುವ ವಿಷಯಗಳು ಕೂಡ ಕೆಟ್ಟದಾಗಿರುತ್ತವೆ. ದುರ್ಜನರ ಸಹವಾಸವೇ ವಿಷದಂತೆ.

 

Snake venom is only in the tusks. The venom of a fly is in the head, while the venom of a scorpion is only in the tail. But the whole body of the wicked is full of poison. The words they play, the things they hear, the things they see are also bad. The association of bad people is like poison.

..................................................................................................................................................

ALSO SEE:

ಅಂಬುಜ ವಾಸಿನಿ ಸುಂದರಿ ವಾಣಿ -ಸಾಹಿತ್ಯ |Ambuja vasini Sundari Vani | Lyrics in Kannada and English

Sep 17, 2022

ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ-LYRICS IN KANNADA |PATARAGITTI PAKKA LYRICS

 

ಹಾಡಲು ಕಲಿಯಿರಿ(CLICK HERE TO LEARN THIS SONG)


ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ

ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ

ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಶಿಣ ಹಚ್ಚಿ

ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಶಿಣ ಹಚ್ಚಿ||

 

ಎನೋ ಬಣ್ಣ ಬಣ್ಣ ನಡುವೇ ನವಿಲಗಣ್ಣಾ

ಎನೋ ಬಣ್ಣ ಬಣ್ಣ ನಡುವೇ ನವಿಲಗಣ್ಣಾ

ರೇಶಿಮೆ ಪಕ್ಕ ನಯ ಮುಟ್ಟಲಾರೆ ಭಯ

ರೇಶಿಮೆ ಪಕ್ಕ ನಯ ಮುಟ್ಟಲಾರೆ ಭಯ||1||

 

ಹೂವಿನ ಪಕಳಿಗಿಂತ ತಿಳಿವು ತಿಳಿವು ಅಂತ

ಹೂವಿನ ಪಕಳಿಗಿಂತ ತಿಳಿವು ತಿಳಿವು ಅಂತ

ಹೂವಿಗೆ ಹೋಗತಾವ ಗಲ್ಲಾ ತಿವೀತಾವ

ಹೂವಿಗೆ ಹೋಗತಾವ ಗಲ್ಲಾ ತಿವೀತಾವ||2||

 

ಬನ ಬನದಾಗ ಆಡಿ ಪಕ್ಕಾ ಹುಡಿ ಹುಡಿ

ಬನ ಬನದಾಗ ಆಡಿ ಪಕ್ಕಾ ಹುಡಿ ಹುಡಿ

ಹುಲ್ಲುಗಾವಲುದಾಗ ಹಳ್ಳಿ ಹುಡುಗಿ ಹಂಗಾ

ಹುಲ್ಲುಗಾವಲುದಾಗ ಹಳ್ಳಿ ಹುಡುಗಿ ಹಂಗಾ||3||

 

ಕಾಣದೆಲ್ಲೋ ಮೂಡಿ ಬಂದೂ ಗಾಳಿಗೂಡಿ

ಕಾಣದೆಲ್ಲೋ ಮೂಡಿ ಬಂದೂ ಗಾಳಿಗೂಡಿ

ಇನ್ನು ಎಲ್ಲಿಗೋಟ ನಂದನದ ತೋಟ

ಇನ್ನು ಎಲ್ಲಿಗೋಟ ನಂದನದ ತೋಟ||4||


Sep 16, 2022

SUBHASHITA:ಶೋಚಂತಿ ಜಾಮಯೋ ಯತ್ರ (ಸ್ತ್ರ್ರೀ-ಕುಲ ಸಂಬಂಧ) LYRICS WITH MEANING| SHOCHANTI JAAMAYO YATRA

ಹಾಡಲು ಕಲಿಯಿರಿ(CLICK HERE TO LEARN THIS SUBHASHITA) 


शोचन्ति जामयॊयत्र विनश्यत्याशु तत्  कुलम् |

शोचन्ति तु यत्रैता वर्धते तद्धि सर्वदा ||

 

ಶೋಚಂತಿ ಜಾಮಯೋ ಯತ್ರ ವಿನಶ್ಯ ತ್ಯಾಶು ತತ್ ಕುಲಮ್।

ಶೋಚಂತಿ ತು ಯತ್ರೈತಾ ವರ್ಧತೇ ತದ್ಧಿ ಸರ್ವದಾ॥

 

ಎಲ್ಲಿ ಮಾನವಂತ ಸ್ತ್ರೀಯು ಯಾವಾಗಲೂ ದುಃಖಿಸುತ್ತಾಳೋ ಅಂತಹ ಒಲವು ಕುಲವು ವೇಗವಾಗಿ ನಾಶವನ್ನು ಹೊಂದುತ್ತದೆ. ಎಲ್ಲಿ ಸ್ತ್ರೀಯು ಸಂತೋಷವಾಗಿರುತ್ತಾಳೋ ಕುಲವು ಯಾವಾಗಲೂ ವರ್ಧಿಸುತ್ತದೆ


Sep 15, 2022

SUBHASHITA:ಯಸ್ಯ ಬುದ್ಧಿರ್ಬಲಂ ತಸ್ಯ (ಶಕ್ತಿಗಿಂತ ಯುಕ್ತಿ ಮೇಲು)|SUBHASHITA ON INTELEGENCE

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA) 


यस्य बुद्धिर्बलं तस्य निर्बुद्धेस्तु कुतो बलम् |

वने सिंहो मदोन्मत्तः शशकेन निपातितः ||


ಯಸ್ಯ ಬುದ್ಧಿರ್ಬಲಂ ತಸ್ಯ ನಿರ್ಬುದ್ಧೇಸ್ತು ಕುತೋ ಬಲಂ।

 ವನೇ ಸಿಂಹೋ ಮದೋನ್ಮತ್ತ: ಶಶಕೇನ ನಿಪಾತಿತ:

 

ಬುದ್ಧಿಶಕ್ತಿಯು ದೇಹ ಶಕ್ತಿಗಿಂತ ಶ್ರೇಷ್ಠವಾದುದು ಹೇಗೆಂದರೆ ವನದಲ್ಲಿ ತನ್ನ ದೇಹ ಶಕ್ತಿಯಿಂದ ಮದೋನ್ಮತ್ತನಾಗಿದ್ದ ಸಿಂಹವು ಸಣ್ಣ ಪ್ರಾಣಿಯಾದ ಮೊಲದ ಬುದ್ಧಿಶಕ್ತಿಯಿಂದ ನಾಶವನ್ನು ಹೊಂದಿತು.

 

Intellect is superior to physical strength, as in the forest a lion, intoxicated by his physical strength, was destroyed by the intelligence of a small animal, the rabbit.

.........................................................................................................................


Sep 14, 2022

SUBHASHITA: ಯಥಾ ಹಿ ಮಲಿನೈ: ವಸ್ತ್ರೈ: |YATHA HI MALINAI HI VASTRAI HI SUBHASHITA

 

ಹಾಡಲು ಕಲಿಯಿರಿ(CLICK HERE TO LEARN THIS SUBHASHITA)


यथा हि मलिनैः वस्त्रैः यत्र कुत्रोपविष्यते |

व्र्त्ततः  चलितोपि एवं शेषं व्रतं रक्षति ||

 

ಯಥಾ ಹಿ ಮಲಿನೈ: ವಸ್ತ್ರೈ: ಯತ್ರ ಕುತ್ರೋಪವಿಶ್ಯತಿ।

ವೃತ್ತತ: ಚಲಿತೋಪಿ ಏವ೦ ಶೇಷ೦ ವೃತ೦ ರಕ್ಷತಿ॥

 

ಹೇಗೆ ಮಲಿನವಾದ ಬಟ್ಟೆಯನ್ನುಟ್ಟಾಗ ಎಲ್ಲೆಂದರಲ್ಲಿ ಕೂರಲು ಹಿಂಜರಿಯುವುದಿಲ್ಲವೋ ಹಾಗೆಯೇ ಒಮ್ಮೆ ಒಂದು ಒಳ್ಳೆಯ ನಡತೆಯ ಸದಾಚಾರದ ವೃತ್ತವನ್ನು ದಾಟಿ ಹೊರಗೆ ಬಂದರೆ ಮತ್ತೆ ಆ ಸದಾಚಾರವನ್ನು ಪಾಲಿಸುವುದು ತುಂಬಾ ಕಷ್ಟ. ಪಾಪಗಳನ್ನು ಮಾಡಲು ಮನಸ್ಸು ಹಿಂಜರಿಯುವುದಿಲ್ಲ

 

             Just as when one wears dirty clothes one does not hesitate to sit anywhere, once one has crossed the circle of righteousness of good behavior and comes out, it is very difficult to follow that righteousness again. The mind does not hesitate to commit sins

..............................................................................................................